ADVERTISEMENT
Saturday, July 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ದೀಪಾವಳಿ ಸಂಭ್ರಮಕ್ಕೆ ಎನ್‍ಜಿಟಿ ಗುನ್ನಾ: ದೆಹಲಿಯಲ್ಲಿ ಪಟಾಕಿ ಬ್ಯಾನ್, ಕರ್ನಾಟಕಕ್ಕೆ ಗ್ರೀನ್ ಪಟಾಕಿ..!

Kariyappa N by Kariyappa N
November 9, 2020
in Newsbeat, Politics, Samagra karnataka, ದೇಶ - ವಿದೇಶ
pataki ban
Share on FacebookShare on TwitterShare on WhatsappShare on Telegram

ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ದೀಪಾವಳಿ ಹಬ್ಬದ ದಿನಗಳಲ್ಲಿ ಭರ್ಜರಿ ಪಟಾಕಿ ಸಿಡಿಸಲು ತಯಾರಿ ನಡೆಸಿದ್ದವರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‍ಜಿಟಿ) ಹಬ್ಬದ ಸಂಭ್ರಮಕ್ಕೆ ಬರೆ ಎಳೆದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ರಾತ್ರಿಯಿಂದ ನವೆಂಬರ್ 30ರವರೆಗೂ ಪಟಾಕಿ ಮಾರಾಟ ಮಾಡುವುದು, ಸಿಡಿಸುವುನ್ನು ನಿಷೇಧಿಸಿ ಎನ್‍ಜಿಟಿ ಆದೇಶ ಹೊರಡಿಸಿದೆ.

green trubunal
ದೆಹಲಿ-ಎನ್‍ಸಿಆರ್ ವ್ಯಾಪ್ತಿಯಲ್ಲಿ ಹಸಿರು ಪಟಾಕಿ ಸೇರಿದಂತೆ ಎಲ್ಲಾ ರೀತಿಯ ಪಟಾಕಿಗಳ ಮಾರಾಟ, ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಆದೇಶ ಜಾರಿಗೆ ಬರಲಿದೆ.
ಕಳೆದ ತಿಂಗಳಿಗೆ ಹೋಲಿಸಿದರೆ ಈ ವರ್ಷ ದೆಹಲಿಯಲ್ಲಿ ವಾಯು ಗುಣಮಟ್ಟ ತೀರಾ ಹದಗೆಟ್ಟಿದೆ. ಇದೀಗ ದೀಪಾವಳಿಯೂ ಸಮೀಪಿಸಿರುವುದರಿಂದ ಪಟಾಕಿಯಿಂದ ವಾಯುಮಾಲಿನ್ಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ, ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ.
ಪಟಾಕಿ ನಿಷೇಧ ಕೋರಿ ಇಂಡಿಯನ್ ಸೋಷಿಯಲ್ ರೆಸ್ಪಾನ್ಸಿಬಲಿಟಿ ನೆಟ್‍ವರ್ಕ್ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ನವೆಂಬರ್ 5ರಂದು ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯೆಲ್ ನೇತೃತ್ವದ ಹಸಿರು ಪೀಠ, ಇಂದು ಆದೇಶ ಪ್ರಕಟಿಸಿದೆ.
ಕಳೆದ ವರ್ಷದ ನವೆಂಬರ್‍ನಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಪ್ರಮಾಣದಲ್ಲಿ ಹಾಗೂ ವಾಯು ಮಾಲಿನ್ಯವು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿರುವ ದೇಶದ ಇತರ ನಗರ ಮತ್ತು ಪಟ್ಟಣಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Related posts

Road Safety Awareness

Bng – ವೈಟ್‌ಫೀಲ್ಡ್‌ನ ಪಾರ್ಸೆಕ್‌ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!

July 4, 2026
kylian mbappe

fifaworldcup-2026- ಮೈದಾನದಲ್ಲಿ ರಕ್ಕಸ.. ಬಡವರ ಪಾಲಿಗೆ ದೇವದೂತ.. ಫುಟ್‌ಬಾಲ್ ಜಗತ್ತಿನ ಭವಿಷ್ಯದ ಮಹಾರಾಜ..!

July 4, 2026

pollusion
ಕಳೆದ ವರ್ಷದ ನವೆಂಬರ್‍ ನಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಪ್ರಮಾಣದಲ್ಲಿ ಹಾಗೂ ವಾಯು ಮಾಲಿನ್ಯವು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿರುವ ದೇಶದ ಇತರ ನಗರ ಮತ್ತು ಪಟ್ಟಣಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದು ಎನ್‍ಜಿಟಿ ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರಗಳಿಗೆ ಅಧಿಕಾರ..!
ಗಾಳಿಯ ಗುಣಮಟ್ಟವು ‘ಮಧ್ಯಮ’ ಅಥವಾ ‘ಸಾಮಾನ್ಯ’ವಾಗಿ ಇರುವ ನಗರ ಮತ್ತು ಪಟ್ಟಣಗಳಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು, ಬಳಸಲು ಅವಕಾಶ ನೀಡಬಹುದು. ದೀಪಾವಳಿ, ಕ್ರಿಸ್‍ಮಸ್, ಚತ್ ಪೂಜೆ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೇವಲ ಎರಡು ಗಂಟೆಗಳ ಕಾಲ ಪಟಾಕಿ ಸುಡುವುದಕ್ಕೆ ಅವಕಾಶ ನೀಡಿ ಸಂಬಂಧಿಸಿದ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಬಹುದು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ
ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ವಾಯುಮಾಲಿನ್ಯ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು ಎಂದೂ ಆದೇಶದಲ್ಲಿ ಹೇಳಲಾಗಿದೆ.

ವಾಯು ಗುಣಮಟ್ಟದ ಇಂಡೆಕ್ಸ್ ನಿಗದಿ ಹೇಗೆ..!
ಶೂನ್ಯದಿಂದ 50AQI =ಉತ್ತಮ ಗುಣಮಟ್ಟ
51ರಿಂದ 100AQI =ಸಮಾಧಾನಕಾರ ಗುಣಮಟ್ಟ
101ದಿಂದ 200 AQI =ಸಾಮಾನ್ಯ ಗುಣಮಟ್ಟ
2001ರಿಂದ 300 AQI =ಕಳಪೆ ಗುಣಮಟ್ಟ
301ರಿಂದ 400 AQI = ತೀರಾ ಕಳಪೆ ಗುಣಮಟ್ಟ
401ರಿಂದ 500 AQI = ಚಿಂತಾಜನಕ ಮಟ್ಟ

ಕರ್ನಾಟಕ ಹಾಗೂ ಬೆಂಗಳೂರು ನಗರದ ಸ್ಥಿತಿ ಹೇಗಿದೆ…!
ರಾಜ್ಯ ರಾಜಧಾನಿ ಬೆಂಗಳೂರು ಕೂಡ ಮಾಲಿನ್ಯಪೀಡಿತ ನಗರಗಳ ಪಟ್ಟಿಗೆ ಸೇರಿದೆ. ದೆಹಲಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಅಷ್ಟೊಂದು ಕೆಟ್ಟ ಸ್ಥಿತಿಯಲ್ಲಿ ಮಾಲಿನ್ಯದ ಮಟ್ಟ ತಲುಪಿಲ್ಲ. ಆದರೆ ದೆಹಲಿಯಲ್ಲಿ 400 AQI ಅಂಶಗಳ ಮೇಲಿರುವ ಕಾರಣ ವಾಯು ಮಾಲಿನ್ಯ ತೀರಾ ಕಳಪೆ ಹಾಗೂ ಚಿಂತಾಜನಕ ಮಟ್ಟದಲ್ಲಿದೆ.
ಬೆಂಗಳೂರು ನಗರದಲ್ಲಿ ಸರಾಸರಿ 100ರಿಂದ 150 AQI ಸೂಚ್ಯಂಕ ದಾಖಲಾಗಿದ್ದು, ಸಾಮಾನ್ಯ ಗುಣಮಟ್ಟ ಹೊಂದಿರುವ ವರ್ಗದಲ್ಲಿದೆ. ಎಲ್ಲಾ ಜಿಲ್ಲೆಗಳನ್ನು ಒಗ್ಗೂಡಿಸಿ ಕರ್ನಾಟಕದಲ್ಲಿ ಒಟ್ಟಾರೆ ಸುಮಾರು 143 AQI ಅಂಶದಷ್ಟು ವಾಯುಮಾಲಿನ್ಯ ದಾಖಲಾಗಿದೆ.

ಮಾಲಿನ್ಯ ಗುಣಮಟ್ಟದ ಝೋನ್‍ನಲ್ಲಿರುವ ಜಿಲ್ಲೆಗಳು
ಬೆಂಗಳೂರು ನಗರ-153 AQI (ಸಾಮಾನ್ಯ)
ಬೀದರ್-321 AQI (ತೀರಾ ಕಳಪೆ)
ಚಾಮರಾಜನರ-320 AQI (ತೀರಾ ಕಳಪೆ)
ರಾಯಚೂರು-253 AQI (ಕಳಪೆ)
ಗಮನಿಸಬೇಕಾದ ಅಂಶವೆಂದರೆ ಚಾಮರಾಜನಗರ, ಬೀದರ್ ಜಿಲ್ಲೆಗಳು ವಾಯುಮಾಲಿನ್ಯ ಇಂಡೆಕ್ಸ್ ನಲ್ಲಿದ್ದು ತೀರಾ ಕಳಪೆ ಶ್ರೇಣಿಯಲ್ಲಿದ್ದರೆ, ರಾಯಚೂರು ಜಿಲ್ಲೆ ಕಳಪೆ ವಾಯುಮಾಲಿನ್ಯ ಇಂಡೆಕ್ಸ್ ಹೊಂದಿದೆ. ಬಹುತೇಕ ಜಿಲ್ಲೆಗಳು ಉತ್ತಮ ಗುಣಮಟ್ಟದ ಶ್ರೇಣಿಯಲ್ಲಿವೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Delhidiwali festgreen crackerskarnatakanational green tribunalno firecrackers
ShareTweetSendShare
Join us on:

Related Posts

Road Safety Awareness

Bng – ವೈಟ್‌ಫೀಲ್ಡ್‌ನ ಪಾರ್ಸೆಕ್‌ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!

by admin
July 4, 2026
0

​• ಸುರಕ್ಷಿತ ಸಂಚಾರಕ್ಕಾಗಿ ನೂತನ ಗ್ಯಾಲರಿ ಉದ್ಘಾಟನೆ * ವಾಸ್ತವ ಟ್ರಾಫಿಕ್ ಪರಿಸ್ಥಿತಿಯ ಪ್ರಾಯೋಗಿಕ ಕಲಿಕೆ * 'ಟ್ರಾಫಿಕ್ ಡಿಸೈನ್ ಚಾಲೆಂಜ್'ನ ಸಬ್ಮಿಷನ್ ಮುಕ್ತಾಯ * ಮುಂದಿನ...

kylian mbappe

fifaworldcup-2026- ಮೈದಾನದಲ್ಲಿ ರಕ್ಕಸ.. ಬಡವರ ಪಾಲಿಗೆ ದೇವದೂತ.. ಫುಟ್‌ಬಾಲ್ ಜಗತ್ತಿನ ಭವಿಷ್ಯದ ಮಹಾರಾಜ..!

by admin
July 4, 2026
0

ಕಾಲಿಗೆ ಸ್ಟಡ್ಸ್ ಕಟ್ಕೊಂಡು.. ಗಂಟೆಗೆ 38 ಕಿಲೋಮೀಟರ್ ವೇಗದಲ್ಲಿ ಓಡಾಡಿಕೊಂಡು.. ಚೆಂಡನ್ನು ಡ್ರಿಬ್ಲಿಂಗ್ ಮಾಡುತ್ತಾ.. ಎದುರಾಳಿ ಆಟಗಾರರನ್ನು ವಂಚಿಸುವ ಮಾಯಾಕಾರ..! ಫುಟ್‍ಬಾಲ್ ಅಂಗಣದ ಹಸಿರು ಹುಲ್ಲಿನ ಅಂಗಣದ...

ಬಿಡದಿ ಟೌನ್‌ಶಿಪ್ ದಂಗಲ್:ನಿಮ್ಮಿಂದ ರಿಪ್ಲೈ ಬಂದಿಲ್ಲ- ಬಿಡದಿ ರೈತರ ಕಣ್ಣೀರು ಒರೆಸಲು ಬನ್ನಿ: ಡಿಕೆಶಿಗೆ ಎಚ್‌ಡಿಕೆ ಖಡಕ್ ಪತ್ರ, ಜೂನ್ 27ಕ್ಕೆ ಮಹಾ ಮುಖಾಮುಖಿ?

ಮತದಾರರ ಹುಂಡಿ ಲೂಟಿಗೆ ಕಾಂಗ್ರೆಸ್ ಸ್ಕೆಚ್ -ಅಧಿಕಾರಿಗಳು ಸರ್ಕಾರದ ಗುಲಾಮರಾಗಿದ್ದಾರೆ:ವಿಡಿಯೋ ಸಾಕ್ಷಿ ಸಮೇತ ಹೆಚ್ ಡಿ ಕುಮಾರಸ್ವಾಮಿ ಗುಡುಗು!

by Shwetha
July 4, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಈಗ ದೊಡ್ಡ ಮಟ್ಟದ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್ ಸರ್ಕಾರವು ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣಾ ಅಕ್ರಮ ಎಸಗುತ್ತಿದೆ ಎಂದು...

ಪ್ರಜಾಪ್ರಭುತ್ವದ ಕೊನೆಯ ಭರವಸೆ ನ್ಯಾಯಾಂಗ ಮಾತ್ರ- ನ್ಯಾಯಾಂಗ ಸ್ಪಂದಿಸದಿದ್ದರೆ ಗಣರಾಜ್ಯದ ಪತನ ನಿಶ್ಚಿತ: ಸಿಜೆಐ ಸೂರ್ಯ ಕಾಂತ್ ಅವರಿಗೆ ಇಂಡಿಯಾ ಒಕ್ಕೂಟದ ಗಂಭೀರ ಎಚ್ಚರಿಕೆ!

ಪ್ರಜಾಪ್ರಭುತ್ವದ ಕೊನೆಯ ಭರವಸೆ ನ್ಯಾಯಾಂಗ ಮಾತ್ರ- ನ್ಯಾಯಾಂಗ ಸ್ಪಂದಿಸದಿದ್ದರೆ ಗಣರಾಜ್ಯದ ಪತನ ನಿಶ್ಚಿತ: ಸಿಜೆಐ ಸೂರ್ಯ ಕಾಂತ್ ಅವರಿಗೆ ಇಂಡಿಯಾ ಒಕ್ಕೂಟದ ಗಂಭೀರ ಎಚ್ಚರಿಕೆ!

by Shwetha
July 4, 2026
0

ನವದೆಹಲಿ: ದೇಶದ ಚುನಾವಣಾ ವ್ಯವಸ್ಥೆಯಲ್ಲಿ ವ್ಯವಸ್ಥಿತವಾಗಿ ಅಕ್ರಮಗಳು ನಡೆಯುತ್ತಿವೆ ಎಂದು ಗಂಭೀರವಾಗಿ ಆರೋಪಿಸಿರುವ ಇಂಡಿಯಾ ವಿರೋಧ ಪಕ್ಷಗಳ ಒಕ್ಕೂಟವು, ಈ ಆತಂಕಗಳಿಗೆ ನ್ಯಾಯಾಂಗವು ತಕ್ಷಣವೇ ಸ್ಪಂದಿಸದಿದ್ದರೆ ಭಾರತೀಯ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

₹2,000 ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಾಧ್ಯತೆ; ಶೀಘ್ರದಲ್ಲೇ ಮಾರ್ಗಸೂಚಿ

by Shwetha
July 4, 2026
0

ರಾಜ್ಯದ ಗೃಹಲಕ್ಷ್ಮಿ ಯೋಜನೆಯಲ್ಲಿ ಮೃತಪಟ್ಟವರು ಹಾಗೂ ಆದಾಯ ತೆರಿಗೆ (IT) ಮತ್ತು GST ಪಾವತಿದಾರರ ಖಾತೆಗಳಿಗೆ ಸಹ ಹಣ ಜಮೆಯಾಗಿರುವ ಪ್ರಕರಣಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram