ಬೆಂಗಳೂರು : ಶಿಕ್ಷಕರ ಹಾಗೂ ಪದವೀಧರ ವಿಧಾನಪರಿಷತ್ ಕ್ಷೇತ್ರಗಳಿಗೆ ಮತದಾನ ನಡೆಯುವ ಹಿನ್ನೆಲೆ ನಗರದಲ್ಲಿ ಅಕ್ಟೋಬರ್ 28ರವರೆಗೆ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಅಂದರೆ ಬೆಂಗಳೂರಿನಲ್ಲಿ ಇಂದು ಸಂಜೆಯಿಂದ ಎರಡು ದಿನಗಳ ಕಾಲ ಮದ್ಯದಂಗಡಿಗಳು ಬಂದ್ ಆಗಲಿವೆ.
ಇನ್ನು ಶಿಕ್ಷಕರ ಹಾಗೂ ಪದವೀಧರ ವಿಧಾನಪರಿಷತ್ ಚುನಾವಣೆಗೆ ಯಾವುದೇ ತೊಂದರೆ ಉಂಟಾಗದಂತೆ ಚುನಾವಣಾ ಆಯೋಗ ಮತಕೇಂದ್ರಗಳ ಸುತ್ತಾಮುತ್ತಾ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ : ಮೈಸೂರು ದಸರಾ ಜಂಬೂಸಾವರಿಗೆ ಬಿಎಸ್ವೈ ಪುಷ್ಪಾರ್ಚನೆ
ಇನ್ನೂ ನಾಳೆ ಮತದಾನ ನಡೆಯುವ ಸಲುವಾಗಿ ಇಂದು ಸಂಜೆಯಿಂದ 28.10.2020ರ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲಾ ತರಹದ ಮದ್ಯ ಮಾರಾಟವನ್ನು ಸಹ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









