ಯುಎಸ್ ಅಧ್ಯಕ್ಷೀಯ ಚುನಾವಣೆ : ಗೆಲುವು ನಮ್ದೇ ಎಂದ ಬಿಡೆನ್
ವಾಷಿಂಗ್ಟನ್ : ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಸೂಪರ್ ಓವರ್ ನಂತಾಗಿದೆ. ಭಾರಿ ಕುತೂಹಲಕ್ಕೆ ಕಾರಣವಾಗಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಮತ ಎಣಿಕೆ ಮುಂದುವರಿದ್ದು, ರೋಚಕ ಹಂತಕ್ಕೆ ತಲುಪಿದೆ.
ಅದರಲ್ಲೂ ಹಾಲಿ ಅಧ್ಯಕ್ಷ ಟ್ರಂಪ್ ಮುನ್ನಡೆಯಲ್ಲಿದ್ದ ರಾಜ್ಯಗಳಲ್ಲಿ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಟ್ರಂಪ್ ಗೆ ಗೆಲುವು ಇನ್ನೂ ದೂರ ಸರಿದಿದೆ.
ಈ ಮಧ್ಯೆ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಗೆಲುವು ನಮ್ಮದೇ. ನಾವು ಈ ಚುನಾವಣೆಯಲ್ಲಿ ಗೆಲುವು ದಾಖಲಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾವು 300ಕ್ಕೂ ಅಧಿಕ ಇಲೆಕ್ಟೋರಲ್ ಮತಗಳನ್ನು ಗೆಲ್ಲುವ ಹಾದಿಯಲ್ಲಿದ್ದೇವೆ. ನಾವು ಪೆನ್ಸಿಲ್ವೇನಿಯಾ ರಾಜ್ಯವನ್ನು ಗೆಲ್ಲುತ್ತಿದ್ದೇವೆ. ಈ ಸ್ಪರ್ಧೆಯಲ್ಲಿ ಗೆಲುವು ನಮ್ಮದೇ. ಮತ ಎಣಿಕೆ ನಿಧಾನವಾಗುತ್ತಿದೆ ಎಂದು ನನಗೆ ಗೊತ್ತಿದೆ.
ಎಲ್ಲ ಬೆಂಬಲಿಗರೂ ತಾಳ್ಮೆಯನ್ನು ಕಾಯ್ದುಕೊಳ್ಳಬೇಕು”
ವಾಟ್ಸಾಪ್ ಮೂಲಕ ಹಣ ರವಾನಿಸಲು ಯಾವುದೇ ಶುಲ್ಕವಿಲ್ಲ – ಮಾರ್ಕ್ ಜುಕರ್‌ಬರ್ಗ್
ಈ ಚುನಾವಣೆಯ ಫಲಿತಾಂಶವು ಕೋವಿಡ್, ಆರ್ಥಿಕತೆ, ಹವಾಮಾನ ಬದಲಾವಣೆ ಹಾಗೂ ದೇಶವನ್ನು ಕಾಡುತ್ತಿರುವ ವ್ಯವಸ್ಥಿತ ವರ್ಣಭೇದ ನೀತಿಯ ಕುರಿತು ನೀಡಿರುವ ಜನಾದೇಶವಾಗಿದೆ.
ಕೋವಿಡ್-19 ಸಾಂಕ್ರಾಮಿಕ ರೋಗ ಹೆಚ್ಚು ಆತಂಕದ ವಿಷಯವಾಗಿದ್ದು, ಅಮೆರಿಕಕ್ಕೆ ಆರ್ಥಿಕತೆಯನ್ನು ಪುನರ್‍ನಿರ್ಮಿಸಲು ಇದು ಸರಿಯಾದ ಸಮಯವಾಗಿದೆ” ಎಂದರು.
ಇದೇ ವೇಳೆ ಟ್ರಂಪ್ ವಿರುದ್ಧ ಕಿಡಿಕಾರಿರುವ ಜೋ, ಮತ ಎಣಿಕೆ ನಿಲ್ಲಿಸಲು ಯಾರೆಲ್ಲ ಪ್ರಯತ್ನಿಸುತ್ತಿದ್ದಾರೆ ಎಂಬುದಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ.
ನಾವು ಪ್ರಜಾಪ್ರಭುತ್ವದಲ್ಲಿ ಬಲವಾದ ಅಭಿಪ್ರಾಯಗಳನ್ನು ಹೊಂದಿದ್ದೇವೆ. ಆದರೆ ರಾಜಕೀಯದ ಉದ್ದೇಶ ರಾಷ್ಟ್ರಕ್ಕಾಗಿ ಕೆಲಸ ಮಾಡುವುದು. ನಾವು ವಿರೋಧಿಗಳಾಗಿರಬಹುದು. ಆದರೆ ನಾವು ಶತ್ರುಗಳಲ್ಲ, ನಾವು ಅಮೆರಿಕನ್ನರು ಎಂದು ಹೇಳಿದ್ದಾರೆ.
ತಪ್ಪು ತಿಳುವಳಿಕೆಯನ್ನು ಮಾತುಕತೆ ಮೂಲಕ ಬಗೆಹರಿಸಬಹುದು – ನೇಪಾಳ ಪ್ರಧಾನಿ
ಸಿಎನ್‍ಎನ್ ಪ್ರಕ್ಷೇಪಗಳ ಪ್ರಕಾರ ಬೈಡನ್ ಪೆನ್ಸಿಲ್ವೇನಿಯಾ, ಜಾರ್ಜಿಯಾ, ನೆವಾಡಾ ಮತ್ತು ಅರಿಝೋನಾ ರಾಜ್ಯಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ. ಟ್ರಂಪ್ ಉತ್ತರ ಕೆರೊಲಿನಾದಲ್ಲಿ ಮುನ್ನಡೆ ಗಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










