ಬೆಳಗಾವಿ : ಪ್ರತಿಪಕ್ಷ ನಾಯಕ (siddaramaih)ಸಿದ್ದರಾಮಯ್ಯ ಬೆಂಗಳೂರಿನಿಂದ ಬಾದಾಮಿಗೆ ತೆರಳುವ ಅವಸರದಲ್ಲಿ ಮನೆಯಲ್ಲಿದ್ದ ಇನ್ಸುಲಿನ್ ಅನ್ನೇ ಮರೆತು ಬಂದಿದ್ದು, ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇನ್ಸುಲಿನ್ಗಾಗಿ ಕಾದು ಕುಳಿತುಕೊಳ್ಳುವಂತಾಯಿತು. ಮಧುಮೇಹಕ್ಕೆ ತೆಗೆದುಕೊಳ್ಳುವ ಇನ್ಸುಲಿನ್ ಮರೆತು ಬಂದು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಒಂದು ಗಂಟೆ ಕಾಲ ಕಾದು ಕುಳಿತಿದ್ದರು.

ಬಾದಾಮಿಯಲ್ಲಿ ಉಂಟಾಗಿರುವ ನೆರೆ ಹಾವಳಿ ವೀಕ್ಷಿಸಲು ಬೆಂಗಳೂರಿನಿಂದ ವಿಮಾನದಲ್ಲಿ ಬೆಳಗಾವಿಗೆ ಆಗಮಿಸಿದ್ದರು. ಇಲ್ಲಿಂದ ರಸ್ತೆ ಮೂಲಕ ಬಾದಾಮಿಗೆ ತೆರಳಬೇಕಿತ್ತು. ಆದರೆ ಬೆಂಗಳೂರಿನಿಂದ ಬರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಇನ್ಸುಲಿನ್ ತೆಗೆದುಕೊಳ್ಳುವುದನ್ನು ಮರೆತು ಬಂದಿದ್ದಾರೆ. ಇದರಿಂದಾಗಿಒಂದು ಗಂಟೆಗೂ ಅಧಿಕ ಕಾಲ ಸಾಂಬ್ರಾ ವಿಮಾನ ನಿಲ್ದಾಣದಲ್ಲೇ ಕಾಲ ಕಳೆಯುವಂತಾಯಿತು..
ಡಿಸಿಎಂ ಗೋವಿಂದ ಕಾರಜೋಳ ಕುಟುಂಬದ ಒಟ್ಟು 8 ಮಂದಿಗೆ ಕೊರೊನಾ ಪಾಸಿಟಿವ್
ಬೆಂಗಳೂರಿನಿಂದ ಬೆಳಗ್ಗೆ 8.30ಕ್ಕೆ ಹೊರಟ ಸಿದ್ದರಾಮಯ್ಯ ಅವರು ತಮ್ಮ ಲಗೇಜ್ ಜತೆ ಇನ್ಸುಲಿನ್ ತರುವುದನ್ನು ಮರೆತಿದ್ದಾರೆ. ವಿಮಾನ ಇಳಿದಾಗ ಸುಮಾರು 9.30 ಗಂಟೆಯಾಗಿತ್ತು. ಇನ್ಸುಲಿನ್ ತೆಗೆದುಕೊಳ್ಳದೆ ಇದ್ದರೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇತ್ತು. ಹಾಗಾಗಿ ಇನ್ಸುಲಿನ್ಗಾಲಗಿ ಪರದಾಡಿದರು. ಕಾಂಗ್ರೆಸ್ನಂ ಮಾಜಿ ಶಾಸಕ ಪಿ.ಎಂ.ಅಶೋಕ್ ಅವರು ತಮ್ಮ ಬೆಂಬಲಿಗರನ್ನು ಕಳುಹಿಸಿ ಬೆಳಗಾವಿ ನಗರದಿಂದ ಇನ್ಸುಲಿನ್ ತರಿಸಿಕೊಟ್ಟರು. ಅದನ್ನು ತೆಗೆದುಕೊಂಡ ಬಳಿಕ ರಸ್ತೆ ಮೂಲಕ ಬೆಳಗಾವಿಗೆ ತೆರಳಿದರು.
ಈ ಕುರಿತು ಮಾಹಿತಿ ನೀಡಿದ ರಾಮದುರ್ಗದ ಮಾಜಿ ಶಾಸಕ ಅಶೋಕ ಪಟ್ಟಣ ಅವರು, ಮಧುಮೇಹ ಕಾಯಿಲೆಗಾಗಿ ಸಿದ್ದರಾಮಯ್ಯ ಅವರು ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರು. ಆದರೆ ಬೆಂಗಳೂರಿನಿಂದ ಬರುವಾಗ ಇನ್ಸುಲಿನ್ ಮರೆತು ಬಂದಿದ್ದಾರೆ. ಅವರು ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದರು.
siddaramaih
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








