ಮು0ಬೈ: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವೈಮಾನಿಕ ಸಂಸ್ಥೆಯನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಏರ್ ಇಂಡಿಯಾ ಖರೀದಿಗೆ ಟಾಟಾ ಸಮೂಹ ಸಂಸ್ಥೆ ಆಸಕ್ತಿ ವಹಿಸಿದೆ ಎಂದು ಹೇಳಲಾಗಿದೆ. ಇದರ ಜತೆಗೆ ಏರ್ ಏಷ್ಯಾ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಅನ್ನು ವಿಲೀನ ಮಾಡುವುದರ ಬಗ್ಗೆಯೂ ಟಾಟಾ ಗ್ರೂಪ್ ಸಮಾಲೋಚನೆ ನಡೆಸಿದೆ.
೨೦೧೮ರಲ್ಲಿ ಶೇ. ೭೦ರಷ್ಟು ಏರ್ ಇಂಡಿಯಾ ಹಕ್ಕನ್ನು ಮಾರಲು ಕೇಂದ್ರ ಸರ್ಕಾರ ವಿಫಲ ಯತ್ನ ನಡೆಸಿತ್ತು. ಈ ಬಾರಿ ಪೂರ್ಣ ಪ್ರಮಾಣದಲ್ಲಿ ಮಾರಾಟ ಮಾಡಲು ಹೊರಟಿದ್ದು, ಏರ್ ಇಂಡಿಯಾದಲ್ಲಿ ತಾನು ಹೊಂದಿರುವ ಎಲ್ಲಾ ಷೇರುಗಳನ್ನೂ ಬಿಟ್ಟುಕೊಡಲು ಸರ್ಕಾರ ನಿರ್ಧರಿಸಿದೆ. ಏರ್ ಇಂಡಿಯಾ ಖರೀದಿಸಲು ಇಚ್ಛಿಸುವವರು ಮಾರ್ಚ್ ೧೭ರಷ್ಟರಲ್ಲಿ ಬಿಡ್ ಸಲ್ಲಿಸಬೇಕೆಂದು ಡೆಡ್‌ಲೈನ್ ವಿಧಿಸಿದೆ.
ಏರ್ ಇಂಡಿಯಾ ಖರೀದಿಸುವವರಿಗೆ ಮ್ಯಾನೇಜ್ಮೆಂಟ್ ಅಧಿಕಾರವನ್ನು ಸಂಪೂರ್ಣ ವರ್ಗಾಯಿಸಲಾಗುವುದು. ವೈಮಾನಿಕ ಸಂಸ್ಥೆಯ ಭಾರತ ಸರ್ಕಾರ ಹೊಂದಿರುವ ನೂರು ಪ್ರತಿಶತದಷ್ಟು ಷೇರು ಬಂಡವಾಳವನ್ನು ಮಾರಲಾಗುವುದು. ಏರ್ ಇಂಡಿಯಾ ಎಕ್ಸ್?ಪ್ರೆಸ್ ಸಂಸ್ಥೆಯ ಶೇ. ೧೦೦ ಷೇರುಗಳು ಹಾಗೂ ಏರ್ ಇಂಡಿಯಾ SಂಖಿS ಸಂಸ್ಥೆಯ ಶೇ. ೫೦ರಷ್ಟು ಪಾಲನ್ನೂ ಮಾರಲಾಗುವುದು ಎಂದು ಸರ್ಕಾರ ಹೇಳಿದೆ.








