ಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಡ್ರಗ್ಸ್ ಜಾಲದ ತನಿಖೆ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಬೆಂಗಳೂರಿನ ಡ್ರಗ್ಸ್ ಮಾಫಿಯಾದ ಭೂಗತ ದೊರೆಯಂತೆ ಮೆರೆಯುತ್ತಿದ್ದ ನೈಜೀರಿಯಾ ಮೂಲದ ವಿಟಿ ಎಂಬಾತನನ್ನು ಸಿಸಿಬಿ ಪೊಲೀಸರು ಖೆಡ್ಡಾಕ್ಕೆ ಕೆಡವಿ ಬಂಧಿಸಿದ್ದಾರೆ.
ಈಗಾಗಲೇ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ಡ್ರಗ್ಸ್ ಪೆಡ್ಲರ್ ಲೂಮ್ ಪೆಪ್ಪರ್ ಹಾಗೂ ಪ್ರತೀಕ್ ಶೆಟ್ಟಿ ಜೊತೆ ವಿಟಿ ನಿರಂತರ ಸಂಪರ್ಕ ಹೊಂದಿದ್ದ. ಲೂಮ್ ಪೆಪ್ಪರ್, ಪ್ರತೀಕ್ ಶೆಟ್ಟಿ ನೀಡಿದ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರ ಬೇಟೆ ನಡೆದಿದೆ. ಕಳೆದ ಒಂದು ತಿಂಗಳಿಂದ ವಿಟಿ ಬೆನ್ನುಬಿದ್ದಿದ್ದ ಸಿಸಿಬಿ ಪೊಲೀಸರು ಡ್ರಗ್ಸ್ ಪಾತಕಿಯನ್ನು ಬಲೆಗೆ ಬೀಳಿಸಿದ್ದಾರೆ.

ನೈಜೀರಿಯಾದಿಂದ ಬಂದು ಕಳೆದ ಏಳು ವರ್ಷಗಳಿಂದ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿಟಿ, ಡ್ರಗ್ಸ್ ಜಾಲದ ಭೂಗತ ಲೋಕವನ್ನೇ ಸೃಷ್ಟಿಸಿದ್ದ. ಲೂಮ್ ಪೆಪ್ಪರ್, ಪ್ರತೀಕ್ ಶೆಟ್ಟಿ ಸೇರಿದಂತೆ 42 ಡ್ರಗ್ಸ್ ಪೆಡ್ಲರ್‍ಗಳ ದೊಡ್ಡ ನೆಟ್‍ವರ್ಕ್‍ನ್ನೇ ವಿಟಿ ಬಿಲ್ಡ್ ಮಾಡಿಕೊಂಡಿದ್ದ ಎಂದು ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ.
ಡ್ರಗ್ಸ್ ತೂಕ ಮಾಡಲು ಮನೆಯಲ್ಲೇ ತೂಕದ ಯಂತ್ರ..!
ವಿಟಿಯ ಡ್ರಗ್ಸ್ ನೆಟ್‍ವರ್ಕ್ ನೋಡಿ ಸಿಸಿಬಿ ಪೊಲೀಸರೇ ದಂಗಾಗಿ ಹೋಗಿದ್ದಾರೆ. ವಿದೇಶಗಳಿಂದ ಬರುತ್ತಿದ್ದ ಡ್ರಗ್ಸ್‍ನ್ನು ಮನೆಯಲ್ಲಿ ತೂಕ ಮಾಡಿ ರೀ ಪ್ಯಾಕಿಂಗ್ ಮಾಡುತ್ತಿದ್ದ. ಡ್ರಗ್ಸ್ ತೂಕ ಮಾಡಲೆಂದೇ ವಿಟಿ ತೂಕದ ಯಂತ್ರ ಖರೀದಿಸಿ ಮನೆಯಲ್ಲಿ ಇಟ್ಟುಕೊಂಡಿದ್ದ. ಗ್ರಾಂ ಲೆಕ್ಕದಲ್ಲಿ ಡ್ರಗ್ಸ್ ಪ್ಯಾಕ್ ಮಾಡಿಕೊಂಡು ಸ್ಟಾಕ್ ಇಟ್ಟುಕೊಳ್ಳುತ್ತಿದ್ದ. ಆತನ ಜತೆ ಸಂಪರ್ಕ ಇಟ್ಟುಕೊಂಡಿದ್ದ ಪೆಡ್ಲರ್‍ಗಳಿಂದ ಆರ್ಡರ್ ಬರುತ್ತಿದ್ದಂತೆ ಸಾವಿರ ಲೆಕ್ಕದಲ್ಲಿ ವಿಟಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ವಿಟಿಯನ್ನು ಖೆಡ್ಡಾಕ್ಕೆ ಕೆಡವಲು ಸಿಸಿಬಿ ಪೊಲೀಸರು ಒಂದು ತಿಂಗಳಿಂದ ಭರ್ಜರಿ ಪ್ಲಾನ್ ಮಾಡಿದ್ದರು. ಆತನ ಪೋನ್ ಕಾಲ್‍ಗಳ ಟ್ರೇಸ್ ಮಾಡಿ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು. ಎಲ್ಲಾ ಸಿದ್ಧತೆಯೊಂದಿಗೆ ಮನೆಗೆ ನುಗ್ಗಿ ವಿಟಿಯನ್ನು ಅರೆಸ್ಟ್ ಮಾಡಿದ್ದಾರೆ.
ಸ್ಯಾಂಡಲ್‍ವುಡ್ ನಟ-ನಟಿಯರಿಗೆ ಡ್ರಗ್ಸ್
ಬೆಂಗಳೂರಿನಲ್ಲಿ ಅತಿದೊಡ್ಡ ಡ್ರಗ್ಸ್ ನೆಟ್‍ವರ್ಕ್ ಹೊಂದಿದ್ದ ವಿಟಿಗೆ ಸ್ಯಾಂಡಲ್‍ವುಡ್ ನಟ-ನಟಿಯರು, ರಾಜಕಾರಣಿಗಳ ಮಕ್ಕಳೇ ಡ್ರಗ್ಸ್ ಗಿರಾಕಿಗಳು. ಇವರಿಂದ ಇತರೆ ಡ್ರಗ್ಸ್ ಪೆಡ್ಲರ್‍ಗಳ ಮೂಲಕ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ.
ಕೊರೊನಾ ಲಾಕ್‍ಡೌನ್ ವೇಳೆಯೂ ಈತನ ಡ್ರಗ್ಸ್ ದಂಧೆ ಜೋರಾಗಿಯೇ ನಡೆದಿತ್ತು. ಲಾಕ್‍ಡೌನ್ ವೇಳೆ ಮನೆಯಿಂದ ಹೊರಬರಲಾಗದೇ ಒದ್ದಾಡುತ್ತಾ ಡ್ರಗ್ಸ್ ದಾಸರಾಗಿದ್ದ ಸ್ಯಾಂಡಲ್‍ವುಡ್‍ನ ನಟ-ನಟಿಯರು ಹಾಗೂ ರಾಜಕಾರಣಿಗಳ ಮಕ್ಕಳಿಗೆ ಸಪ್ಲೈ ಮಾಡುತ್ತಿದ್ದ.
ಲಾಕ್‍ಡೌನ್‍ಗೂ ಮೊದಲು ನಿರಂತರ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿಟಿಗೆ ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್ ಆಗಿದ್ದರು. ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳನ್ನು ತನ್ನ ಅಡ್ಡೆಯನ್ನಾಗಿ ಮಾಡಿಕೊಂಡಿದ್ದ ವಿಟಿ, ನಟ-ನಟಿಯರು, ರಾಜಕಾರಣಿ, ವಿಐಪಿ ಹಾಗೂ ಉದ್ಯಮಿಗಳ ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡು ಡ್ರಗ್ಸ್ ದಂಧೆ ನಡೆಸುತ್ತಿದ್ದ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








