ಬೆಂಗಳೂರು: ಪ್ರತಿಯೊಂದು ಹಬ್ಬಗಳು ಬಂದಾಗಲೂ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟುವುದು ಸಾಮಾನ್ಯ. ಲಾಕ್‍ಡೌನ್ ಹಾಗೂ ಹೆಮ್ಮಾರಿ ಕೊರೊನಾ ಹೊಡೆತದಿಂದ ಜನತೆ ನಲುಗಿ ಹೋಗಿದ್ದಾರೆ. ಇದರ ನಡುವೆಯೂ ಈ ಬಾರಿಯ ದಸರಾಹಬ್ಬ ಆಚರಣೆಗೆ ಜನರ ಖರೀದಿಯ ಉತ್ಸಾಹ ಕುಗ್ಗಿದ ವಾತಾವರಣ ಕಂಡು ಬಂದಿಲ್ಲ.

ಕಳೆದ ಎರಡು ವಾರಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಈರುಳ್ಳಿ ಸೇರಿದಂತೆ ರೈತರು ಬೆಳೆದ ತರಕಾರಿ ನೀರುಪಾಲಾಗಿದೆ. ಹೀಗಾಗಿ ತರಕಾರಿ ಹಾಗೂ ಹೂವು-ಹಣ್ಣುಗಳ ಬೆಲೆ ಗಗನಕ್ಕೇರಿದೆ. ಆದರೂ, ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಸೇರಿದಂತೆ ರಾಜ್ಯಾದ್ಯಂತ ಮಾರುಕಟ್ಟೆಗಳಲ್ಲಿ ದಸರಾಹಬ್ಬ ಆಚರಣೆಗೆ ಖರೀದಿ ಭರಾಟೆ ಜೋರಾಗಿದೆ.

ಈ ಬಾರಿಯ ದಸರಾ ಕೊಂಚ ದುಬಾರಿಯಾದ್ರೂ ಜನರ ಉತ್ಸಾಹ ಮಾತ್ರ ಕುಗ್ಗಿಲ್ಲ. ಆದರೆ, ಹಬ್ಬದ ಖರೀದಿ ಭರಾಟೆಯಲ್ಲಿ ಮಾಸ್ಕ್, ಸಾಮಾಜಿಕ ಅಂತರವನ್ನೇ ಜನರು ಮರೆತಂತೆ ಕಂಡು ಬರುತ್ತಿದೆ.
ಹಬ್ಬದ ಖುಷಿಗೆ ಬೆಲೆ ಏರಿಕೆಯ ಶಾಕ್..!
ದಸರಾ ಹಬ್ಬದ ಸಡಗರ ಒಂದೆಡೆಯಾದರೆ ಹೂವು, ಹಣ್ಣು, ಪೂಜಾ ಸಾಮಗ್ರಿ ದರ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಹೂವುಗಳ ಬೆಲೆಯಂತೂ ಗಗನಕ್ಕೇರಿದೆ.
ಮಾರುಕಟ್ಟೆಗಳಲ್ಲಿ ಹೂವಿನ ಬೆಲೆ
ಹೂವು ಹಿಂದಿನ ದರ(ಕೆ.ಜಿಗೆ) ಈಗಿನ ದರ(ಕೆ.ಜಿಗೆ)
ಕನಕಾಂಬರ 600ರೂ. 1500ರೂ.
ದುಂಡುಮಲ್ಲಿಗೆ 400ರೂ. 1000ರೂ.
ಕಾಕಡ 200ರೂ. 500ರೂ.
ಜಾಜಿ ಮಲ್ಲಿಗೆ 150ರೂ. 200ರೂ.
ಸೇವಂತಿಗೆ 60ರೂ. 150ರೂ.
ಸುಗಂಧರಾಜ 100ರೂ. 300ರೂ.
ಗುಲಾಬಿ 150ರೂ. 200ರೂ.
ತುಳಸಿ 50ರೂ(ಒಂದು ಮಾರು)
ಮಾವಿನ ಎಲೆ 40ರೂ(ಒಂದು ಕಟ್ಟಿಗೆ)
ಹಣ್ಣುಗಳ ಬೆಲೆ….
ಹಣ್ಣುಗಳ ವಿಧ ಹಿಂದಿನ ಬೆಲೆ ಈಗಿನ ಬೆಲೆ
ಸೇಬುಹಣ್ಣು 80ರೂ. 120ರೂ.
ಕಿತ್ತಳೆ 60ರೂ. 80ರೂ.
ಮೋಸಂಬಿ 70ರೂ. 100ರೂ.
ಬಾಳೆಹಣ್ಣು 50ರೂ. 80ರೂ.
ಅನಾನಸ್ 30ರೂ. 60ರೂ.
ದ್ರಾಕ್ಷಿ 90ರೂ. 120ರೂ.
ದಾಳಿಂಬೆ 80ರೂ. 100ರೂ.
ದಸರಾ ಹಬ್ಬ ಎಂದರೆ ಖಾಹನ ಹಾಗೂ ಅಂಗಡಿ, ಕಚೇರಿಗಳಿಗೆ ಪೂಜೆ ಮಾಡಿ ಬೂದುಗುಂಬಳದಿಂದ ದೃಷ್ಟಿ ತೆಗೆಯುವುದು ಸಾಮಾನ್ಯ. ಈ ಬಾರಿ ಬೂದುಕುಂಬಳ ಕಾಯಿಯ ಬೆಲೆಯೂ ದುಪ್ಪಟ್ಟು ಆಗಿದ್ದು, ಕೆ.ಜಿಗೆ 100ರೂ ಆಗಿದ್ದರೆ, ಬಾಳೆಕಂಬ ಒಂದು ಜೊತೆಗೆ 50 ರಿಂದ 70ರೂ ಆಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








