Komal Kumar
2020ನೇ ವರ್ಷ ಕರಾಳ ವರ್ಷವೆಂಬ ಹಣೆಪಟ್ಟಿ ಪಡೆದು ಇತಿಹಾಸಪುಟದಲ್ಲಿ ಉಳಿಯುವಂತೆ ಮಾಡಿದೆ ಹೆಮ್ಮಾರಿ ಕೊರೊನಾ. ಈ ಸಾಂಕ್ರಾಮಿಕ ರೋಗದಿಂದಾಗಿ ಲೆಕ್ಕವಿಲ್ಲದಷ್ಟು ಜನರು ಜೀವ ಕಳೆದುಕೊಂಡಿದ್ದಾರೆ. ಕೋಟ್ಯಾಂತರ ಜನರ ಜೀವನ ಮಹಾಮಾರಿ ಹೊಡೆತಕ್ಕೆ ಸಿಲುಕಿ ಮೂರಾಬಟ್ಟೆಯಾಗಿದೆ. ಸಾವಿರಾರು ಜನರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿ ಬೀದಿಗೆ ಬಂದಿದ್ದಾರೆ. ಸಿನಿಮಾ ಇಂಡಸ್ಟ್ರಿಗೂ ಸಹ ಇದ್ರಿಂದ ಸಿಕ್ಕಾಪಟ್ಟೆ ನಷ್ಟ ಉಂಟಾಗಿದೆ.
ಅಂದ್ಹಾಗೆ ಇದೀಗ, ಕೊರೊನಾ ಹಾವಳಿ ಹಾಗೂ ಸಿನಿಮಾಗೂ ಲಿಂಕ್ ಮಾಡುತ್ತಿರುವುದು ಯಾವ ವಿಚಾರಕ್ಕೆ ಅಂದ್ಕೊಂಡ್ರಾ..! ಅದಕ್ಕೆ ಉತ್ತರ ನೀವೇ ನೋಡಿ. ಸ್ಯಾಂಡಲ್ ವುಡ್ ನಟ ಕೋಮಲ್ ಅವವರು ಸದ್ಯ ಹೊಸದೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದ ವಿಚಾರ ಎಲ್ಲರಿಗೂ ಗೊತ್ತೇ ಇತ್ತು. ಇದೀಗ ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ರಿವೀಲ್ ಆಗಿದೆ. ಅಂದ್ಹಾಗೆ ಸಿನಿಮಾಗೆ ‘2020’ ಎಂಬ ಶೀರ್ಷಿಕೆಯಿಡಲಾಗಿದೆ.
ಕೋಮಲ್ ಮುಂದಿನ ಸಿನಿಮಾದ ಟೈಟಲ್ ‘2020’. ಈ ಚಿತ್ರಕ್ಕೆ ‘ಅಯೋಗ್ಯ’ ಸಿನಿಮಾ ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಅವರು ಬಂಡವಾಳ ಹೂಡುತ್ತಿದ್ದಾರೆ. ನಟ ಕೋಮಲ್ ಕುಮಾರ್ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ನಲ್ಲಿ ಚೀನಾ ಏರ್‌ಲೈನ್ಸ್ ಕೊರೊನಾ ಹರಡಿಸಿರುವುದನ್ನು ಹೈಲೈಟ್ ಮಾಡಲಾಗಿದೆ. ಹೀಗಾಗಿ ಸಹಜವಾಗಿ ಈ ಚಿತ್ರದ ಕಥೆ ಕೊರೊನಾ ವೈರಸ್ ಹಾಗೂ ಅದರ ಪರಿಣಾಮಗಳ ಮೇಲೆಯೇ ಆಧಾರವಾಗಿರಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಇನ್ನೂ ಸಹೋದರ ನಟಿಸುತ್ತಿರುವ ಹೊಸ ಸಿನಿಮಾಗೆ ನವರಸ ನಾಯಕ ಜಗ್ಗೇಶ್ ಅವವರು ಶುಭಹಾರೈಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ”ಸಹೋದರ #ಕೋಮಲ್ ಹೊಸ ಚಿತ್ರ 2020 ಆರಂಭ…ನಿಮ್ಮ ಶುಭ ಹಾರೈಕೆ ಇರಲಿ…” ಎಂದು ಟೈಟಲ್ ಮೋಷನ್ ಪೋಸ್ಟರ್ ಶೇರ್ ಮಾಡಿಕೊಂಡು ಚಿತ್ರಕ್ಕೆ ಬೆಸ್ಟ್ ವಿಷಸ್ ತಿಳಿಸಿದ್ದಾರೆ.
ಇನ್ನೂ ಈ ಚಿತ್ರಕ್ಕೆ ‘ಮಜಾಟಾಕೀಸ್’ ಹಾಗೂ ರಾಬರ್ಟ್ ಚಿತ್ರಕ್ಕೆ ಸಂಭಾಷಣೆ ಮಾಡಿರುವ ರಾಜಶೇಖರ್ ಆಕ್ಷನ್ ಕಟ್ ಹೇಳುತ್ತಿರೋದು ವಿಶೇಷ. ಇನ್ನೂ ಕೋಮಲ್ ಹೇಳಿ ಕೇಳಿ ಹಾಸ್ಯ ನಟ. ಅಂದ್ಮೇಲೆ ಸಿನಿಮಾ ಪಕ್ಕಾ ಕಾಮಿಡಿ ಎಂಟರಟೈನ್ ಮೆಂಟ್ ಆಗಗಿರೋದ್ರಲ್ಲಿ ನೋ ಡೌಟ್..
Komal Kumar
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel