ದುರ್ಬಲ ಮನಸ್ಸಿನ ನೆಹರುಗಾಗಿ ಪಟೇಲರು ಪ್ರಧಾನಿ ಹುದ್ದೆ ತ್ಯಾಗ ಮಾಡಿದರು : ಕಂಗನಾ ( Kangana ranaut )
ಮುಂಬೈ : ಇಂದು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ. ಈ ಹಿನ್ನೆಲೆ ರಾಜಕೀಯ ಗಣ್ಯರು ಸೇರಿದಂತೆ ಸಿನಿ ತಾರೆಯರು ಕೂಡ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಅದರಂತೆ ಬಾಲಿವುಡ್ ನಟಿ ಕಂಗನಾ ರಣಾವತ್ ( ( Kangana ranaut ) , ಪಟೇಲ್ ಅವರ ಫೋಟೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು “ದುರ್ಬಲ ಮನಸ್ಸಿನ ನೆಹರುಗಾಗಿ ವಲ್ಲಭಭಾಯ್ ಪಟೇಲ್ ತಮ್ಮ ಪ್ರಧಾನಿ ಹುದ್ದೆ ತ್ಯಾಗ ಮಾಡಿದರು” ಎಂದು ಹೇಳಿದ್ದಾರೆ.
ಕಂಗನಾ ಟ್ವೀಟ್ ನಲ್ಲಿ ಏನಿದೆ..?
“ನೀವು ಇಂದಿನ ಅಖಂಡ ಭಾರತವನ್ನು ನಮಗೆ ನೀಡಿದ ಮಹಾನ್ ವ್ಯಕ್ತಿ. ಆದರೆ ನೀವು ಪ್ರಧಾನ ಮಂತ್ರಿಯಾಗಿ ನಿಮ್ಮ ಸ್ಥಾನವನ್ನು ತ್ಯಾಗ ಮಾಡುವ ಮೂಲಕ ನಿಮ್ಮ ಉತ್ತಮ ನಾಯಕತ್ವ ಮತ್ತು ದೂರದೃಷ್ಟಿಯನ್ನು ನಮ್ಮಿಂದ ದೂರವಿಟ್ಟಿದ್ದೀರಿ. ನಿಮ್ಮ ನಿರ್ಧಾರವನ್ನು ನಾವು ತೀವ್ರವಾಗಿ ವಿಷಾದಿಸುತ್ತೇವೆ”.
ಇದನ್ನೂ ಓದಿ : ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ವಿತರಣೆ ತ್ವರಿತಗೊಳಿಸಲು ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಫೇಸ್
ಮತ್ತೊಂದು ಟ್ವೀಟ್?ನಲ್ಲಿ “ಇವರು ಭಾರತದ ನಿಜವಾದ ಉಕ್ಕಿನ ಮನುಷ್ಯ. ಗಾಂಧೀಜಿ ಅವರು ನೆಹರೂ ಅವರಂತಹ ದುರ್ಬಲ ಮನಸ್ಸಿನ ವ್ಯಕ್ತಿಯನ್ನು ಪ್ರಧಾನಿಯನ್ನಾಗಿಸಲು ಬಯಸಿದ್ದರು.
ನೆಹರೂ ಅವರನ್ನು ಮುಂದಿಟ್ಟುಕೊಂಡು ರಾಷ್ಟ್ರವನ್ನು ನಡೆಸಬಹುದು ಎಂದು ಬಯಸಿದ್ದರು. ಅದು ಒಳ್ಳೆಯ ಯೋಚನೆಯಾಗಿತ್ತು. ಆದರೆ ಗಾಂಧೀಜಿ ಅವರ ಹತ್ಯೆ ಬಳಿಕ ನಡೆದದ್ದು ಮಾತ್ರ ದೊಡ್ಡ ದುರಂತ”.
“ನೆಹರೂ ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಾರೆ ಎಂದು ಭಾವಿಸಿ ಹಾಗೂ ಗಾಂಧಿಯನ್ನು ಮೆಚ್ಚಿಸಲು ಪಟೇಲ್ ಅವರು ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ ತಮ್ಮ ಅತ್ಯಂತ ಅರ್ಹ ಮತ್ತು ಚುನಾಯಿತ ಸ್ಥಾನವನ್ನು ತ್ಯಾಗ ಮಾಡಿದರು.
ಇದರ ಪರಿಣಾಮ ಸರ್ದಾರ್ ಪಟೇಲ್ ರ ಮೇಲೆ ಪ್ರಭಾವ ಬೀರಲಿಲ್ಲ. ಆದರೆ ದಶಕಗಳಿಂದ ರಾಷ್ಟ್ರದ ಮೇಲೆ ಪರಿಣಾಮ ಬೀರಿದೆ” ಎಂದು ಕಂಗನಾ ರಣಾವತ್ ಟ್ವೀಟ್ ಮಾಡಿದ್ದಾರೆ.
2024 ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕ ಗುರಿ ಸಾಧಿಸಲಿದೆ – ಪ್ರಧಾನಿ ಮೋದಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel