ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಡೆಯಲು ನಿನ್ನೆ ಕೇಂದ್ರ ಸರ್ಕಾರ ಸೋಂಕು ದೃಢಪಟ್ಟ ಜಿಲ್ಲೆಗಳ ಲಾಕ್ ಡೌನ್ ಗೆ ಆದೇಶ ನೀಡಿದೆ.
ಅದರಂತೆ ರಾಜ್ಯದ 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ ಈ 9 ಜಿಲ್ಲೆಗಳಲ್ಲಿ ಲಾಕ್ ಡೌನ್ ಎಫೆಕ್ಟ್ ಕಂಡು ಬಂದಿಲ್ಲ. ಅದರಲ್ಲೂ ಸಿಲಿಕಾನ್ ಸಿಟಿ-ವಿದ್ಯಾವಂತರ ನಗರಿ ಅನಿಸಿಕೊಳ್ಳೋ ಬೆಂಗಳೂರಿನಲ್ಲೇ ಲಾಕ್ ಡೌನ್ ಬಿಸಿ ತಟ್ಟಿಲ್ಲ . ಹೀಗಾಗಿ ಬೆಂಗಳೂರನ್ನು ಸಂಪೂರ್ಣ ಲಾಕ್ ಡೌನ್ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಅನ್ನೋ ಟೀಕೆ ಸಹ ಕೇಳಿ ಬಂದಿದೆ.
ರಸ್ತೆಗಿಳಿದ ಆಟೋ, ಕ್ಯಾಬ್, ಖಾಸಗಿ ಬಸ್ ಗಳು..
ಹೌದು, ನಿನ್ನೆ ಸರ್ಕಾರ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿತ್ತು. ಆದ್ರೆ ಇಂದು ಎಲ್ಲ ಸಹಜವಾಗಿದೆ ಅನ್ನೋ ಹಾಗೆ ಆಟೋ, ಕ್ಯಾಬ್, ಖಾಸಗಿ ಬಸ್ ಗಳು ರಸ್ತೆಗೆ ಇಳಿದಿವೆ. ಬಿಎಂಟಿಸಿಯಿಂದ ಕೂಡ ಬಸ್ ಸೇವೆ ಆರಂಭವಾಗಿದೆ. ಸರ್ಕಾರಿ ಕಚೇರಿ ಕೆಲಸಗಾರರು ಹಾಗೂ ಕೂಲಿ ಕಾರ್ಮಿಕರು ಓಡಾಟ ಶುರುಮಾಡಿದ್ದಾರೆ. ಸಾರ್ವಜನಿಕರು ತಮ್ಮ ಸ್ವಂತ ವಾಹನಗಳಲ್ಲಿ ಹೆಚ್ಚಾಗಿ ಓಡಾಡುತ್ತಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಅನ್ನೋ ಮಹಾಮಾರಿ ಏನೋ ಸಹಜ ಪರಿಣಾಮ ಅಂತಾ ಜನ ನಡೆದುಕೊಳ್ತಾ ಇರೋದು ಮಾತ್ರ ತೀವ್ರ ಆತಂಕಕ್ಕೆ ಕಾರಣವಾಗಿದೆ. ಅಂದಹಾಗೆ ವಿಶ್ವದಾದ್ಯಂರ ಕೊರೊನಾ ಸೋಂಕಿತರ ಸಂಖ್ಯೆ 3 ಲಕ್ಷ 37 ಸಾವಿರಕ್ಕೂ ಅಧಿಕವಾಗಿದ್ದರೆ, ಸಾವಿನ ಸಂಖ್ಯೆ 15 ಸಾವಿರದ ಗಡಿ ತಲುಪುತ್ತಿದೆ. ನಮ್ಮ ದೇಶದಲ್ಲೇ ನಿನ್ನೆ ಒಂದೇ ದಿನದಲ್ಲಿ 80 ಹೊಸ ಕೇಸ್ ಗಳು ದೃಢಪಟ್ಟಿವೆ. ಈಗ ನೀವೇ ಯೋಚಿಸಿ..









