Director Prem
ಪ್ರಸ್ತುತ ಏಕ್ ಲವ್ ಯಾ ಸಿನಿಮಾದ ಶೂಟಿಂಗ್ ಗಾಗಿ ಊಟಿಯಲ್ಲಿರುವ ನಿರ್ದೇಶಕ ಪ್ರೇಮ್ ಅವರಿಗೆ ಇಂದು ಬರ್ತ್ ಡೇ ಸಂಭ್ರಮ. ಊಟಿಯಲ್ಲಿರುವ ಪ್ರೇಮ್ ಚಿತ್ರತಂಡದ ಜೊತೆಯಲ್ಲಿ ಬರ್ತಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದಾರೆ. ಪ್ರೇಮ್ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾ ಘೋಷಣೆಯಾಗಿದೆ.
ಅಂದ್ಹಾಗೆ ಪ್ರೇಮ್ ನಾಯಕನಟನಾಗಿ ಕಾಣಿಸಿಕೊಳ್ತಾಯಿರುವ ಈ ಹೊಸ ಸಿನಿಮಾಗೆ ಪ್ರೇಮ್ ಡೈರೆಕ್ಷನ್ ಇರೋದಿಲ್ಲ. ಹೆಚ್ ವಿಜಯ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಎಸ್.ಆರ್ ಪ್ರೊಡಕ್ಷನ್ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ ಜೋಗಿ ಪ್ರೇಮ್ ನಾಯಕನಾಗಿ ಆಯ್ಕೆಯಾಗಿದ್ದಾರೆ
ಅಧಿಕೃತವಾಗಿ ಈ ಪ್ರಾಜೆಕ್ಟ್ ಘೋಷಣೆಯಾಗಿದೆ. ಈ ಸಿನಿಮಾಗೆ ಈವರೆಗೂ ಟೈಟಲ್ ಫಿಕ್ಸ್ ಆಗಿಲ್ಲ. ಅಕ್ಷಯ್ ಸಮರ್ಥ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮತ್ತೊಂದೆಡೆ ಪ್ರೇಮ್ ಅವರು ನಿರ್ದೇಶನದ ಜೊತೆ ಜೊತೆಗೆ ಗಾಂಧಿಗಿರಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇನ್ನು ಮುಗಿದಿಲ್ಲ. ಇತ್ತ ಪ್ರೇಮ್ ನಾಯಕತ್ವದ ಮತ್ತೊಂದು ಸಿನಿಮಾವೂ ಅನೌನ್ಸ್ ಆಗಿದ್ದು, ಈ ಚಿತ್ರಕ್ಕೆ ” ಐ ಆಮ್ ಕಲ್ಕಿ” ಎಂಬ ಶೀರ್ಷಿಕೆಯಿಡಲಾಗಿದೆ. ಹೀಗೆ ಪ್ರೇಮ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟನೆ ನಿರ್ದೇಶನ ಅಂತ ಬ್ಯುಸಿಯಾಗಿದ್ದಾರೆ. ಅವರ ಜನ್ಮದಿನದ ಸಂತಸದ ಜೊತೆಗೆ ಹೊಸ ಸಿನಿಮಾಗಳ ಗೋಷಣೆ ಅಭಿಮಾನಿಗಳ ಸಂತಸವನ್ನ ದುಪ್ಪಟ್ಟಾಗಿಸಿದೆ.
ಜೂ. ಚಿರು ಆಗಮನ : ಧ್ರುವ ಸರ್ಜಾ ಮೊದಲ ಪ್ರತಿಕ್ರಿಯೆ
Director Prem
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel