ನಮ್ಮ ಸಾಕ್ಷಾ ಟಿವಿಯಲ್ಲಿ “ನಾವು ಕೇಳದ ಚರಿತ್ರೆ” ಕಾಲಂ ಬರೆಯುವ ಅಜಯ್ ಕುಮಾರ್ ಶರ್ಮಾ ಅವರ ಸಣ್ಣ ಪರಿಚಯ Saakshatv Naavu kelada charitre episode
ಅಜಯ್ ಕುಮಾರ್ ಶರ್ಮಾ ಬಿ ಎಸ್ [B.E, Msc (REV), MIE, FIV] Saakshatv Naavu kelada charitre episode

ಅಜಯ್ ಶರ್ಮಾ ಅವರು ಇಂಜಿನಿಯರಿಂಗ್ ಪದವೀಧರರು ಆಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಚಾರ್ಟರ್ಡ್ ಇಂಜಿನಿಯರ್ ಹಾಗು ಬ್ಯಾಂಕ್ ಮೌಲ್ಯಮಾಪಕರಾಗಿ ಸೇವೆ ಸಲ್ಲಿಸುತಿದ್ದಾರೆ.
ಇವರು ಇತಿಹಾಸ, ಹೆರಿಟೇಜ್ ಮತ್ತು ಆರ್ಕಿಯಾಲಜಿ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದು ಕಳೆದ ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಮುಖ್ಯ ಆಸಕ್ತಿಯು ಕೆಳದಿ ನಾಯಕರ ಇತಿಹಾಸ, ಕೋಟೆ ಮತ್ತು ಅದರ ವಾಸ್ತುಶಿಲ್ಪ ಹಾಗು ಆಧುನಿಕ ಇತಿಹಾಸ.
ಇವರು 2017- 2018 ರ ಸಾಲಿನಲ್ಲಿ ರಾಜ್ಯ ಪುರಾತತ್ವ ಇಲಾಖೆ, ಮೈಸೂರು ಇವರ ಜೊತೆ ಸೇರಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಹಸೀಲ್ದಾರ್, ಪಿಡಿಓ, ಆರ್ ಐ, ವಿಎ ಗಳಿಗೆ ಇತಿಹಾಸ, ಪುರಾತತ್ತ್ವ ಶಾಸ್ತ್ರ ಮತ್ತು ಖಜಾನೆ ಕಾಯಿದೆ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗಿಯಾಗಿರುತ್ತಾರೆ. ಇವರು ತಮ್ಮ ಸಂಸ್ಥೆಯಾದ ಶಿವಮೊಗ್ಗ ಹೆರಿಟೇಜ್ ವಾಕ್ಸ್ ಮೂಲಕ ಶಿವಮೊಗ್ಗ ಜಿಲ್ಲೆಯ ವಿವಿಧ ಐತಿಹಾಸಿಕ ಪ್ರದೇಶಗಳಿಗೆ ಶಾಲೆ ಮಕ್ಕಳನ್ನು ಕರೆದುಕೊಂಡು ಹೋಗಿ ಆ ಕ್ಷೇತ್ರದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಇವರು ಸದ್ಯಕ್ಕೆ ಶಿವಮೊಗ್ಗ ಜಿಲ್ಲೆಯಾ ಹಲವಾರು ಕೋಟೆಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದು ಇದರಲ್ಲಿ ಪ್ರಮುಖವಾಗಿ ಸ್ಥಳೀಯ ಶಿವಮೊಗ್ಗೆಯ ಕೋಟೆಯು ಇರುತ್ತದೆ. ಇವರು ಶಿವಮೊಗ್ಗದ ಎಲ್ಲಾ ಪರಂಪರೆ ಕಟ್ಟಡಗಳ ಬಗ್ಗೆ ಸಂಶೋಧನೆ ಮಾಡಿದ್ದಾರೆ ಮತ್ತು ಅದರ ಸಂರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಇವರು ಹಲವಾರು ಪ್ರತಿಷ್ಠಿತ ಇತಿಹಾಸದ ಸೆಮಿನಾರ್ ಗಳಲ್ಲಿ ತಮ್ಮ ವಿಷಯವನ್ನು ಮಂಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








