ಕೊರೊನಾ ಎಫೆಕ್ಟ್ ನಿಂದ ಇಡಿ ದೇಶವೇ ತತ್ತರಿಸಿದೆ. ಕೊರೊನಾ ಹರಡದಂತೆ ತಡೆಯಲು ರಾಜ್ಯ ಸರ್ಕಾರ ಮಾರ್ಚ್ 31 ರವರೆಗೂ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿತ್ತು. ಆದ್ದರಿಂದ ಸಿನಿಮಾ ಥಿಯೇಟರ್, ಪಬ್, ನೈಟ್ ಕ್ಲಬ್, ಮಾಲ್ ಗಳನ್ನು ಬಂದ್ ಮಾಡಲಾಗಿದೆ.ಕೊರೊನಾ ಎಫೆಕ್ಟ್ ನಿಂದಾಗಿ ಯುಗಾದಿ ಹಬ್ಬದ ಶಾಪಿಂಗ್ ಗೆ ತಡೆ ಉಂಟಾಗಿದೆ. ಹೌದು ಕೊರೊನಾ ಹರಡುವಿಕೆ ಹೆಚ್ಚಾಗಿರುವ ಕಾರಣಕ್ಕಾಗಿ ಮುಂಜಾಗ್ರತೆ ವಹಿಸಿದ ಬಟ್ಟೆ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ನಾಲ್ಕು ದಿನ ಬಂದ್ ಮಾಡಲು ಮುಂದಾಗಿದ್ದಾರೆ.
ಬೆಂಗಳೂರು ಹೋಲ್ಸೇಲ್ ಬಟ್ಟೆ ವ್ಯಾಪಾರಿಗಳ ಸಂಘ ಮಾರ್ಚ್ 22 ರಿಂದ 25ರವರೆಗೂ ಚಿಕ್ಕಪೇಟೆಯ ಬಟ್ಟೆ ಅಂಗಡಿಗಳನ್ನು ಬಂದ್ ಮಾಡುವಂತೆ ಮನವಿ ಮಾಡಿದೆ. ಸದಾ ಜನರಿಂದ ತುಂಬುವು ಚಿಕ್ಕಪೇಟೆ ಕೊರೊನಾ ಬೀತಿಯಿಂದ ಬಂದ್ ಆಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಹಬ್ಬದ ಸಮಯದಲ್ಲಿ ಲೆಕ್ಕವಿಲ್ಲದಷ್ಟು ಜನ ಶಾಪಿಂಗ್ ಮಾಡಲು ಚಿಕ್ಕಪೇಟೆಗೆ ಬರುತ್ತಾರೆ.ಆದ್ದರಿಂದ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೊರೊನಾ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಹೋಲ್ಸೇಲ್ ಬಟ್ಟೆ ವ್ಯಾಪಾರಿಗಳ ಸಂಘ ಈ ನಿರ್ಧಾರಕ್ಕೆ ಬಂದಿದೆ. ಕೊರೊನಾ ವೈರಸ್ ಹರಡುವಿಕೆ ಕಡಿಮೆ ಆಗುವವರೆಗೂ ವ್ಯಾಪಾರಸ್ಥರು ಮನೆಯಲ್ಲಿ ಉಳಿಯುವಂತೆ ಮನವಿ ಮಾಡಲಾಗಿದೆ.








