haripriya
ರಾಜ್ಯಾದ್ಯಂತ ನವರಾತ್ರಿಯ ಸಂಭ್ರಮ ಮನೆ ಮಾಡಿದೆ. ಮೈಸೂರಿನಲ್ಲಿ ದಸರಾ ಉತ್ಸವ ಜೋರಾಗಿಯೇ ಇದೆ. ಚಾಮುಂಡಿ ಬೆಟ್ಟದಲ್ಲಿ ಜನರು ತಂಡೋಪತಂಡವಾಗಿ ಭೇಟಿ ನೀಡಿ ತಾಯಿಯ ದರ್ಶನ ಪಡೆಯುತ್ತಿದ್ದಾರೆ. ಅದರಂತೆ ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ.
ನಟಿ ಹರಿಪ್ರಿಯಾ ಅವರ ಸತೀಶ ನೀನಾಸಂಗೆ ಜೋಡಿಯಾಗಿ ಪೆಟ್ರೋಮ್ಯಾಕ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಇದೇ ಚಿತ್ರದ ಚಿತ್ರೀಕರಣದಲ್ಲಿ ಮೈಸೂರಿನಲ್ಲಿ ಬಿಸಿಯಾಗಿದ್ದಾರೆ ನಟಿ ಹರಿಪ್ರಿಯಾ.
ಶೂಟಿಂಗ್ ಟೈಮಿನಲ್ಲಿ ಬಿಡುವು ಮಾಡಿಕೊಂಡು ನಟಿ ಹರಿಪ್ರಿಯಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅಲ್ಲದೇ ಇದನ್ನ ಸಾಮಾಜಿಕ ಜಾಲತಾಣದಲ್ಲಿ ನಟಿ ಹರಿಪ್ರಿಯಾ ಅವರು ಹಂಚಿಕೊಂಡಿದ್ದಾರೆ. ಸದ್ಯ ನಟಿ ಹರಿಪ್ರಿಯಾ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬಿಸಿಯಾಗಿದ್ದಾರೆ.
haripriya
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








