ರಾಜ್ಯದಲ್ಲಿ ಮತ್ತೊಂದು ರಾಜಕೀಯ ಪಕ್ಷ ಉದಯ ಆಗಲಿದ್ಯಾ..? ಸದ್ಯ ಈ ಪ್ರಶ್ನೆವೊಂದು ರಾಜಕೀಯ ಪಡೆಸಾಲೆಯಲ್ಲಿ ಉಸಿರಾಡತೊಡಗಿದೆ. ಇದಕ್ಕೆ ಪುಷ್ಠಿನೀಡುವಂತಹ ಘಟನೆಗಳು ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿಲೇ ಇದ್ದು, ಹೊಸ ಪಕ್ಷ ಸ್ಥಾಪನೆಗೆ ಗ್ರೌಂಡ್ ವರ್ಕ್ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾದ್ರೆ ರಾಜ್ಯದಲ್ಲಿ ಉದಯವಾಗುವ ಪಕ್ಷ ಯಾವುದು? ಯಾರ ನೇತೃತ್ವದಲ್ಲಿ ಈ ಪಕ್ಷ ಅಸ್ತಿತ್ವಕ್ಕೆ ಬರುತ್ತೆ ಎಂಬ ಪ್ರಶ್ನೆಗಳಿಗೆ ಉತ್ತರ
“ರಾಜಾಹುಲಿಯಾ” ಅಂದ್ರೆ ಹುಲಿಯಾ ಸಿದ್ದರಾಮಯ್ಯ ಮತ್ತು ರಾಜಾಹುಲಿ ಬಿಎಸ್ ಯಡಿಯೂರಪ್ಪ. ಹೌದು..! ಈ ರಾಜಕೀಯ ಧುರೀಣರು ಒಟ್ಟಾಗಿ ಪ್ರದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಕಾರಣವೇನಿರಬುಹುದು?
ಈ ಇಬ್ಬರು ಒಂದೊಂದು ಪಕ್ಷದಲ್ಲಿ ಗುರುತಿಸಿಕೊಂಡು ಸಿಎಂ ಪಟ್ಟವೇರಿದ್ದಾರೆ. ಇವರಿಗೆ ತಮ್ಮ ಪಕ್ಷಗಳಲ್ಲಿ ತಮ್ಮದೇಯಾದ ಹಿಡಿತವಿದೆ. ಹೀಗಿದ್ದರೂ ಹೊಸ ಪಕ್ಷ ಏಕೆ? ಎಂಬ ಪ್ರಶ್ನೆ ಎಲ್ಲರಲ್ಲೂ ಸಾಮಾನ್ಯವಾಗಿ ಮೂಡುತ್ತೆ. ಅದಕ್ಕೆ ಉತ್ತರ ರಾಷ್ಟ್ರೀಯ ಪಕ್ಷಗಳ ನಡೆ.
ಹೌದು..! ಬಿ.ಎಸ್‌ವೈ ಕರ್ನಾಟಕದಲ್ಲಿ ಕಮಲವನ್ನು ಅರಳಿಸಲು ಸಾಕಷ್ಟು ದುಡಿದಿದ್ದಾರೆ. ಒಂದು ಸ್ಥಾನದಿಂದ ಸರ್ಕಾರ ರಚಿಸುವ ಹಂತಕ್ಕೆ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಒಂದು ಮಾತಿನಲ್ಲಿ ಹೇಳುವುದಾದರೆ ರಾಜ್ಯದಲ್ಲಿ ಬಿಜೆಪಿ ಇಷ್ಟುಗಟ್ಟಿಯಾಗಿ ನೆಲೆಯೂರಲು ಕಾರಣ ಒನ್ ಅಂಡ್ ಓನ್ಲಿ ಬಿಎಸ್ವೈ ಮಾತ್ರ ಕಾರಣ.
ಇನ್ನೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಮೊದಲು ಜೆಡಿಎಸ್ ನಲ್ಲಿ ಗುರುತಿಸಿಕೊಂಡು ಡಿಸಿಎಂ ಆಗಿದ್ದರು. ಬಳಿಕ ಕೆಲ ಕಾರಣಗಳಿಂದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಸೇರಿದ ಅವರು ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದಾಗ ರಾಜ್ಯದಲ್ಲಿ ಪಕ್ಷ ತನ್ನ ಚಾರ್ಮ್ ಕಳೆದುಕೊಂಡಿತ್ತು. ಸೋಲುಗಳಿಂದ ಸೊರಗುತ್ತಿದ್ದ ಪಕ್ಷಕ್ಕೆ ಸಿದ್ದರಾಮಯ್ಯ ಬೂಸ್ಟ್ ನೀಡಿದರು. ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿ 2013ರಲ್ಲಿ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ್ರು.
ಆದ್ರೆ ಸದ್ಯ ಈ ರಾಷ್ಟ್ರೀಯ ಪಕ್ಷಗಳ ನಡೆ ಇವರಿಗೆ ಬೇಸರ ಮೂಡಿಸಿದೆಯಂತೆ. ಒಂದು ಕಡೆ ಸಿಎಂ ಬಿಎಸ್ ವೈ ಅವರನ್ನು ಬಿಜೆಪಿ ಹೈಕಮಾಂಡ್ ಪದೇ ಪದೇ ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ನೆರೆ ಪರಿಹಾರ ಈ ವಿಚಾರಗಳಲ್ಲಿ ಬಿಎಸ್ ವೈ ದೆಹಲಿ ವರಿಷ್ಠರ ಮುಂದೆ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸಾಮಾನ್ಯವಾಗಿಯೇ ಸಿಎಂ ಬಿಎಸ್ ವೈ ಅವರ ಬೇಸರಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಇನ್ನು ಸಿದ್ದರಾಮಯ್ಯ ಅವರ ಸಂಗತಿಯಲ್ಲಿ ನೋಡೋದಾದ್ರೆ.. ಕೆಪಿಸಿಸಿ ಅಧ್ಯಕ್ಷ ನೇಮಕ, ಮೈತ್ರಿ ಸರ್ಕಾರ ರಚನೆ ಸೇರಿದಂತೆ ಹಲವು ವಿಚಾರಗಳಲ್ಲಿ ಸಿದ್ದರಾಮಯ್ಯ ಅವರ ಮಾತನ್ನು ಎಐಸಿಸಿ ಕಡೆಗಣಿಸಿದೆಯಂತೆ. ಅದರಲ್ಲೂ ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲು ದೆಹಲಿ ನಾಯಕರೇ ಕುಮ್ಮಕ್ಕು ನೀಡುತ್ತಿದ್ದಾರಂತೆ. ಇದರಿಂದ ಸಿದ್ದರಾಮಯ್ಯ ಕೂಡ ಪರ್ಯಾಯ ಮಾರ್ಗ ಯೋಚಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ರಾಷ್ಟ್ರೀಯ ಪಕ್ಷಗಳಿಗೆ ಪಾಠ ಕಲಿಸುವ ಹಾಗೂ ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಒಟ್ಟಾಗಿ ರಾಜಕೀಯ ಪಕ್ಷ ಕಟ್ಟಲು ಸಿದ್ದರಾಮಯ್ಯ, ಯಡಿಯೂರಪ್ಪ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬಿಎಸ್ ವೈ ಅವರ ಪರ ಸಿದ್ದರಾಮಯ್ಯ ಆಗಾಗ ಬ್ಯಾಟ್ ಬೀಸುತ್ತಲೇ ಇದ್ದಾರೆ. ಬಿಎಸ್ ವೈ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಸಿದ್ದರಾಮಯ್ಯ ಹೋಗಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು. ಇದಲ್ಲದೆ ಬಿ.ಎಸ್ ವೈ ಹಾಗೂ ಸಿದ್ದರಾಮಯ್ಯ ಆತ್ಮೀಯ ಸ್ನೇಹಿತರೆನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೇ.
ಈ ಇಬ್ಬರೂ ರಾಜ್ಯದ ಮಾಸ್ ಲೀಡರ್ ಗಳು. ರೈತ, ಬಡವರ ಪರ ನಿಲ್ಲುವ ಧೀಮಂತರು. ಸಂಘಟನಾ ಚಾತುರರು. ಇವೆಲ್ಲಕ್ಕಿಂತ ಮಿಗಿಲಾಗಿ ರಾಜ್ಯದ ಅಭಿವೃದ್ಧಿ ಬಗ್ಗೆ ತಮ್ಮದೇಯಾದ ಕನಸುಲ್ಲವರು. ಹೀಗಾಗಿ ಈ ಇಬ್ಬರು ಸೇರಿ ರಾಜ್ಯದಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಮಹೇಶ್ ಎಂ ದಂಡು.









