ಹಾವೇರಿ: ಅಗ್ನಿ ಕೊಂಡದಲ್ಲಿ ಪುಟ್ಟ ಮಗುವನ್ನು ಹೊತ್ತೊಯ್ದ ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ನಡೆದಿದ್ದ ಘಟನೆಯ ವಿಡಿಯೋ ವೈರಲ್ ಆಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೊಂಡ ಹಾಯುವಾಗ ಹೆಚ್ಚು ಕಡಿಮೆ ಏನಾದರೂ ಆಗಿದ್ದರೆ ಯಾರು ಹೊಣೆ ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಘಟನೆ ನಡೆದಿದ್ದು ಹೇಗೆ..?
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ದಸರಾ ಮಹೋತ್ಸದಂದು ನಡೆಯುವ ದುರ್ಗಾದೇವಿ ಜಾತ್ರೆಯ ವೇಳೆ ನಡೆದ ಕೊಂಡ ಹಾಯುವ ಕಾರ್ಯಕ್ರಮದಲ್ಲಿ ಸ್ವಾಮೀಜಿ ಬಸವರಾಜಪ್ಪ ಎಂಬುವರು ಎಡಗೈಯಲ್ಲಿ ಮಗವನ್ನು ಎತ್ತಿಹಿಡಿದು ಬೆಂಕಿಯಲ್ಲಿ ನಡೆದಿದ್ದಾರೆ. ಮೊಬೈಲ್ ಗಳಲ್ಲಿ ಮಗು ಎತ್ತಿಹಿಡಿದ ದೃಶ್ಯಗಳು ಸೆರೆಯಾಗಿವೆ.

ಅಗ್ನಿಕುಂಡದೊಳಗೆ ಒಂದೇ ಕೈಯಲ್ಲಿ ಮಗು ಹೊತ್ತೊಯ್ದಿದ್ದು ಸರಿನಾ ? ಇದು ಮೂಢನಂಬಿಕೆಯ ಪರಮಾವಧಿ ಅಲ್ವಾ, ಒಂದು ವೇಳೆ ಹೆಚ್ಚು ಕಡಿಮೆ ಏನಾದರೂ ಆದರೆ ಯಾರು ಹೊಣೆ? ಎಂದು ಪ್ರಶ್ನಿಸಲಾರಂಭಿಸಿದ್ದಾರೆ.
ದಾವಣಗೇರೆ ಮೂಲದ ಭಕ್ತರೊಬ್ಬರ ಗಂಡು ಮಗುವನ್ನು ಭಕ್ತರೊಬ್ಬರ ಹರಕೆಗಾಗಿ ಪವಾಡ ಪುರುಷ ಬಸವರಾಜಪ್ಪ ಎತ್ತಿಕೊಂಡು ಹೋಗಿದ್ದಾರಂತೆ. ಒಂದೆರೆಡು ವರ್ಷಗಳಲ್ಲಿ ಮಾತ್ರ ಈ ಥರ ಮಾಡಿದ್ದಾರೆ,

ಇದೇನು ಪ್ರತಿವರ್ಷ ಆಗುವುದಿಲ್ಲ. ನಮ್ಮ ಸ್ವಾಮೀಜಿ ಮಾಡಿದ್ದು ಸರಿ ಇದೆ ಎಂದು ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಈಗಲಾದರೂ ರಟ್ಟಿಹಳ್ಳಿ ಪೋಲಿಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








