ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ SaakshaTv News Editor Vishwas Bharadwaj
ವಿಶ್ವಾಸ್ ಭಾರದ್ವಾಜ್ ಇವರು ಶಿವಮೊಗ್ಗ ಜಿಲ್ಲೆಯ ಸಾಗರದವರು. ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿದವರು. SaakshaTv News Editor Vishwas Bharadwaj
ಕುವೆಂಪು ವಿಶ್ವವಿದ್ಯಾಲಯದ ಬಿಸಿನೆಸ್ ಮ್ಯಾನೇಜ್ಮೆಂಟ್ ಪದವಿ ಪಡೆದ ಇವರು ತಮ್ಮ ಆಸಕ್ತಿಯ ಕ್ಷೇತ್ರವನ್ನು ಅರಿತು ಕೊಂಡು ಮೈಸೂರಿನ ಮಾನಸ ಗಂಗೋತ್ರಿಯ ಮುಕ್ತ ವಿ.ವಿಯ ಸಮೂಹ ಸಂಪನ್ಮೂಲ ಹಾಗೂ ಪತ್ರಿಕೋದ್ಯಮದ ಸ್ನಾತಕೋತ್ತರ ಪದವೀಧರರು.
ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವ ಇವರು ನವೋದಯದ ಪ್ರಮುಖ ಕವಿ ಗೋಪಾಲಕೃಷ್ಣ ಅಡಿಗರ ಕಾವ್ಯಗಳಿಂದ ಪ್ರಭಾವಿತರಾದವರು. ಯಾವುದೇ ಪಂಥಗಳಿಗೂ ಅಂಟಿಕೊಳ್ಳದ ಇವರು ತಮ್ಮ ವಿಚಾರಧಾರೆಗಳನ್ನು ಮುಕ್ತವಾಗಿ ಪ್ರಸ್ತುತ ಪಡಿಸಿದವರು.
ಇವರ ಕವಿ ಮನಸ್ಸು ಕಾಲುಹಾದಿ ಎಂಬ ಹನಿ ಕಥಾ ಸಂಕಲನ ಹಾಗೂ ಅಭಿಸಾರಿಕೆ ತಹತಹಿಕೆ ಎಂಬ ಕವನಸಂಕಲನವನ್ನು ಹೊರತಂದಿದೆ. ನಿಮಗೆ ನೀವೇ ದಾರಿದೀಪ ಎನ್ನುವುದು ಇವರ ಅನುವಾದ ಬರಹ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಹಲವು ಪತ್ರಿಕೆಗಳಲ್ಲಿ ದುಡಿದವರು. ಬೆಳ್ಳಿ ಕ್ರಿಯೇಷನ್ಸ್ ಸಂಸ್ಥೆಯ ಸ್ಥಾಪಕರಾಗಿರುವ ಇವರು ಪ್ರಸ್ತುತ ಸಾಕ್ಷಾಟಿವಿ ಡಾಟ್ ಕಾಮ್ ನಲ್ಲಿ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ