keshubhay patel
ಗುಜರಾತ್ : ಗುಜರಾತ್ ನ ಮಾಜಿ ಸಿಎಂ ಕೇಶುಭಾಯ್ ಪಟೇಲ್ ಅವರು ಇಂದು ವಿಧಿವಶರಾಗಿದ್ದಾರೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಹಮದಾಬಾದ್ನ ಸ್ಟರ್ಲಿಂಗ್ ಆಸ್ಪತ್ರೆಗೆ ದಾಖಲಾಗಿದ್ದ 92 ವರ್ಷದ ಕೇಶುಭಾಯ್ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಕೇಶುಭಾಯ್ ಪಟೇಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾಣಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
1928 ರಲ್ಲಿ ಜುನಾಘದ್ ಜಿಲ್ಲೆಯ ವಿಶಾವದಾರ್ ಪಟ್ಟಣದಲ್ಲಿ ಜನಿಸಿದ್ದ ಕೇಶುಭಾಯ್ ಪಟೇಲ್ ಅವರು 1945ರಲ್ಲಿ RSS ಸೇರ್ಪಡೆಗೊಂಡರು. ಬಳಿಕ 1960 ರಲ್ಲಿ ಸಂಸ್ಥಾಪಕ ಸದಸ್ಯರಾಗಿದ್ದ ಜನ ಸಂಘದ ಕೆಲಸಗಾರರಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. 1995 ಮತ್ತು 1998 ರಿಂದ 2001 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಕೇಶುಭಾಯ್ ಪಟೇಲ್ ಅವರು ಸೇವೆ ಸಲ್ಲಿಸಿದ್ದಾರೆ. ಸತತ 6 ಬಾರಿ ಗುಜರಾತ್ ವಿಧಾನಸಭೆಯ ಸದಸ್ಯರಾಗಿದ್ದ ಪಟೇಲ್ ಅವರು 2012ರಲ್ಲಿ ಬಿಜೆಪಿ ತೊರೆದು, ಪ್ರತ್ಯೇಕವಾಗಿ ಗುಜರಾತ್ ಪರಿವರ್ತನ ಪಕ್ಷ ಕಟ್ಟಿದ್ದರು.

keshubhay patel
ಇಸ್ಲಾಮೋಫೋಬಿಯಾ ಎದುರಿಸಲು ಕ್ರಮ ಕೈಗೊಳ್ಳುವಂತೆ ಮುಸ್ಲಿಂ ರಾಷ್ಟ್ರಗಳ ಒತ್ತಾಯಿಸಿದ ಪಾಕ್ ಪ್ರಧಾನಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








