ಮಡಿಕೇರಿ: ನೆರೆಯ ಕೇರಳ ರಾಜ್ಯದ ಗಡಿಭಾಗ ವೈನಾಡಿನಲ್ಲಿ ನಕ್ಸಲ್ ನಾಯಕ ಮುರುಗನ್ ಹತ್ಯೆ ಹಿನ್ನೆಲೆಯಲ್ಲಿ ಕಾಫಿನಾಡು ಕೊಡಗಿನಲ್ಲಿ ಪೊಲೀಸರು ಒಂದು ತಿಂಗಳ ಕಾಲ ಹೈ ಅಲರ್ಟ್‍ಗೆ ಆದೇಶ ನೀಡಲಾಗಿದೆ.
ಮಡಿಕೇರಿಯಲ್ಲಿ ಈ ವಿಷಯ ತಿಳಿಸಿದ ಐಜಿಪಿ ವಿಫುಲ್ ಕುಮಾರ್, ರಾಜ್ಯದ ಚಾಮರಾಜನಗರ, ಮೈಸೂರು, ದಕ್ಷಿಣಕನ್ನಡ ವ್ಯಾಪ್ತಿಯಲ್ಲೂ ಅಲರ್ಟ್ ಮಾಡಲಾಗಿದೆ. ಜತೆಗೆ ಕೊಡಗಿನಲ್ಲಿ ಮತ್ತೊಂದು ಎಎನ್‍ಎಫ್ ತಂಡ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತೀವ್ರ ರೀತಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ
ಗಡಿಭಾಗದ ನಕ್ಸಲ್ ಚಟುವಟಿಕೆ ತಡೆಗಟ್ಟಲು ಮತ್ತೊಂದು ಆಂಟಿ ನಕ್ಸಲ್ ಪಡೆ ಸಿದ್ಧವಾಗಿದೆ. ಕೇರಳ, ತಮಿಳುನಾಡಿನ ಗಡಿ ಜಿಲ್ಲೆಯಾಗಿರುವ ಕೊಡಗಿನಲ್ಲಿ ಈಗಾಗಲೇ ಎರಡು ಆಂಟಿ ನಕ್ಸಲ್ ಪಡೆ ಕಾರ್ಯನಿರ್ವಹಿಸುತ್ತಿದ್ದು, ನಕ್ಸಲ್ ನಾಯಕ ಮುರುಗನ್ ಹತ್ಯೆ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಇನ್ನೊಂದು ಪಡೆಯನ್ನು ಕಾರ್ಯಚರಣೆಗೆ ಸಿದ್ಧಪಡಿಸಲಾಗಿದೆ. ಈ ಪಡೆ ಕೊಡಗು ಹಾಗು ಮೈಸೂರು ಜಿಲ್ಲೆಗಳ ಗಡಿಭಾಗಗಳಲ್ಲಿ ಕಾರ್ಯಪ್ರವೃತ್ತವಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕೊಡಗು ಪ್ರವಾಸದಲ್ಲಿರುವ ಗೃಹ ಸಚಿವ ಬಸವರಾಜ ಬೊಮ್ಮಯಿ, ಜಿಲ್ಲಾವರಿಷ್ಠಾಧಿಕಾರಿಗಳ ಕಛೇರಿಗೆ ಭೇಟಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ನಂತರ ಮಾಧ್ಯಮಗಳ ಜತೆ ಮಾಡಿದ ಬೊಮ್ಮಾಯಿ, ಕೊಡಗು ಪೆÇಲೀಸರು ಕಳೆದ ಎರಡು ವರ್ಷಗಳ ಪ್ರಾಕೃತಿಕ ವಿಕೋಪ ಹಾಗು ಕೋವಿಡ್ ಸಂದರ್ಭಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆಯು ನಿಜಕ್ಕೂ ಶ್ಲಾಘನೀಯ ಕೆಲಸ ನಿರ್ವಹಿಸಿದೆ. ಪರಿಸ್ಥಿತಿಯನ್ನು ಮನಗಂಡು ಕಾರ್ಯನಿರ್ವಹಿಸುವುದರೊಂದಿಗೆ ಸಾರ್ವಜನಿಕರಿಗೆ ಸಹಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ ಎಂದರು.
ಕೋವಿಡ್ ಲಾಕ್‍ಡೌನ್ ವೇಳೆ ಕ್ರೈಂ ರೇಟ್ ಕುಸಿತ
ಕೊಡಗಿನಲ್ಲಿ ಕೋವಿಡ್ ಸಂದರ್ಭ ಗಣನೀಯವಾಗಿ ಕ್ರೈಂ ರೇಟ್ ಕಡಿಮೆ ಆಗಿದ್ದು, ಮುಂದಿನ ದಿನಮಾನಗಳಲ್ಲಿಯೂ ಕೊಲೆ, ಅತ್ಯಾಚಾರದಂತಹ ಗಂಭೀರ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಇಲಾಖೆ ಇನ್ನಷ್ಟು ಕಟ್ಟುನಿಟ್ಟಾಗುವಂತೆ ಸಲಹೆ ನೀಡಲಾಗಿದೆ ಎಂದರು.
ಆನೆ-ಮಾನವ ಸಂಘರ್ಷ ಪರಿಹಾರಕ್ಕಾಗಿ ಆಗ್ರಹ
ಕೊಡಗಿನಲ್ಲಿ ಆನೆ ಮಾನವ ಸಂಘರ್ಷ, ಬೆಳೆ ಹಾನಿ ಹಾವಳಿ ಹೆಚ್ಚಾಗಿದೆ. ಈ ಕುರಿತು ನಷ್ಟ ಅನುಭವಿಸಿದ ಕೃಷಿಕನಿಗೆ ಹಾಗು ಕುಟುಂಬಕ್ಕೆ ಪರಿಹಾರ ಧನವನ್ನು ಹೆಚ್ಚಿಗೆ ನೀಡುವಂತೆ ಮುಖ್ಯಮಂತ್ರಿ ಹಾಗು ಉಸ್ತುವಾರಿ ಸಚಿವರೊಂದಿಗೆ ಮಾತನಾಡುವುದಾಗಿ ಬೊಮ್ಮಾಯಿ ಭರವಸೆ ನೀಡಿದರು.

ವೇಶ್ಯಾವಾಟಿಕೆ, ರೇವ್ ಪಾರ್ಟಿಗಳಿಗೆ ಕಡಿವಾಣ
ಕೊಡಗಿನಲ್ಲಿ ಅಕ್ರಮ ಹೋಂಸ್ಟೇ ಹಾಗು ವೇಶ್ಯೆವಾಟಿಕೆ, ಹನಿಟ್ರಾಪ್, ಡ್ರಗ್ಸ್ ಪಾರ್ಟಿ, ರೇವ್ ಪಾರ್ಟಿಗಳು ಹಿಂದಿನಿಂದಲೂ ನಡೆಯುತ್ತ ಬರುತ್ತಿವೆ. ಈ ಹಿಂದೆಯೂ ಹಲವು ಪ್ರಕರಣಗಳನ್ನು ಪೊಲೀಸ್ ಇಲಾಖೆ ಭೇದಿಸಿದೆ. ಮುಂದಿನ ದಿನಮಾನಗಳಲ್ಲಿ ಈ ಕುರಿತು ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಸರಕಾರವು ಡ್ರಗ್ಸ್ ವಿರುದ್ಧ ಧ್ವನಿ ಎತ್ತಿದ್ದು ಈ ಜಾಲವನ್ನು ಬುಡಸಮೇತ ಕಿತ್ತುಹಾಕಲು ಕೆಲಸ ನಿರ್ವಹಿಸುತ್ತದೆ ಎಂದು ಗೃಹ ಸಚಿವರು ಭರವಸೆ ನೀಡಿದರು.
ಗೋಹತ್ಯೆ ನಿಷೇಧ ಕ್ರಮ-ಬೊಮ್ಮಾಯಿ
ಕೊಡಗಿನಲ್ಲಿ ಗೋಹತ್ಯೆ ನಿಷೇಧವಿದ್ದರು ಕೆಲವೊಂದು ಕಡೆಗಳಲ್ಲಿ ಅಕ್ರಮ ಗೋಹತ್ಯೆ ಹಾಗು ಮಾಂಸ ಮಾರಾಟ ಜಾಲ ಕಾಣಿಸಿಕೊಳ್ಳುತ್ತಿದೆ. ಈ ಕುರಿತು ಕಾನೂನು ಕ್ರಮ ಜರುಗಿಸಿ ಈ ಜಾಲವನ್ನು ಸಂಪೂರ್ಣ ಭೇದಿಸಲಾಗುವುದು ಎಂದರು.
ಖಾಲಿ ಇರುವ ಸ್ಥಾನ ತುಂಬಲು ಕ್ರಮ
ಕೊಡಗು ಪೊಲೀಸ್ ಇಲಾಖೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಿವಿಲ್ ಸರ್ವೀಸ್‍ನ 95 ಹಾಗು ಇತರ ವಿಭಾಗದ 35 ಹುದ್ದೆಗಳನ್ನು ಎರಡು ವರ್ಷದೊಳಗೆ ಪೂರ್ತಿಯಾಗಿ ಭರ್ತಿ ಮಾಡಲಾಗುವುದು. ಈ ವರ್ಷದಲ್ಲಿಯೇ ಶೇಕಡಾ 70% ಖಾಲಿ ಜಾಗದ ಭರ್ತಿ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಎಂದರು.
ಇದರೊಂದಿಗೆ ಕೊಡಗಿನ ಗುಡ್ಡಗಾಡು ಪ್ರದೇಶಗಳಲ್ಲಿ ಓಡಾಡಲು ಪೊಲೀಸ್ ಇಲಾಖೆಗೆ ಯೋಗ್ಯವಾದ ನೂತನ ಜೀಪುಗಳು, ವಾಹನ ಹಾಗು ಹಳೆಯ ವಾಹನಗಳನ್ನು ಬದಲಿಸುವ ಕೆಲಸವು ಆಗುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಲವ್ ಜಿಹಾದ್ ಕಡಿವಾಣಕ್ಕೆ ಕಠಿಣ ಕಾನೂನು..!
ಲವ್ ಜಿಹಾದ್ ಕಳೆದ ಒಂದು ದಶಕದಿಂದ ಸಮಾಜಕ್ಕೆ ಪಿಡುಗಾಗಿ ಕಾಡುತ್ತಿದೆ. ಈ ಪಿಡುಗನ್ನು ಬುಡಸಮೇತ ಕಿತ್ತು ಹಾಕಲು ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತದೆ. ಈ ಪಿಡುಗಿನಿಂದ ಹಲವು ಯುವಕ, ಯುವತಿಯರ ಜೀವನ ನರಕವಾಗಿದೆ.
ಮೆಡಿಕಲ್ ನಲ್ಲಿ ಕಾನೂನು ಬಾಹಿರವಾಗಿ ಯುವಕರಿಗೆ ಮಾದಕವಸ್ತುಗಳ ಮಾರಾಟ ಜಾಲ ಕೊಡಗಿನಲ್ಲಿ ಪತ್ತೆಯಾಗಿದೆ. ಈ ಕುರಿತು ಇಲಾಖೆ ಗಂಭೀರವಾಗಿ ಮುಂದಿನ ದಿನಮಾನಗಳಲ್ಲಿ ಕ್ರಮಕೈಗೊಳ್ಳುತ್ತದೆ. ಮೆಡಿಕಲ್ ಶಾಪ್‍ಗಳಿಗೆ ದಿಢೀರ್ ರೈಡ್ ಹಾಗು ಪರವಾನಿಗೆ ಪರಿಶೀಲನೆ, ಔಷಧಿಗಳ ಪರಿಶೀಲನೆ ಕ್ರಮ ಕೈಗೊಳ್ಳಲಾಗುತ್ತದೆ ಬೊಮ್ಮಾಯಿ ವಿವರಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








