ಬೆಂಗಳೂರು: ಕಣ್ಣು ಕಾಣದವರು, ನಡೆಯಲು ಸಾಧ್ಯವಿಲ್ಲದ, ವಯಸ್ಸಾದವರೂ ಕೂಡಾ ಕೋವಿಡ್ ಭೀತಿಯ ನಡುವೆ ಬಂದು ಯಶವಂತಪುರ ಮತಗಟ್ಟೆಗಳಲ್ಲಿ ಮತದಾನ ಮಾಡಿದ್ದಾರೆ.
ಆದರೆ, ಬಿಬಿಎಂಪಿ ಎಲ್ಲಾ ಹಿರಿಯ ಮತದಾರರಿಗೆ ಪೋಸ್ಟಲ್ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದ್ದರೂ, ನೂರಾರು ಜನರಿಗೆ ಈ ಸೌಲಭ್ಯ ತಲುಪಿಲ್ಲ. ಎಷ್ಟೋ ಜನರಿಗೆ ಇದರ ಮಾಹಿತಿಯೂ ಇಲ್ಲ. ಯಶವಂತಪುರದ 141, 143, 153 ಬೂತ್ ಗಳಲ್ಲಿ ಹಿರಿಯ ನಾಗರಿಕರು ಬಂದು ಓಟ್ ಮಾಡುತ್ತಿದ್ದಾರೆ.
90 ವರ್ಷ ಮೇಲ್ಪಟ್ಟ ಮಹಿಳೆ ನಡೆಯಲು ಸಾಧ್ಯವಿಲ್ಲದಿದ್ದರೂ ಬಂದು ಮತ ಹಾಕಿದ್ದಾರೆ. ಅವರ ಮಗ ನಾಗರಾಜ್ ಮಾತನಾಡಿ, ಬಿಬಿಎಂಪಿ ಅಂಚೆ ಮತದಾನದ ವ್ಯವಸ್ಥೆ ಬಗ್ಗೆ ನಮಗೆ ಗೊತ್ತಿಲ್ಲ. ನಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದರು.
ಇನ್ನು ವಯಸ್ಸಾದ, ಕಣ್ಣು ಕಾಣದ ಸರೋಜಮ್ಮ ಎಂಬ ವೃದ್ಧೆ ಕೂಡಾ ಮೊಮ್ಮಗನ ಸಹಾಯದೊಂದಿಗೆ ಬಂದು ಮತದಾನ ಮಾಡಿದರು.
ಬಿಬಿಎಂಪಿ 388 ಹಿರಿಯ ಮತದಾರರು ಹಾಗೂ 22 ವಿಶೇಷ ಚೇತನ ಮತದಾರರು ಪೋಸ್ಟಲ್ ಬ್ಯಾಲೆಟ್ ಮೂಲಕ ಮತಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದು, ಇನ್ನೂ ನೂರಾರು ಫಲಾನುಭವಿಗಳಿಗೆ ಈ ಸೌಲಭ್ಯ ತಲುಪಿಯೇ ಇಲ್ಲ.
ಆರ್.ಆರ್ ನಗರಕ್ಕೆ ಮೊದಲು ನೀರು ಕೊಡಿ..!
ಆರ್.ಆರ್ ನಗರದ ಸುತ್ತಮುತ್ತಲು ಇರುವ ಪ್ರದೇಶಗಳಿಗೆ ದಿನಬಿಟ್ಟು ದಿನ ಕಾವೇರಿ ನೀರು ಪೂರೈಸಲಾಗುತ್ತಿದೆ. ಆದ್ರೆ ಆರ್.ಆರ್ ನಗರ ನಿವಾಸಿಗಳಿಗೆ ನಾಲ್ಕು ದಿನಗಳಿಗೊಮ್ಮೆ ಕಾವೇರಿ ನೀರು ಪೂರೈಕೆ ಮಾಡಲಾಗ್ತಿದೆ. ಆದ್ದರಿಂದ ಮುಂಬರುವ ಯಾರೇ ಎಂಎಲ್‍ಎ ಆದ್ರೂ ಕುಡಿಯುವ ನೀರಿಗೆ ಪ್ರಾಮುಖ್ಯತೆ ನೀಡುವಂತೆ ಮನವಿ ಮತದಾರರು ಮುಂಬರುವ ಶಾಸಕರಿಗೆ ಮನವಿ ಮಾಡಿದ್ದಾರೆ.
ಜನ ಹೊಸದನ್ನು ಬಯಸುತ್ತಿದ್ದಾರೆ-ಕೃಷ್ಣಮೂರ್ತಿ
ಆರ್.ಆರ್ ನಗರ ಉಪಚುನಾವನೆಯಲ್ಲಿ ಮತದಾರರು ಹೊಸದನ್ನು ಬಯಸುತ್ತಿದ್ದಾರೆ. ಪ್ರಾದೇಶಿಕ ಪಕ್ಷಕ್ಕೆ ಅವಕಾಶ ಕೊಡಿ ಅಂತಾ ಕೇಳಿದ್ದೇನೆ. ಕೊರೊನ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ ಜನರು ಮತದಾನ ಮಾಡಬೇಕು. ಎಲ್ಲರೂ ಕೂಡಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮತ ಚಲಾವಣೆ ಮಾಡುವಂತೆ ಆರ್.ಆರ್ ನಗರ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಮನವಿ ಮಾಡಿದ್ದಾರೆ.
ಗ್ಲೌಸ್ ಬೇಕಾಬಿಟ್ಟಿ ಬಿಸಾಕಿದ ಮತದಾರರು..
ಆರ್.ಆರ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿವೈನ್ ಇಂಗ್ಲಿಷ್ ಸ್ಕೂಲ್‍ನಲ್ಲಿರುವ ಬೂತ್‍ನಲ್ಲಿ ಚುನಾವಣಾ ಸಿಬ್ಬಂದಿ ನೀಡಿದ ಹ್ಯಾಂಡ್ ಗ್ಲೌಸ್‍ಗಳನ್ನು ಮತದಾರರು ರಸ್ತೆಯಲ್ಲಿ ಬೇಕಾಬಿಟ್ಟಿ ಬಿಸಾಕಿರುವ ಘಟನೆ ನಡೆದಿದೆ.
ಹೀಗಾಗಿ ರಸ್ತೆಯುದ್ದಕ್ಕೂ ಹ್ಯಾಂಡ್ ಗ್ಲೌಸ್ ಗಳು ಬಿದ್ದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಕೊರೊನಾ ಹಿನ್ನಲೆ ಪ್ರತಿಯೊಂದು ಮತಗಟ್ಟೆಗಳಲ್ಲಿ ಮತದಾರರಿಗೆ ಹ್ಯಾಂಡ್ ಗ್ಲೌಸ್ ನೀಡಲಾಗುತ್ತಿದೆ. ಮತಗಟ್ಟೆಗಳ ಹೊರಗೆ ಹ್ಯಾಂಡ್ ಗ್ಲೌಸ್ ಹಾಕಲು ಡಸ್ಟ್ ಬೀನ್ ಇಡದ ಕಾರಣ ರಸ್ತೆಗಳಲ್ಲಿ ಎಸೆದು ಹೋಗುತ್ತಿದ್ದಾರೆ ಎನ್ನಲಾಗಿದೆ.
ಮತದಾನದ ಜತೆ ಕೋವಿಡ್ ಟೆಸ್ಟ್
ಬೆಂಗಳೂರಿನ ಯಶವಂತಪುರದ ಬಿಬಿಎಂಪಿ ಪಬ್ಲಿಕ್ ಸ್ಕೂಲ್‍ನ ಮತಗಟ್ಟೆಯಲ್ಲಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಮತದಾರರು ಮತದಾನ ಮುಗಿಸಿ ಹೊರ ಬರುತ್ತಿದ್ದಂತೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಇದಕ್ಕಾಗಿ ಆರೋಗ್ಯ ಸಿಬ್ಬಂದಿಯ ತಂಡವನ್ನು ಕೊರೊನಾ ಟೆಸ್ಟ್ ಗೆಂದು ನಿಯೋಜಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel