ರಾಜಕೀಯ ತಿರುವು ಪಡೆದ ಪೂನಂ ಪಾಂಡೆ ಅಶ್ಲೀಲ ವಿಡಿಯೋ..!
ಸದಾ ಕಾಂಟ್ರವರ್ಸಿಗಳಿಂದಲೇ ಸುದಿಯಲ್ಲಿರುವ ವಿವಾದಾತ್ಮಕ ನಟಿ ಅಂದ್ರೆ ಅದು ಪೂನಂ ಪಾಂಡೆ. ಪತಿ ವಿರುದ್ಧ ದೂರು ದಾಖಲಾಗಿ ಬೀದಿ ರಂಪಾಟ ಮಾಡಿಕೊಂಡಿದ್ದು ಇತ್ತೀಚಿನ ಅವರ ಕಾಂಟ್ರವರ್ಸಿಗಳಲ್ಲಿ ಒಂದು.
ಸದಾ ಹಾಟ್ ಲುಕ್ ನಲ್ಲಿ ಅರೆಬೆತ್ತಲೆ ಫೋಟೋಗಳನ್ನ ಶೇರ್ ಮಾಡಿಕೊಂಡು ಕೆಲ ಅಭಿಮಾನಿಗಳನ್ನೂ ಸಹ ಸಂಪಾದಿಸಿರುವ ಪೂನಂ ಪಾಂಡೆ ಇತ್ತೀಚೆಗೆ ಗೋವಾದಲ್ಲಿ ವಿಡಿಯೋ ಒಂದನ್ನ ಶೂಟ್ ಮಾಡಿಸಿದ್ರು. ಆದರೀಗ ಅವರ ವಿಡಿಯೋಗೆ ತೀವ್ರ ವಿರೋಧ ವ್ಯಕ್ತವಾಗ್ತಾಯಿದ್ದು, ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.

ಹೌದು.. ಇತ್ತೀಚಿಗೆ ಹಾಟ್ ನಟಿ ಪೂನಂ ಪಾಂಡೆ ಗೋವಾದ ಕಾನಕೋಣದ ಚಾಪೋಲಿ ಡ್ಯಾಮ್ ಬಳಿ ಅಸಭ್ಯವಾಗಿ ವಿಡಿಯೋ ಶೂಟ್ ಮಾಡಿಸಿದ್ದರು.
ಈ ವಿಡಿಯೋ ಗೋವಾ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ನಟಿ ಪೂನಂ ಪಾಂಡೆ ತಿಂಗಳ ಹಿಂದೆ ಗೋವಾದ ಕಾನಕೋಣಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಕಾನಕೋಣದ ವಿವಿಧ ಬೀಚ್ ಗಳಲ್ಲಿ ತಿರುಗಾಡಿ ಫೊಟೊ ಶೂಟ್ ಮಾಡಸಿಕೊಂಡಿದ್ದಾರೆ. ಈ ಫೊಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಗಬ್ಬರ್ ಸಿಂಗ್ – ಪೈಲ್ವಾನ್ ಮಧ್ಯೆ ಅಹಂ ಯುದ್ಧ..!
ಈ ನಡುವೆ ಚಾಪೋಲಿ ಡ್ಯಾಮ್ ಬಳಿ ಅಸಭ್ಯ ವಿಡಿಯೋವನ್ನು ಮಾಡಿದ್ದಾರೆ. ಈ ಅಶ್ಲೀಲ ವಿಡಿಯೋಗೆ ಇದೀಗ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗ್ತಿದೆ. ಅಂದ್ಹಾಗೆ ಈ ವಿಡಿಯೋ ಗೋವಾ ರಾಜಕೀಯದಲ್ಲೂ ಸಂಚಲನ ಸೃಷ್ಟಿಮಾಡಿದೆ.
ಪೂನಂ ಪಾಂಡೆ ಬೆತ್ತಲೆಯಾಗಿರುವ ಒಂದು ನಿಮಿಷದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯರು ಹಾಗೂ ವಿರೋಧ ಪಕ್ಷಗಳು ಗೋವಾ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
ನಿರ್ಬಂಧಿತ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರದ ವಿರುದ್ಧ ವಿರೋಧ ಪಕ್ಷದವರು ಟೀಕಾಪ್ರಹಾರ ನಡೆಸುತ್ತಿದ್ದಾರೆ.
ಇನ್ನೂ ನಿರ್ಬಂಧಿತ ಪ್ರವೇಶವಾಗಿರುವ ಚಾಪೋಲಿ ಅಣೆಕಟ್ಟಿನ ಬಳಿ ಅಶ್ಲೀಲ ವಿಡಿಯೋ ಚಿತ್ರೀಕರಿಸುರುವ ಕುರಿತು ಗೋವಾ ಫಾರ್ವರ್ಡ್ ಪಾರ್ಟಿ ಪೊಲೀಸ್ ದೂರನ್ನು ಕೂಡ ದಾಖಲಿಸಿದೆ.
ಈ ವೀಡಿಯೋ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಉತ್ತೇಜನ ನೀಡುವಂತಿದ್ದು, ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕಾನಕೋಣಕ್ಕೆ ಅಪಮಾನವಾಗಿದೆ.
ಖ್ಯಾತ ಗಾಯಕ ವಿಜಯ್ ಏಸುದಾಸ್ ಕಾರಿಗೆ ಅಪಘಾತ
ಈ ವಿಡಿಯೋವನ್ನು ಸರ್ಕಾರಿ ಆಸ್ತಿಯಲ್ಲಿ ಹೇಗೆ ಚಿತ್ರೀಕರಿಸಲಾಗಿದೆ ಮತ್ತು ಯಾರ ಅನುಮತಿಯೊಂದಿಗೆ ಚಿತ್ರಿಸಲಾಗಿದೆ.
ಈ ಬಗ್ಗೆ ತನಿಖೆ ನಡೆಸಿ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗೋವಾ ಫಾರ್ವರ್ಡ್ ಪಾರ್ಟಿ ಆಗ್ರಹಿಸಿದೆ.
ಅಲ್ಲದೇ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಗೋವಾದ ಎಂಟರ್ಟೈನ್ ಮೆಂಟ್ ಸೊಸೈಟಿ ಸಾಮಾನ್ಯವಾಗಿ ಇಂಥವುಗಳಿಗೆ ಅನುಮತಿ ನೀಡುತ್ತದೆ.
ಚಾಪೋಲಿ ಅಣೆಕಟ್ಟು ಸಚಿವ ಫಿಲಿಪ್ ನೆರಿ ರೊಡ್ರಿಗಸ್ ನೇತೃತ್ವದ ರಾಜ್ಯ ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಗೆ ಬರುತ್ತದೆ.
ಡಾಲಿ “ರತ್ನನ್ ಪ್ರಪಂಚ”ದ ಶೂಟಿಂಗ್ ಗೆ ಮುಹೂರ್ತ ಫಿಕ್ಸ್..!
ಕಡಲತೀರಗಳಿಗೆ ಹೆಸರುವಾಸಿಯಾಗಿರುವ ರಾಜ್ಯವನ್ನು ಬಿಜೆಪಿ ‘ಅಶ್ಲೀಲ ತಾಣ’ವನ್ನಾಗಿ ಪರಿವರ್ತಿಸಿದೆ ಎಂದು ಗೋವಾ ಫಾರ್ವರ್ಡ್ ಪಕ್ಷದ ಮುಖಂಡ ದುರ್ಗದಾಸ್ ಕಾಮತ್ ಕಿಡಿಕಾರಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










