ತಪ್ಪು ತಿಳುವಳಿಕೆಯನ್ನು ಮಾತುಕತೆ ಮೂಲಕ ಬಗೆಹರಿಸಬಹುದು – ನೇಪಾಳ ಪ್ರಧಾನಿ misunderstanding resolved through talk
ಕಠ್ಮಂಡ್, ನವೆಂಬರ್07: ಇಬ್ಬರು ನೆರೆಹೊರೆಯವರ ನಡುವಿನ ಯಾವುದೇ ತಪ್ಪು ತಿಳುವಳಿಕೆಯನ್ನು ಮಾತುಕತೆಗಳ ಮೂಲಕ ಬಗೆಹರಿಸಬಹುದು ಎಂದು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಹೇಳಿದ್ದಾರೆ. misunderstanding resolved through talk
ಶುಕ್ರವಾರ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾನೆ ಅವರನ್ನು ಭೇಟಿ ಮಾಡಿದ್ದಾರೆ.
3 ದಿನಗಳ ಭೇಟಿಯಲ್ಲಿ ಬುಧವಾರ ನೇಪಾಳಕ್ಕೆ ಆಗಮಿಸಿದ ಜನರಲ್ ನಾರವಾನೆ, ನವದೆಹಲಿಗೆ ತೆರಳುವ ಮುನ್ನ ನೇಪಾಳದ ಪ್ರಧಾನಿಯನ್ನು ಭೇಟಿಯಾದರು.
ಸಭೆಯಲ್ಲಿ, ಒಲಿ ಮತ್ತು ಜನರಲ್ ನಾರವಾನೆ ಅವರು ವಿವಿಧ ದ್ವಿಪಕ್ಷೀಯ ವಿಷಯಗಳ ಬಗ್ಗೆ ಮಾತನಾಡಿದ್ದಾರೆ ಎಂದು ಪ್ರಧಾನಿ ವಿದೇಶಾಂಗ ಸಂಬಂಧಗಳ ಸಲಹೆಗಾರ ರಾಜನ್ ಭಟ್ಟರೈ ಹೇಳಿದರು.
ಬ್ರಿಟಿಷ್ ಯುಗದ ಐಪಿಸಿ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಚಿಂತನೆ
ಗುರುವಾರ, ಜನರಲ್ ನಾರವಾನೆ ಅವರಿಗೆ ನೇಪಾಳ ಸೇನೆಯ ಜನರಲ್ ಗೌರವ ಪ್ರಶಸ್ತಿಯನ್ನು ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ನೀಡಿದರು.
ರಾಷ್ಟ್ರಪತಿಗಳ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಒಲಿ, ಭಾರತೀಯ ರಾಯಭಾರಿ ವಿನಯ್ ಎಂ. ಕ್ವಾತ್ರಾ ಮತ್ತು ಉಭಯ ದೇಶಗಳ ಹಿರಿಯ ಗಣ್ಯರು ಭಾಗವಹಿಸಿದ್ದರು.
ವಿವಾದಿತ ಪ್ರದೇಶಗಳನ್ನು ತನ್ನ ಹೊಸ ರಾಜಕೀಯ ಭೂಪಟದಲ್ಲಿ ಸೇರಿಸಿದ ನಂತರ ಭಾರತ ಮತ್ತು ನೇಪಾಳ ನಡುವಿನ ಸಂಬಂಧ ಹದಗೆಟ್ಟಿತು.
ಕಳೆದ ನವೆಂಬರ್ ನಂತರ ದೇಶಗಳ ಗಡಿ ವಿವಾದದ ಬಳಿಕ ನೇಪಾಳಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿ ಜನರಲ್ ನಾರವಾನೆ.
17,000 ಅಡಿ ಎತ್ತರದಲ್ಲಿ ಲಿಪುಲೆಖ್ ಪ್ರದೇಶಕ್ಕೆ ಭಾರತದ ರಸ್ತೆ ನಿರ್ಮಾಣದ ನಂತರ ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧ ಬಿಗಡಾಯಿಸಿತು.
ಭಾರತ ಮತ್ತು ನೇಪಾಳದ ನಡುವಿನ ಆ ಪ್ರದೇಶವನ್ನು ನೇಪಾಳ ತನ್ನ ಪ್ರದೇಶವೆಂದು ಹೇಳಿಕೊಂಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ದೇಶದ ತಾಯಂದಿರು ಮತ್ತು ಹೆಣ್ಣುಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿರುವುದರಿಂದ ಮೋದಿ ಗೆಲ್ಲುತ್ತಾರೆ – ಫೋರ್ಬ್ಸ್ಗಂಜ್ನಲ್ಲಿ ಪ್ರಧಾನಿ ಹೇಳಿಕೆhttps://t.co/cispJjnIWB
— Saaksha TV (@SaakshaTv) November 7, 2020
ಪ್ರೋಟೀನ್ ನಿಂದ ಸಮೃದ್ಧವಾಗಿರುವ 8 ರುಚಿಯಾದ ಹಣ್ಣುಗಳುhttps://t.co/19w0puYwTB
— Saaksha TV (@SaakshaTv) November 6, 2020