ಚಿಕ್ಕೋಡಿ : ದಿವಂಗತ ಸುರೇಶ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಟ್ಟರೇ ಸ್ಪರ್ಧಿಸಲು ಸಿದ್ಧ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹೊಸ ಬಾಂಬ್ ಸಿಡಿಸಿದ್ದಾರೆ.
ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರೇಶ ಅಂಗಡಿ ಬಿಜೆಪಿಯಲ್ಲಿ ಇದ್ದಾಗ ನಾನು ಕಾಂಗ್ರೆಸ್ ನಲ್ಲಿ ಇದ್ದೇನೆ. ಆದರೆ ಇಬ್ಬರೂ ನಾವು ಗಳಸ್ಯ ಕಂಟಸ್ಯ ಸ್ನೇಹಿತರು.
ಇಂದು ಸ್ನೇಹಿತ ನಮ್ಮ ಜೊತೆ ಇಲ್ಲದೇ ಇರುವುದು ದುಃಖದ ಸಂಗತಿ. ಬೆಳಗಾವಿ ಲೋಕಸಭಾ ಚುನಾವಣಾ ಉಪಚುನಾವಣೆಯಲ್ಲಿ ದಿ. ಸುರೇಶ ಅಂಗಡಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಿದರೆ ನಾನು ಯಾವ ಪಕ್ಷದಿಂದಲೂ ಟಿಕೆಟ್ ಕೇಳುದಿಲ್ಲ.
ಇದನ್ನೂ ಓದಿ : ಉತ್ತರ ಕರ್ನಾಟಕದ ನಾಯಕರನ್ನು ಸಿಎಂ ಮಾಡಲಿ : ಕೆ.ಬಿ.ಕೋಳಿವಾಡ
ಅಂಗಡಿ ಕುಟುಂಬ ಹೊರತು ಪಡಿಸಿ ಟಿಕೆಟ್ ನೀಡಿದರೆ ನಾನು ಸ್ಪರ್ಧಿಸಲು ಸಿದ್ದನಿದ್ದೇನೆ. ಕಾಂಗ್ರೆಸ್ ಅಥವಾ ಬಿಜೆಪಿ ಯಾರೇ ಟಿಕೆಟ್ ಕೊಟ್ಟರೂ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದಾರೆ.
ಬೆಳಗಾವಿ ಲೋಕಸಭೆ ಕ್ಷೇತ್ರ ನನಗೇನೂ ಹೊಸದೇನಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾಗಿ, ವಿಧಾನ ಪರಿಷತ್ ಸದಸ್ಯನಾಗಿ ಸಾಕಷ್ಟು ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ.
ಬಿಜೆಪಿಯಿಂದ ದಿ.ಸುರೇಶ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದರೆ ನಾನೇ ಜವಾಬ್ದಾರಿ ಹೊತ್ತುಕೊಂಡು ಗೆಲುವಿಗೆ ಶ್ರಮೀಸುತ್ತೇನೆ ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ : ಮುಂದುವರಿದ `ಧಮ್ ವಾಗ್ಯುದ್ಧ’ : ಅಶ್ವಥ್ ನಾರಾಯಣ್ ಗೆ ಸಿದ್ದು ಸವಾಲ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel