ಮೈಸೂರು : ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ ಇಬ್ಬರೂ ವಿಲನ್ ಅಲ್ಲ. ಸಿಎಂ ಬಿ.ಎಸ್ ಯಡಿಯೂರಪ್ಪ ಅವರೇ ನಿಜವಾದ ವಿಲನ್ ಎಂದು ಸಚಿವ ಎಸ್.ಟಿ ಸೋಮಶೇಖರ್ ಎಡವಟ್ಟಿನ ಹೇಳಿಕೆ ನೀಡಿ, ಬಳಿಕ ಸ್ಪಷ್ಟನೆ ನೀಡಿದ್ದಾರೆ.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಪರಸ್ಪರ ವಿಲನ್ ಗಳೆಂದು ದೂರುತ್ತಿದ್ದಾರೆ.
ಇವರಿಬ್ಬರಲ್ಲಿ ನಿಜವಾದ ವಿಲನ್ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಬ್ಬರೂ ವಿಲನ್ ಅಲ್ಲ. ಸಿಎಂ ಯಡಿಯೂರಪ್ಪ ಅವರೇ ನಿಜವಾದ ವಿಲನ್ ಎಂದರು.
ಸಚಿವರ ಈ ಹೇಳಿಕೆಯಿಂದ ಸಭೆಯಲ್ಲಿದ್ದವರು ಅರೆಕ್ಷಣ ದಂಗಾದರೂ, ತಮ್ಮ ತಪ್ಪಿನ ಬಗ್ಗೆ ಅರಿವಾಗಿ ಕೂಡಲೇ ಎಚ್ಚೆತ್ತ ಸಚಿವರು, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಅವರೇ ಹೀರೋ, ಅವರೇ ವಿಲನ್ ಎಂದು ಸ್ಪಷ್ಟೀಕರಣ ನೀಡಿದರು.
ಇದೇ ವೇಳೆ ಕಾಂಗ್ರೆಸ್ ನ ಆರ್.ಆರ್.ನಗರದಲ್ಲಿ ಸೆಟ್ಟಾಪ್ ಬಾಕ್ಸ್ ವಿತರಣೆ ಆರೋಪದ ಬಗ್ಗೆ ಮಾತನಾಡಿದ ಸೋಮಶೇಖರ್ , ಮುನಿರತ್ನ ನಾಲ್ಕು ವರ್ಷಗಳಿಂದ ಕೇಬಲ್ ಬಿಸಿನೆಸ್ ಮಾಡ್ತಿದ್ದಾರೆ.
ಇದನ್ನೂ ಓದಿ : ಬಿಜೆಪಿಯಲ್ಲಿ ನಮಗಿಂತ ಹೆಚ್ಚು ಮುಸುಕಿನ ಗುದ್ದಾಟವಿದೆ : ಸತೀಶ್ ಜಾರಕಿಹೊಳಿ
ಸೆಟ್ಟಾಪ್ ಬಾಕ್ಸ್ ಕೊಡ್ತಿರೋದು ಇದೇ ಮೊದಲೇನಲ್ಲ. ನಾನು ಆ ಸೆಟ್ಟಾಪ್ ಬಾಕ್ಸ್ ನೋಡಿದ್ದೇನೆ. ಅದರಲ್ಲಿ ಮುನಿರತ್ನ ಬಗ್ಗೆ ಮಾಹಿತಿ ಬರುತ್ತೆ. ಚುನಾವಣಾ ಆಯೋಗ ಇದನ್ನು ಗಮನಿಸಲಿದೆ ಎಂದರು.
ಇನ್ನು ನವೆಂಬರ್ 1ಕ್ಕೆ ಮೈಸೂರು ದಸರಾದ ವಿವರವಾದ ಲೆಕ್ಕ ಕೊಡುವೆ. ಈ ಬಾರಿ ಮೈಸೂರು ದಸರಾಗೆ ಒಟ್ಟು 15 ಕೋಟಿ ರೂ ಅನುದಾನ ಬಂದಿತ್ತು. ಅದರಲ್ಲಿ ಎಷ್ಟು ಖರ್ಚಾಗಿದೆ ಎನ್ನುವ ಲೆಕ್ಕ ಕೊಡಲಾಗುವುದು ಎಂದು ಇದೇ ವೇಳೆ ಸಚಿವರು ತಿಳಿಸಿದರು.
ಇದನ್ನೂ ಓದಿ : ಸಿದ್ದರಾಮಯ್ಯ ಹೀರೋನೂ ಅಲ್ಲ, ವಿಲನ್ನೂ ಅಲ್ಲ : ಸೋಮಶೇಖರ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










