ADVERTISEMENT
Sunday, March 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆರ್.ಆರ್ ನಗರದಲ್ಲಿ ನೀರಸ, ಶಿರಾದಲ್ಲಿ ದಾಖಲೆ ಮತದಾನ: ಶುರುವಾಗಿದೆ ಲೆಕ್ಕಾಚಾರ..!

Kariyappa N by Kariyappa N
November 3, 2020
in Newsbeat, Politics, Samagra karnataka, ರಾಜ್ಯ
by election
Share on FacebookShare on TwitterShare on WhatsappShare on Telegram

ಆರ್.ಆರ್ ನಗರ: ಶೇ.45.24
ಶಿರಾ ಕ್ಷೇತ್ರ: ಶೇ.82.31

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಇವಿಎಂ ಮತಯಂತ್ರಗಳಲ್ಲಿ ಭದ್ರವಾಗಿದೆ.
ಆದರೆ, ರಾಜಧಾನಿ ಬೆಂಗಳೂರಿನ ಆರ್.ಆರ್ ನಗರ ಕ್ಷೇತ್ರದ ಮತದಾರರು ಚುನಾವಣೆಗೆ ನೀರಸ ಪ್ರತಿಕ್ರಿಯೆ ತೋರಿಸಿದ್ದು, ಕೇವಲ ಶೇ.45.24ರಷ್ಟು ಮಾತ್ರ ಮತದಾನವಾಗಿದೆ. ಆರ್.ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್‍ನ ಕುಸುಮಾ, ಜೆಡಿಎಸ್‍ನಿಂದ ಕೃಷ್ಣಮೂರ್ತಿ ಸೇರಿ 16 ಅಭ್ಯರ್ಥಿಗಳು ಸ್ಪರ್ಧೆ ನಡೆಸಿದಿದ್ದರು. ಈ 16 ಅಭ್ಯರ್ಥಿಗಳ ಹಣೆಬರಹ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದೆ.

Related posts

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

March 29, 2026
ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

March 29, 2026

vote
ರಾಜಧಾನಿ ಬೆಂಗಳೂರು ನಗರದಲ್ಲಿ ಹೆಮ್ಮಾರಿ ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ಆರ್.ಆರ್ ನಗರ ಕ್ಷೇತ್ರ ವ್ಯಾಪ್ತಿಯ ಮತದಾರರು ಮತದಾನಕ್ಕೆ ಹಿಂದೇಟು ಹಾಕಿದ್ದಾರೆ. ಇದರ ಪರಿಣಾಮ ಮತದಾನ ಪ್ರಮಾಣದಲ್ಲಿ ಭಾರಿ ಕುಸಿತ ದಾಖಲಾಗಿದೆ.
ಬೆಳಗ್ಗೆ ಮತ್ತು ಸಂಜೆ ಮತದಾನ ಪ್ರಕ್ರಿಯೆ ಬಿರುಸು ಪಡೆದಿರುವುದನ್ನು ಬಿಟ್ಟರೆ ಉಳಿದ ಅವಧಿಯಲ್ಲಿ ಮತದಾನ ಅತ್ಯಂತ ನೀರಸವಾಗಿತ್ತು. ಅತ್ಯಂತ ಸುಶಿಕ್ಷಿತ ಮತದಾರರು ಎನಿಸಿಕೊಂಡ ನಗರ ಪ್ರದೇಶದ ಮತದಾರರು ಹಕ್ಕು ಚಲಾಯಿಸಲು ಉತ್ಸಾಹ ತೋರಿಸಿಲ್ಲ. ಇದಕ್ಕೆ ಕಾರಣ ಹೆಮ್ಮಾರಿ ಕೊರೊನಾ.

voting rr nagar
ಮತದಾನದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಆರ್.ಆರ್ ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಲೇ ಇಲ್ಲ. ಯುವಕರಿಗಿಂತ ಹಿರಿಯರೇ ಮತಗಟ್ಟೆಗೆ ಹೆಚ್ಚಾಗಿ ಧಾವಿಸಿದ್ದರು. ಹಾದಿಯಲ್ಲಿ ಹೋಗುವ ಮಾರಿಯನ್ನು ಮನೆಯೊಳಗೆ ಯಾಕೆ ಕರೆದುಕೊಳ್ಳಬೇಕು ಎಂಬ ಗಾದೆಯ ಮಾತಿಗೆ ಆರ್.ಆರ್ ನಗರ ಕ್ಷೇತ್ರದ ಮತದಾರರು ಕೊರೊನಾ ಕಾರಣಕ್ಕೆ ಮತದಾನಕ್ಕೆ ಹೆಚ್ಚು ಆಸಕ್ತಿ ತೋರಿಸಿದಂತೆ ಕಾಣುತ್ತಿಲ್ಲ.
ಆರ್.ಆರ್ ನಗರದಲ್ಲಿ ಹಿಂದಿನ ಚುನಾವಣೆಗಳ ಮತದಾನದ ಪ್ರಮಾಣ..
2013-ವಿಧಾನಸಭೆ ಚುನಾವಣೆ: ಶೇ.56.80
2015-ಬಿಬಿಎಂಪಿ ಚುನಾವಣೆ: ಶೇ.50.17
2018-ವಿಧಾನಸಭೆ ಚುನಾವಣೆ:ಶೇ.54.34
2019-ಲೋಕಸಭೆ ಚುನಾವಣೆ:ಶೇ.53.65
2020-ವಿಧಾನಸಭೆ ಉಪಚುನಾವಣೆ:ಶೇ.45.24

ಶಿರಾದಲ್ಲಿ ಕೊರೊನಾ ನಡುವೆ ದಾಖಲೆ ಮತದಾನ
ಆರ್.ಆರ್ ನಗರಕ್ಕೆ ಹೋಲಿಸಿದರೆ ಶಿರಾದಲ್ಲಿ ಪರಿಸ್ಥಿತಿ ಇದಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ. ಕೊರೊನಾ ಹರಡುವ ಬೀತಿಯ ನಡುವೆಯೂ ಶಿರಾ ಕ್ಷೇತ್ರದ ಮತದಾರರು ದಾಖಲೆ ಮತದಾನ ಮಾಡಿದ್ದಾರೆ.
ಬೆಳಿಗ್ಗೆ ಉತ್ಸಾಹದಿಂದಲೇ ಶುರುವಾದ ಮತದಾನ ಸಂಜೆಯವರೆಗೂ ಇದೇ ರೀತಿ ಮುಂದುವರೆದಿತ್ತು.  ಒಟ್ಟಾರೆ ಶಿರಾ ಕ್ಷೇತ್ರದಲ್ಲಿ ಶೇ.82.31ರಷ್ಟು ಭರ್ಜರಿ ಮತದಾನವಾಗಿದೆ.

vote vote
ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ, ಕಾಂಗ್ರೆಸ್‍ನ ಟಿ.ಬಿ ಜಯಚಂದ್ರ, ಜೆಡಿಎಸ್‍ನ ಅಮ್ಮಾಜಮ್ಮ ಸೇರಿ 15 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ನವೆಂಬರ್ 10ಕ್ಕೆ ಫಲಿತಾಂಶ ಹೊರಬೀಳಲಿದೆ.
ಒಟ್ಟು ಮತಗಳು-2.15 ಲಕ್ಷ
ಚಲಾವಣೆಯಾದ ಮತಗಳು-1.82 ಲಕ್ಷ
ಪುರುಷ ಮತದಾರರಿಂದ ಮತದಾನ-91,959
ಮಹಿಳಾ ಮತದಾರರಿಂದ ಮತದಾನ-85,594
ಅಂಚೆ ಮತಗಳು: 4821
ಒಟ್ಟು ಚಲಾವಣೆಯಾದ ಮತಗಳು: 1,82,374

ತಣ್ಣಗಾಯ್ತು ಸಮರ ಕಣ, ಇನ್ನೇನಿದ್ದರೂ ಲೆಕ್ಕಾಚಾರ..!
ಸತತ ಮೂರು ವಾರಗಳ ಕಾಲ ಆರ್.ಆರ್ ನಗರ ಹಾಗೂ ಶಿರಾ ಕ್ಷೇತ್ರಗಳು ರಾಜಕೀಯ ಪಕ್ಷಗಳ ನಡುವೆ ಸಮರದ ಕಣಗಳಂತೆ ಮಾರ್ಪಟ್ಟಿದ್ದವು. ಮತದಾರನ್ನು ಸೆಳೆಯಲು ಭರವಸೆಗಳಗಳ ಮಹಾಪೂರದ ಜತೆಗೆ, ಒಬ್ಬರನೊಬ್ಬರು ಆರೋಪ-ಪ್ರತ್ಯಾರೋಪಗಳ ಜತೆ, ಮಾತಿನ ಬಾಂಬ್‍ಗಳನ್ನು ಸಿಡಿಸುವ ಮೂಲಕ ಭರ್ಜರಿ ಕೆಸರೆರಚಾಟ ಮಾಡಿಕೊಂಡಿದ್ದರು.


ಆರ್.ಆರ್ ನಗರದಲ್ಲಿ ಮತದಾನ ಪ್ರಮಾಣ ಕುಸಿದಿರುವುದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಮುನಿರತ್ನ ಗೆಲುವು ಸಾಧಿಸಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗಬೇಕು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ ಆಗಿತ್ತು. ಆದರೆ, ಆಗಿದ್ದೇ ಬೇರೆ. ಭಾರಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿರುವುದು ಆಡಳಿತಾರೂಢ ಬಿಜೆಪಿಗೆ ನಾಯಕರನ್ನು ಕಂಗಾಲಾಗುವಂತೆ ಮಾಡಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ ಪಾಳಯದಲ್ಲೂ ಆತಂಕ ಮನೆ ಮಾಡುವಂತೆ ಮಾಡಿದೆ.
ಶಿರಾದಲ್ಲಿ ಭರ್ಜರಿ ಮತದಾನವಾಗಿರುವ ಹಿನ್ನೆಲೆಯಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಮತದಾರ ಪ್ರಭುಗಳು ನೀಡಿದ ತೀರ್ಪು ಯಾರ ಕೊರಳಿಗೆ ವಿಜಯದ ಮಾಲೆಯಾಗಿ ಬೀಳಿದೆ ಎಂಬುದಕ್ಕೆ ನ.10ರವರೆಗೆ ಕಾಯಲೇಬೇಕಾಗಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: BJPby electionCongressJDSpollingRR NagarSira
ShareTweetSendShare
Join us on:

Related Posts

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

by Shwetha
March 29, 2026
0

ರಾಜ್ಯ ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಹಾಗೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬ ಕನಸು ಹೊತ್ತಿರುವ ನಾಡಿನ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಅನುಭವಿ ವೃತ್ತಿಪರರಿಗೆ ಕರ್ನಾಟಕ ರಾಜ್ಯ ಕಂದಾಯ...

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

by Shwetha
March 29, 2026
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ಹಾಗೂ ಇಸ್ರೇಲ್ ಪ್ರವಾಸದ ಕುರಿತು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್...

ಪರೀಕ್ಷೆ ನಡೆಯುತ್ತಿರುವಾಗಲೇ ಎಸ್ಎಸ್ಎಲ್ಸಿ ಅಂಕ 525ಕ್ಕೆ ಇಳಿಕೆ: ಮಕ್ಕಳ ಭವಿಷ್ಯದ ಜೊತೆ ಸರ್ಕಾರದ ಕ್ರೂರ ಚೆಲ್ಲಾಟ –  ಸುರೇಶ್ ಕುಮಾರ್

ಪರೀಕ್ಷೆ ನಡೆಯುತ್ತಿರುವಾಗಲೇ ಎಸ್ಎಸ್ಎಲ್ಸಿ ಅಂಕ 525ಕ್ಕೆ ಇಳಿಕೆ: ಮಕ್ಕಳ ಭವಿಷ್ಯದ ಜೊತೆ ಸರ್ಕಾರದ ಕ್ರೂರ ಚೆಲ್ಲಾಟ – ಸುರೇಶ್ ಕುಮಾರ್

by Shwetha
March 29, 2026
0

ಬೆಂಗಳೂರು: ರಾಜ್ಯದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಅತ್ಯಂತ ಆತಂಕ ಹಾಗೂ ಶ್ರದ್ಧೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಬರೆಯುತ್ತಿರುವಾಗಲೇ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ತರಾತುರಿಯ ದಿಢೀರ್...

ಪರಮಾತ್ಮ ಬಂದ್ರೂ ಹಿಂದೆ ಸರಿಯಲ್ಲ ಎಂದಿದ್ದ ಸಾದಿಕ್ ಪೈಲ್ವಾನ್ ಬಂಡಾಯ ಕೊನೆಗೂ ಸುಖಾಂತ್ಯ  : ಚುನಾವಣಾ ಆಯೋಗ ಮೈಕ್‌ ಚಿಹ್ನೆ ಕೊಟ್ರು ಕಾಂಗ್ರೆಸ್ ಅಭ್ಯರ್ಥಿಗೆ ಪೈಲ್ವಾನ್ ಬೆಂಬಲ‌ ಶುರು!

ಪರಮಾತ್ಮ ಬಂದ್ರೂ ಹಿಂದೆ ಸರಿಯಲ್ಲ ಎಂದಿದ್ದ ಸಾದಿಕ್ ಪೈಲ್ವಾನ್ ಬಂಡಾಯ ಕೊನೆಗೂ ಸುಖಾಂತ್ಯ : ಚುನಾವಣಾ ಆಯೋಗ ಮೈಕ್‌ ಚಿಹ್ನೆ ಕೊಟ್ರು ಕಾಂಗ್ರೆಸ್ ಅಭ್ಯರ್ಥಿಗೆ ಪೈಲ್ವಾನ್ ಬೆಂಬಲ‌ ಶುರು!

by Shwetha
March 29, 2026
0

ಕಣದಿಂದ ಹಿಂದೆ ಸರಿಯುವಂತೆ ಹೇಳಲು ಸಾಕ್ಷಾತ್ ಪರಮಾತ್ಮನೇ ಧರೆಗಿಳಿದು ಬಂದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಗುಡುಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಬಂಡಾಯ...

ದಮ್ ಇದ್ರೆ ಬನ್ನಿ ಅಂದ್ರಿ, ಈಗ ಬಂದು ನಿಂತಿದ್ದೀನಿ ಎಂದ ಪ್ರದೀಪ್ ಈಶ್ವರ್‌ : ಹುಚ್ಚ ಎಂದು ಕೂಗಿ ಪ್ರದೀಪ್ ಈಶ್ವರ್ ಗೆ ಪೊರಕೆ ಚಪ್ಪಲಿ ತೋರಿಸಿದ ಬಿಜೆಪಿಗರು!

ದಮ್ ಇದ್ರೆ ಬನ್ನಿ ಅಂದ್ರಿ, ಈಗ ಬಂದು ನಿಂತಿದ್ದೀನಿ ಎಂದ ಪ್ರದೀಪ್ ಈಶ್ವರ್‌ : ಹುಚ್ಚ ಎಂದು ಕೂಗಿ ಪ್ರದೀಪ್ ಈಶ್ವರ್ ಗೆ ಪೊರಕೆ ಚಪ್ಪಲಿ ತೋರಿಸಿದ ಬಿಜೆಪಿಗರು!

by Shwetha
March 29, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ನೇರಾನೇರ ಸವಾಲುಗಳ ಅಖಾಡವಾಗಿ ಮಾರ್ಪಟ್ಟಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram