ಕಿಲ್ಲರ್ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸಿಸಿದೆ. ಪ್ರಧಾನಿ ಮೋದಿ ಅವರ ಜನತಾ ಕರ್ಫ್ಯೂ ಮನವಿ ಬಗ್ಗೆಯೂ ಅದು ಮೆಚ್ಚುಗೆ ವ್ಯಕ್ತಪಡಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಭಾರತದಲ್ಲಿನ ಪ್ರತಿನಿಧಿ ಹೆಂಕ್ ಬೆಕೆಡಮ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಮಂತ್ರಿಯವರು ಜನತಾ ಕರ್ಫ್ಯೂ ಆಚರಣೆಗೆ ಕರೆನೀಡಿದ್ದನ್ನು ಸ್ವಾಗತಿಸುತ್ತೇವೆ. ಅದೇ ರೀತಿ ಸೋಷಿಯಲ್ ಡಿಸ್ಟೆನ್ಸಿಂಗ್ ಅನ್ವಯಿಸುವ ರೀತಿಯೂ ಪ್ರಶಂಸನೀಯ. ವೈರಸ್ ಹರಡುವುದನ್ನು ತಡೆಯಲು ದೀರ್ಘಕಾಲದ ತಂತ್ರಗಾರಿಕೆಯೂ ಅವಶ್ಯವಾಗಿದೆ ಎಂದು ಹೇಳಿದ್ದಾರೆ.








