ಶುಕ್ರವಾರ ಸದನದಲ್ಲಿ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಮಾತುಕತೆ ನಡೆದಿದೆ. ಆ ಸಿನಿಮಾಕ್ಕೆ ಸಚಿವ ಸಿ.ಟಿ.ರವಿ ಹಾಗೂ ಪರಿಷತ್ ಸದಸ್ಯ ಬೋಜೇಗೌಡ್ರು ಇಬ್ಬರು ನಾಯಕ ನಟನ ಪಾತ್ರ ನಿಭಾಯಿಸಲಿದ್ದಾರೆ ಇಂತಹದೊಂದು ಚರ್ಚೆ ವಿಧಾನ ಪರಿಷತ್ ನಲ್ಲಿ ನಡೆದಿದೆ. ಈ ಹಾಸ್ಯ ಪ್ರಸಂಗದಿಂದ ಸದನ ನಗೆಯಲ್ಲಿ ತೆಲಿತು.
ಇಂದು ಸದನದಲ್ಲಿ ಪರಿಷತ್ ಸದಸ್ಯ ಬೋಜೇಗೌಡ ಅವರು ಪ್ರಶ್ನೆ ಕೇಳುತ್ತಿದ್ದರು. ಆ ವೇಳೆ ಪ್ರವಾಸೋದ್ಯಮ ಸಚಿವರು ಯಂಗ್ ಅಂಡ್ ಎನರ್ಜೆಟಿಕ್ ಇದ್ದಾರೆ ಎಂದರು. ತಕ್ಷಣ ಎದ್ದು ನಿಂತ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಜಯಮಾಲ ಅವರೇ ನೀವೊಂದು ಸಿನಿಮಾ ಮಾಡಿ. ಆ ಸಿನಿಮಾಕ್ಕೆ ಸಿ.ಟಿ.ರವಿ ಹೀರೋ ಮತ್ತು ಎಸ್.ಎಲ್. ಬೋಜೇಗೌಡ ವಿಲನ್ ಆಗಲಿ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬೋಜೇಗೌಡ ಯಾಕೆ ನಾನು ಹೀರೋ ಆಗಬಾರದಾ? ಎಂದು ಕೇಳಿದರು. ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಬಸವರಾಜ್ ಹೊರಟ್ಟಿ ಇಬ್ಬರು ಹೀರೋಗಳಿರಲಿ ಬಿಡಿ ಎಂದು ಹೇಳಿದ್ದಾರೆ. ಕೂಡಲೇ ಎದ್ದು ನಿಂತ ಸಿ.ಟಿ.ರವಿ ಇಬ್ಬರು ಬೇಕಾದ್ರೆ ಹೀರೋ ಆಗೋಣ. ಆದರೆ, ಹೀರೋಯಿನ್ಅನ್ನು ಹಂಚಿಕೊಳ್ಳೋದು ಬೇಡ ಎಂದರು. ಆಗ ಮತ್ತೆ ಎದ್ದು ನಿಂತ ಬಸವರಾಜ್ ಹೊರಟ್ಟಿ ಸಿನಿಮಾದಲ್ಲಿ ವಿಲನ್ ಎಲ್ಲವನ್ನೂ ಅನುಭವಿಸುತ್ತಾನೆ. ಹೀರೂಗೆ ಕೊನೆಯಲ್ಲಿ ಚಾನ್ಸ್ ಸಿಗುತ್ತೆ. ಹಾಗಾಗಿ ಸಿನಿಮಾದಲ್ಲಿ ವಿಲನ್ನೇ ಬೆಸ್ಟ್ ಎಂದು ಹೇಳಿದಾಗ ಪರಿಷತ್ನಲ್ಲಿದ ಸದಸ್ಯರು ಕೆಲ ಕಾಲ ನಗೆಗಡಲಿನಲ್ಲಿ ತೇಲಿದರು.








