Kottur town panchayat
ಕೊಟ್ಟೂರು ಪಟ್ಟಣ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ
ಬಳ್ಳಾರಿ : ಕೊಟ್ಟೂರು ಪಟ್ಟಣ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ ಸೇರಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆ ಗೆಲುವಿನ ಕೇಕೆ ಹಾಕಿದೆ. ಅಧ್ಯಕ್ಷರಾಗಿ ಭಾರತಿ ಸುಧಾಕರ್ ಪಾಟೀಲ್ ಆಯ್ಕೆಯಾದ್ರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಫಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ದೀಪಾವಳಿ ಹಬ್ಬದ ಪಟಾಕಿ ಖುಷಿ ಠುಸ್: ಇಂದು ಬ್ಯಾನ್ ಗೈಡ್‍ಲೈನ್ಸ್ ಪ್ರಕಟ ಸಾಧ್ಯತೆ..!
ಪಟ್ಟಣ ಪಂಚಾಯತ್ ಚುನಾವಣೆ ನಡೆದ ಎರಡು ವರ್ಷಗಳ ಬಳಿಕ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಗೆ 11 ಮತಗಳು ಬಂದಿದ್ದರೇ, ಬಿಜೆಪಿ ಪರ 07 ಮತಗಳು ಬಂದಿವೆ.
ಇನ್ನು ಈ ಗೆಲುವು ಜನತೆಯ ಗೆಲುವೆಂದು ಕಾಂಗ್ರೆಸ್ ಶಾಸಕ ಭೀಮಾನಾಯಕ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಇದು ಜನಾಭಿಪ್ರಾಯಕ್ಕೆ ಸಂದ ಜಯ. ಈ ದಿನ ಹಬೊಹಳ್ಳಿ ಕ್ಷೇತ್ರದ ಶ್ರೀ ಗುರು ಕೊಟ್ಟೂರೇಶ್ವರರ ಸನ್ನಿಧಾನ ಕೊಟ್ಟೂರು ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷಯಾಗಿ ಕಾಂಗ್ರೆಸ್ ನ ಶ್ರೀಮತಿ ಭಾರತಿ ಸುಧಾಕರ ಪಾಟೀಲ್ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶ್ರೀ ಷಫಿ ಆಯ್ಕೆಯಾಗಿದ್ದಾರೆ.
ಶಾಲಾ-ಕಾಲೇಜು ಆರಂಭಕ್ಕೆ ಆತುರ ಬೇಡ.. ಹುಷಾರ್ : ಹೆಚ್ ಡಿಕೆ
ಚುನಾವಣೆ ನಡೆದು 2 ವರ್ಷ ನಂತರ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಪರ 11 ಮತ್ತು ಬಿಜೆಪಿ ಪರ 07 ಮತಗಳು ಚಲಾವಣೆಗೊಂಡು, ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ನ ಈ ಗೆಲುವು ಕೊಟ್ಟೂರು ಜನತೆಯ ಗೆಲುವಾಗಿದ್ದು, ಅಭಿವೃದ್ಧಿ ಪಥಕ್ಕೆ ಅಧಿಕಾರವೇ ಮೆಟ್ಟಿಲು ಎನ್ನುವ ನಾಣ್ನುಡಿಗೆ ಜಯ ಸಿಕ್ಕಂತಾಗಿದೆ.
ಸದಾಕಾಲ ಹಿಂಬಾಗಿಲು ಮೂಲಕ ಅಧಿಕಾರ ಹಿಡಿಯಲು ಹವಣಿಸುವ ಬಿಜೆಪಿಯು ಇನ್ನು ಮುಂದಾದರೂ ಜನಾಭಿಪ್ರಾಯವನ್ನು ಗೌರವಿಸಿ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ವರ್ಗಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
ಇತ್ತ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










