Dhanush
ತಮಿಳು ಸಿನಿಮಾರಂಗದ ಖ್ಯಾತ ನಟ ಧನುಷ್ ನಟನೆಯ ಜೊತೆಗೆ ಉತ್ತಮ ಹಾಡುಗಾರ ಎನ್ನುವುದು ಎಲ್ಲರಿಗೂ ಗೊತ್ತಿರುವುದೆ. ಧನುಷ್ ಹಾಡಿರುವ ‘ಕೊಲವೆರಿ ಡಿ..’ ಸಾಂಗ್ ತಮಿಳು ಮಾತ್ರವಲ್ಲದೆ ದೇಶ ವಿದೇಶದಲ್ಲೂ ಭಾರೀ ಸದ್ದು ಮಾಡಿದೆ. ಈ ಹಾಡಿಗೆ ಮನಸೋಲದವರೆ ಇಲ್ಲ. ಈ ಹಾಡು ಸೂಪರ್ ಹಿಟ್ ಆದ ಬಳಿಕ ಧನುಷ್ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಇದೀಗ ಮತ್ತೆ ಧನುಷ್ ಮೈಕ್ ಹಿಡಿಯಲು ಸಜ್ಜಾಗಿದ್ದು ಅಭಿಮಾನಿಗಳು ಫುಲ್ ಖುಷ್ ಅಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ ಹಾಡಿಗೆ ಧನುಷ್ ಧ್ವನಿಯಾಗುತ್ತಿದ್ದಾರೆ. ಈ ಬಗ್ಗೆ ಸ್ವತಃ ನಟ ಧನುಷ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಸಂಗೀತ ದಿಗ್ಗಜನ ಸಂಗೀತಕ್ಕೆ ಧನುಷ್ ಧನಿಯಾಗ್ತಿರುವ ಸುದ್ದಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಇನ್ನೂ ಧನುಷ್ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದೇ ಸಿನಿಮಾದ ಹಾಡಿಗೆ ಧನುಷ್ ಧ್ವನಿಯಾಗುತ್ತಿದ್ದಾರೆ. ಹಿಂದಿಯ ಅತರಂಗಿ ರೇ ಸಿನಿಮಾದಲ್ಲಿ ಧನುಷ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಸಾರಾ ಅಲಿ ಖಾನ್ ಸಹ ಅಭಿನಯಿಸುತ್ತಿದ್ದಾರೆ. ಈ ಸಿನಿಮಾಗೆ ರೆಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ರೆಹಮಾನ್ ಸಂಗೀತ ಸಂಯೋಜನೆಯಲ್ಲಿ ಮೊದಲ ಬಾರಿಗೆ ಧನುಷ್ ಹಾಡುತ್ತಿದ್ದಾರೆ. ಈಗಾಗಲೇ ಈ ಹಾಡಿನ ರೆಕಾರ್ಡಿಂಗ್ ಸಹ ಮುಗಿದಿದೆ. ಧನುಷ್ ಅವರು ರೆಕಾರ್ಡಿಂಗ್ ಬಳಿಕ ರೆಹಮಾನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಗೆ ಅಭಿಮಾನಿಗಳಿಂದ ಸಾಕಷ್ಟು ಲೈಕ್ಸ್ ಕಮೆಂಟ್ ಗಳು ಹರಿದು ಬಂದಿವೆ.
Dhanush
ದುರ್ಬಲ ಮನಸ್ಸಿನ ನೆಹರುಗಾಗಿ ಪಟೇಲರು ಪ್ರಧಾನಿ ಹುದ್ದೆ ತ್ಯಾಗ ಮಾಡಿದರು : ಕಂಗನಾ
5 ವರ್ಷಗಳ ಬಳಿಕ ಸೂಪರ್ ಹಿಟ್ ಸಿನಿಮಾ “ರಂಗಿತರಂಗ” ರೀ ರಿಲೀಸ್ ..!
ಈ ಸಲ ಕಂಗನಾ ಸುದ್ದಿಯಲ್ಲಿರೋದೇ ಬೇರೆಯ ವಿಚಾರಕ್ಕೆ : ಈ ನಟಿ ಹೊಗಳಿದ್ದು ಯಾರನ್ನ..!
‘ಲಕ್ಷ್ಮಿ ಬಾಂಬ್’ ಅಲ್ಲ “ಲಕ್ಷ್ಮಿ”ಯಾಗಿ ಬರುತ್ತಿದ್ದಾರೆ ಅಕ್ಷಯ್ ಕುಮಾರ್…! ವಿರೋಧಕ್ಕೆ ಮಣಿದು ಹೆಸರು ಬದಲಾವಣೆ..
ಯಶ್ – ರಾಧಿಕಾ ಮಗನ ಮೊದಲನೇ ವರ್ಷದ ಹುಟ್ಟುಹಬ್ಬ : ಮಗನಿಗೆ ವಿಶೇಷವಾಗಿ ವಿಷ್ ಮಾಡಿದ ರಾಧಿಕಾ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel