milana nagaraj
ಡಾರ್ಲಿಂಗ್ ಕೃಷ್ಣಾ, ಮಿಲನಾ ನಾಗರಾಜ್ ಅನ್ನೋದಕ್ಕಿಂತ ಲವ್ ಮಾಕ್ಟೇಲ್ ಜೋಡಿ ಅಂತಲೇ ಫೇಮಸ್ ಆಗಿರುವ ಈ ಲವ್ ಬಡ್ರ್ಸ್ ನಿಜಜೀವನದಲ್ಲೂ ಪ್ರೇಮಿಗಳು ಅನ್ನೋ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಕಂಡ ಈ ಜೋಡಿ ಸದ್ಯ ಫೆಬ್ರವರಿ 14 ಅಂದ್ರೆ ವಾಲೆಂಟೈನ್ಸ್ ಡೇ ದಿನವೇ ಹಸೆಮೆಣೆ ಏರುತ್ತಿದ್ದು, ಇದಕ್ಕೆ ವಿಶೇಷ ಕಾರಣವೂ ಇದೆಯಂತೆ. ಸದ್ಯ ಈ ಜೋಡಿ ಲಾಕ್ ಮಾಕ್ಟೇಲ್-2 ನಲ್ಲಿ ಬ್ಯುಸಿಯಾಗಿದೆ. ಈಗಾಗಲೇ 60 ರಷ್ಟು ಚಿತ್ರೀಕರಣ ಸಹ ಮಾಡಿಮುಗಿಸಿದ್ದಾರೆ. ಈ ನಡುವೆ ನಟಿ ಮಿಲನಾ ನಾಗರಾಜ್ ಮದುವೆ ಬಗ್ಗೆ ಮತ್ತು ಮದುವೆ ಪ್ಲಾನಿಂಗ್ ಬಗ್ಗೆ ಒಂದಿಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. 
ಮತ್ತೆ ‘ಕಿರಿಕ್’ ಮಾಡ್ತೀವಿ ಎಂದ ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಇಬ್ಬರು ಕುಟುಂಬದವರು ಸೇರಿ ಈ ದಿನಾಂಕವನ್ನು ನಿಗದಿ ಮಾಡಿರುವುದಾಗಿ ಮಿಲನಾ ಹೇಳಿದ್ದಾರೆ. ಫೆಬ್ರವರಿ ಲಕ್ಕಿ ತಿಂಗಳು 2021 ಮೇ ಅಥವಾ ಜೂನ್ ತಿಂಗಳಲ್ಲಿ ಮದುವೆ ಬಗ್ಗೆ ಪ್ಲಾನ್ ಮಾಡಿದ್ವಿ. ಆದರೆ ಕೃಷ್ಣನ ಮನೆಯಲ್ಲಿ ಕೇಳಿಸಿದಾಗ ಫೆಬ್ರವರಿ 14ರಂದು ಡೇಟ್ ಬಂತು. ಬಳಿಕ ನಮ್ಮನೆಯಲ್ಲೂ ಕೇಳಿಸಿದಾಗ 14 ಅಂತನೇ ಬಂದಿರುವುದರಿಂದ ಎಲ್ಲರೂ ಸೇರಿ 14 ರಂದೆ ಮದುವೆ ದಿನಾಂಕ್ ಫಿಕ್ಸ್ ಮಾಡಿದ್ರು. ಫೆಬ್ರವರಿ ತಿಂಗಳು ತುಂಬಾ ಲಕ್ಕಿ. ಯಾಕಂದರೆ ಈ ವರ್ಷ ಜನವರಿ, ಫೆಬ್ರವರಿಯಲ್ಲಿ ಲವ್ ಮಾಕ್ಟೇಲ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 2021ರಲ್ಲೂ ಫೆಬ್ರವರಿಯಲ್ಲಿ ಮದುವೆ ಸೆಲೆಬ್ರೇಷನ್ ಇದೆ. ಹಾಗಾಗಿ ಫೆಬ್ರವರಿ ತುಂಬಾ ವಿಶೇಷ ಎಂದು ಹೇಳಿದ್ದಾರೆ. ಇದೇ ವೇಳೆ 6 ವರ್ಷದ ಹಿಂದೆ ಕೃಷ್ಣ ಮದುವೆ ಆಗುತ್ತಿಯಾ ಎಂದು ಕೇಳಿದ್ದಾಗ ಆಗ ನನಗೆ ಮದುವೆ ಯೋಚನೆ ಇರಲಿಲ್ಲ. ಇನ್ನೂ ಸಿನಿ ಜೀವನದ ಪ್ರಾರಂಭದ ಹಂತದಲ್ಲಿದ್ದೆ. ಆದರೆ ನಾವು ಸ್ನೇಹಿತರಾದ್ವಿ, ನಮ್ಮ ಯೋಚನೆಗಳು ಒಂದೆ ರೀತಿ ಇದೆ. ಹಾಗಾಗಿ ಇಬ್ಬರು ಮದುವೆ ಆಗುವ ನಿರ್ಧಾರ ಮಾಡಿದೆವು ಎಂದು ಹೇಳಿದ್ದಾರೆ.
ಇನ್ನೂ ಸಿನೆಮಾ ಮುಂದುವರೆಸುವ ವಿಚಾರವಾಗಿಯೂ ಮಾತನಾಡಿದ ಮಿಲನಾ ಮದುವೆ ನಂತರನೂ ಸಿನಿಮಾ ಮುಂದುವರೆಸುತ್ತೇನೆ ನಿರ್ದೇಶನ ಖಂಡಿತ ಮಾಡಲ್ಲ, ನಿರ್ದೇಶನದ ಕಡೆ ಒಲವಿಲ್ಲ. ಆದರೆ ಮದುವೆ ನಂತರನೂ ನಟನೆ ಮುಂದುವರೆಸುತ್ತೇನೆ ಎಂದು ತಿಳಿಸಿದ್ದಾರೆ.
milana nagaraj
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








