Deepika padukone
ಬಾಲಿವುಡ್ ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ
ಸೂಪರ್ ಹಿಟ್ ಸಿನಿಮಾಗಳಾದ ರಾಮ್-ಲೀಲಾ, ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್ ಸಿನಿಮಾಗಳಲ್ಲಿ ದೀಪಿಕಾ ನಾಯಕಿಯಾಗಿ ನಟಿಸಿದ್ದಾರೆ.
ಈ ಸಿನಿಮಾಗಳು ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿ ಮಾಡಿವೆ.
ಇದೀಗ ಮತ್ತೆ ಡಿಪ್ಪಿ ಮತ್ತೆ ಬನ್ಸಾಲಿ ಕಾಂಬಿನೇಷನ್ ನಲ್ಲಿ ಮತ್ತೆ ಹೊಸ ಚಿತ್ರ ತಯಾರಾಗಲಿದೆ.
ಬನ್ಸಾಲಿ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ದೀಪಿಕಾ ನಾಯಕಿಯಾಗಿ ಮಿಂಚಲಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ‘ಬೈಜು ಬಾವ್ರಾ’ ಎನ್ನುವ ಸಿನಿಮಾ ಅನೌನ್ಸ್ ಮಾಡಿದ್ದಾರೆ.
ಈ ಚಿತ್ರದಲ್ಲಿ ದೀಪಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ರಣಬೀರ್ ಕಪೂರ್ ನಟಿಸುತ್ತಿದ್ದಾರೆ.
ಶಾರೂಖ್ – ಕಾಜೋಲ್ ಜೋಡಿಯ ಸೂಪರ್ ಹಿಟ್ ಸಿನಿಮಾ ‘ಆಆಐಎ’ ರೀ ರಿಲೀಸ್..!
ನಟಿ ದೀಪಿಕಾ ಜೊತೆಗೆ ಮತ್ತೋರ್ವ ಖ್ಯಾತ ನಟಿಯಾದ ಅಲಿಯಾ ಭಟ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಮೂಲಕ ದೀಪಿಕಾ ಹಾಗೂ ಆಲಿಯಾ ಭಟ್ ಮೊದಲ ಬಾರಿ ಸಿನಿಮಾವೊಂದರಲ್ಲಿ ಒಟ್ಟಾಗಿ ನಟಿಸಿದಂತಾಗುತ್ತೆ.
‘ಬೈಜು ಬಾವ್ರಾ’ ಮೊಘಲ್ ಚಕ್ರವರ್ತಿ ಅಕ್ಬರ್ ಕಾಲದಲ್ಲಿದ್ದ ದ್ರುಪದ ಶೈಲಿಯ ಸಂಗೀತಗಾರ ಬೈಜುನಾಥ್ ಬಾವ್ರಾ ಎಂಬ ಪ್ರತಿಭಾವಂತನ ಜೀವನದ ಕಥೆ.
ಬೈಜುನಾಥ್ ಪಾತ್ರದಲ್ಲಿ ನಟ ರಣಬೀರ್ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಮೊದಲು ಹೃತಿಕ್ ರೋಷನ್ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು.
ಆದರೀಗ ರಣಬೀರ್ ಕಪೂರ್ ನಟಿಸುವುದು ಬಹುತೇಕ ಖಚಿತವಾಗಿದೆ.
ಬೈಜು ಬಾವ್ರಾ ಸಿನಿಮಾ ಈಗಾಗಲೇ ಹಿಂದಿಯಲ್ಲಿ ತೆರೆಗೆ ಬಂದಿದೆ.
1952ರಲ್ಲಿ ಭರತ್ ಭೂಷಣ್ ಮತ್ತು ಮೀನಾ ಕುಮಾರಿ ಅಭಿನಯದ ಬೈಜು ಬಾವ್ರಾ ಎಂಬ ಚಿತ್ರ ಬಂದಿತ್ತು.
ಈಗ ಅದೇ ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ರಿಮೇಕ್ ಮಾಡುತ್ತಿದ್ದಾರೆ.
Deepika padukone
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







