ಡಿಸೆಂಟ್ ಸ್ಟಾರ್ ರಮೇಶ್ ಅರವಿಂದ್ ಅಭಿನಯದ ನೂರೊಂದನೇ ಚಿತ್ರ ‘ಶಿವಾಜಿ ಸೂರತ್ಕಲ್’ ಸಿನಿಮಾದ ಟ್ರೈಲರ್ ಯೂಟ್ಯೂಬ್‍ನಲ್ಲಿ ಬಿಡೆಗಡಯಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ‘ಶಿವಾಜಿ ಸೂರತ್ಕಲ್’ ಸಿನಿಮಾ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಸಕತ್ ವೈರಲ್ ಆಗಿದೆ. ಪ್ರೀತಿ-ಪ್ರೇಮ-ತ್ಯಾಗದಂತಹ ಸಿನಿಮಾಗಳಲ್ಲಿ ಮನೋಜ್ಞ ಅಭಿನಯ ಮಾಡೋ ಮೂಲಕ ಹೆಂಗಳೆಯರ ಮನಗೆಲ್ಲುತ್ತಿದ್ದ ರಮೇಶ್, ಇದೀಗಾ ಆಕ್ಸಿಡೆಂಟ್ ಸಿನಿಮಾ ಬಳಿಕ ಅಂತಹದ್ದೇ ಡಿಟೆಕ್ಟಿವ್, ಹಾರಾರ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಕೆರಳುವಂತೆ ಮಾಡಿದೆ.
ಅಂಜನಾದ್ರಿ ಸಿನಿ ಕ್ರಿಯೆಷನ್ ಬ್ಯಾನರ್‍ನಲ್ಲಿ ಮೂಡಿಬಂದಿರುವ ಶಿವಾಜಿ ಸೂರತ್ಕಲ್ ಚಿತ್ರಕ್ಕೆ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ಬಂಡವಾಳ ಹಾಕಿದ್ದಾರೆ. ಚಿತ್ರಕ್ಕೆ ಅಕಾಶ್ ಶ್ರೀವತ್ಸ ಆಕ್ಷನ್ ಕಟ್ ಹೇಳಿದ್ದಾರೆ, ಹಾಗೇ ಜುದ್ಹ ಸಂದ್ಯೆ ಮೂಸಿಕ್ ಕಂಪೋಸ್ ಮಾಡಿದ್ರೆ, ಗುರುಪ್ರಸಾದ್ ಛಾಯಗ್ರಹಣ ಮಾಡಿದ್ದಾರೆ. ಚಿತ್ರದ ಸಾಹಿತ್ಯವನ್ನ ಜಯಂತ್ ಕಾಯ್ಕಿಣಿ ಬರೆದುಕೊಟ್ಟಿರೋದು ವಿಶೇಷವಾಗಿದೆ.
ಚಿತ್ರದಲ್ಲಿ ರಮೇಶ್ ಅರಂವಿದ್‍ಗೆ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್ ಸಾಥ್ ನೀಡಿದ್ದಾರೆ, ಉಳಿದಂತೆ ಅವಿನಾಶ್, ರಮೇಶ್ ಪಂಡಿತ್ ಚಿತ್ರದ ಮುಖ್ಯಭೂಮಿಕೆಯಲ್ಲಿಕಾಣಿಸಿಕೊಂಡಿದ್ದಾರೆ. ಇನ್ನ, ಇದೇ ಫೆಬ್ರವರಿ 21 ರಂದು ಶಿವಾಜಿ ಸೂರತ್ಕಲ್ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದ್ದು, ಪ್ರೇಕ್ಷಕರನ್ನ ಹೇಗೆ ಮೋಡಿ ಮಾಡಲಿದೆ ಎಂಬುದನ್ನ ಕಾದು ನೋಡಬೇಕಿದೆ








