ಗೆಲುವಿಗೂ ಮುನ್ನವೇ `ಪವರ್ ಖಾತೆ ಮೇಲೆ ಮುನಿರತ್ನ ಕಣ್ಣು’
ಬೆಂಗಳೂರು : ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪಚುನಾವಣೆ ಮತದಾನ ನಿನ್ನೆ ಮುಗಿದಿದ್ದು, ಅಭ್ಯರ್ಥಿಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ಈ ಮಧ್ಯೆ ಗೆಲುವಿಗೂ ಮುನ್ನವೇ ಬಿಜೆಪಿ ಅಭ್ಯರ್ಥಿ ಮುನಿರತ್ನ ಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ ಕಾಂಗ್ರೆಸ್ ನಿಂದ ನಾವು ಹೊರ ಬಂದಾಗ ಕೆಲವರು ನಿಮಗೆ ಒಳ್ಳೆಯದಾಗಲಿ, ಒಳ್ಳೆಯ ಪೋರ್ಟ್ ಪೋಲಿಯೋ ಸಿಗಲಿ ಅಂತ ಶುಭಕೋರಿದ್ದರು.
ಅವರು ಸಹ ಹೇಳಿದ್ದಾರೆ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಅಂತ. ನನಗೆ ಆಶೀರ್ವಾದ ಮಾಡಿ ಕಳಿಸಿದವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.
ಪವರ್ ಖಾತೆಯನ್ನೇ ತಗೋ, ಪವರ್ ಖಾತೆಯನ್ನೇ ತಗೋ ಯಾರಿಗೂ ಬಿಟ್ಟುಕೊಡಬೇಡ ಅಂದಿದ್ದಾರೆ ಎಂದು ಗೆಲುವಿಗೂ ಮೊದಲೇ ಮಂತ್ರಿ ಸ್ಥಾನ, ಖಾತೆ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ : ಅರ್ನಬ್ ಬಂಧನ ಖಂಡಿಸಿದ ಬಿಜೆಪಿಗರಿಗೆ ದಿನೇಶ್ ಗುಂಡೂರಾವ್ ತಿರುಗೇಟು
ಇದೇ ವೇಳೆ ಮತದಾನದ ಬಗ್ಗೆ ಮಾತನಾಡಿ, ಕೊರೊನಾದಂತಹ ಸಂದರ್ಭದಲ್ಲಿ 45 % ಮತದಾನವಾಗಿರೋದು ಒಳ್ಳೆಯ ಮತದಾನ. ಕಳೆದ ಬಾರಿಗಿಂತ 7 % ಮತದಾನ ಕಡಿಮೆಯಾಗಿದೆ ಎಂದರು.
ಮತದಾನ ಕಡಿಮೆ ಆಗಿರುವುದು ಯಾರಿಗೆ ಲಾಭ ಎಂಬ ಪ್ರಶ್ನೆ ಉತ್ತರಿಸಿದ ಮುನಿರತ್ನ, ಕಳೆದ 134 ವರ್ಷಗಳಿಂದ ಅದನ್ನೇ ಹೇಳಿಕೊಂಡು ಬರುತ್ತಿದ್ದಾರೆ.
ಕಡಿಮೆ ಪಸೆರ್ಂಟೇಜ್ ಆದ್ರೆ ನಮಗೆ ಲಾಭ ಅಂತ ಹೇಳುತ್ತಾ ಬಂದಿದ್ದಾರೆ. ಆದ್ರೆ ಜನರು ತುಂಬಾ ಬುದ್ದಿವಂತರಿದ್ದು, ಅಭಿವೃದ್ಧಿ ಮಾಡಿದವರಿಗೆ ಜನರು ವೋಟ್ ಹಾಕುತ್ತಾರೆ.
ಇದನ್ನೂ ಓದಿ : ಸಂಪುಟ ವಿಸ್ತರಣೆ ಬಗ್ಗೆ ಕೇಳ್ಬೇಡಿ, ನನ್ನ ಮಂತ್ರಿಸ್ಥಾನ ಹೋಗುತ್ತೆ: ಸೋಮಶೇಖರ್
ಇದನ್ನ ಬಿಟ್ಟು ಮುಂದೆ ಜನರ ಜೊತೆ ಯಾವ ರೀತಿ ಬೆರೆಯಬೇಕು ಎಂಬುದು ಚಿಂತೆ ಮಾಡಿದ್ರೆ ಕಾಂಗ್ರೆಸ್ ಉಳಿಯುತ್ತೆ ಎಂದು ವ್ಯಂಗ್ಯ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










