ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ದೀಪಾವಳಿ ಹಬ್ಬದ ದಿನಗಳಲ್ಲಿ ಭರ್ಜರಿ ಪಟಾಕಿ ಸಿಡಿಸಲು ತಯಾರಿ ನಡೆಸಿದ್ದವರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‍ಜಿಟಿ) ಹಬ್ಬದ ಸಂಭ್ರಮಕ್ಕೆ ಬರೆ ಎಳೆದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ರಾತ್ರಿಯಿಂದ ನವೆಂಬರ್ 30ರವರೆಗೂ ಪಟಾಕಿ ಮಾರಾಟ ಮಾಡುವುದು, ಸಿಡಿಸುವುನ್ನು ನಿಷೇಧಿಸಿ ಎನ್‍ಜಿಟಿ ಆದೇಶ ಹೊರಡಿಸಿದೆ.
ದೆಹಲಿ-ಎನ್‍ಸಿಆರ್ ವ್ಯಾಪ್ತಿಯಲ್ಲಿ ಹಸಿರು ಪಟಾಕಿ ಸೇರಿದಂತೆ ಎಲ್ಲಾ ರೀತಿಯ ಪಟಾಕಿಗಳ ಮಾರಾಟ, ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಆದೇಶ ಜಾರಿಗೆ ಬರಲಿದೆ.
ಕಳೆದ ತಿಂಗಳಿಗೆ ಹೋಲಿಸಿದರೆ ಈ ವರ್ಷ ದೆಹಲಿಯಲ್ಲಿ ವಾಯು ಗುಣಮಟ್ಟ ತೀರಾ ಹದಗೆಟ್ಟಿದೆ. ಇದೀಗ ದೀಪಾವಳಿಯೂ ಸಮೀಪಿಸಿರುವುದರಿಂದ ಪಟಾಕಿಯಿಂದ ವಾಯುಮಾಲಿನ್ಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ, ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ.
ಪಟಾಕಿ ನಿಷೇಧ ಕೋರಿ ಇಂಡಿಯನ್ ಸೋಷಿಯಲ್ ರೆಸ್ಪಾನ್ಸಿಬಲಿಟಿ ನೆಟ್‍ವರ್ಕ್ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ನವೆಂಬರ್ 5ರಂದು ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯೆಲ್ ನೇತೃತ್ವದ ಹಸಿರು ಪೀಠ, ಇಂದು ಆದೇಶ ಪ್ರಕಟಿಸಿದೆ.
ಕಳೆದ ವರ್ಷದ ನವೆಂಬರ್‍ನಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಪ್ರಮಾಣದಲ್ಲಿ ಹಾಗೂ ವಾಯು ಮಾಲಿನ್ಯವು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿರುವ ದೇಶದ ಇತರ ನಗರ ಮತ್ತು ಪಟ್ಟಣಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಳೆದ ವರ್ಷದ ನವೆಂಬರ್ ನಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಪ್ರಮಾಣದಲ್ಲಿ ಹಾಗೂ ವಾಯು ಮಾಲಿನ್ಯವು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿರುವ ದೇಶದ ಇತರ ನಗರ ಮತ್ತು ಪಟ್ಟಣಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದು ಎನ್‍ಜಿಟಿ ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರಗಳಿಗೆ ಅಧಿಕಾರ..!
ಗಾಳಿಯ ಗುಣಮಟ್ಟವು ‘ಮಧ್ಯಮ’ ಅಥವಾ ‘ಸಾಮಾನ್ಯ’ವಾಗಿ ಇರುವ ನಗರ ಮತ್ತು ಪಟ್ಟಣಗಳಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು, ಬಳಸಲು ಅವಕಾಶ ನೀಡಬಹುದು. ದೀಪಾವಳಿ, ಕ್ರಿಸ್‍ಮಸ್, ಚತ್ ಪೂಜೆ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೇವಲ ಎರಡು ಗಂಟೆಗಳ ಕಾಲ ಪಟಾಕಿ ಸುಡುವುದಕ್ಕೆ ಅವಕಾಶ ನೀಡಿ ಸಂಬಂಧಿಸಿದ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಬಹುದು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ
ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ವಾಯುಮಾಲಿನ್ಯ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು ಎಂದೂ ಆದೇಶದಲ್ಲಿ ಹೇಳಲಾಗಿದೆ.
ವಾಯು ಗುಣಮಟ್ಟದ ಇಂಡೆಕ್ಸ್ ನಿಗದಿ ಹೇಗೆ..!
ಶೂನ್ಯದಿಂದ 50AQI =ಉತ್ತಮ ಗುಣಮಟ್ಟ
51ರಿಂದ 100AQI =ಸಮಾಧಾನಕಾರ ಗುಣಮಟ್ಟ
101ದಿಂದ 200 AQI =ಸಾಮಾನ್ಯ ಗುಣಮಟ್ಟ
2001ರಿಂದ 300 AQI =ಕಳಪೆ ಗುಣಮಟ್ಟ
301ರಿಂದ 400 AQI = ತೀರಾ ಕಳಪೆ ಗುಣಮಟ್ಟ
401ರಿಂದ 500 AQI = ಚಿಂತಾಜನಕ ಮಟ್ಟ
ಕರ್ನಾಟಕ ಹಾಗೂ ಬೆಂಗಳೂರು ನಗರದ ಸ್ಥಿತಿ ಹೇಗಿದೆ…!
ರಾಜ್ಯ ರಾಜಧಾನಿ ಬೆಂಗಳೂರು ಕೂಡ ಮಾಲಿನ್ಯಪೀಡಿತ ನಗರಗಳ ಪಟ್ಟಿಗೆ ಸೇರಿದೆ. ದೆಹಲಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಅಷ್ಟೊಂದು ಕೆಟ್ಟ ಸ್ಥಿತಿಯಲ್ಲಿ ಮಾಲಿನ್ಯದ ಮಟ್ಟ ತಲುಪಿಲ್ಲ. ಆದರೆ ದೆಹಲಿಯಲ್ಲಿ 400 AQI ಅಂಶಗಳ ಮೇಲಿರುವ ಕಾರಣ ವಾಯು ಮಾಲಿನ್ಯ ತೀರಾ ಕಳಪೆ ಹಾಗೂ ಚಿಂತಾಜನಕ ಮಟ್ಟದಲ್ಲಿದೆ.
ಬೆಂಗಳೂರು ನಗರದಲ್ಲಿ ಸರಾಸರಿ 100ರಿಂದ 150 AQI ಸೂಚ್ಯಂಕ ದಾಖಲಾಗಿದ್ದು, ಸಾಮಾನ್ಯ ಗುಣಮಟ್ಟ ಹೊಂದಿರುವ ವರ್ಗದಲ್ಲಿದೆ. ಎಲ್ಲಾ ಜಿಲ್ಲೆಗಳನ್ನು ಒಗ್ಗೂಡಿಸಿ ಕರ್ನಾಟಕದಲ್ಲಿ ಒಟ್ಟಾರೆ ಸುಮಾರು 143 AQI ಅಂಶದಷ್ಟು ವಾಯುಮಾಲಿನ್ಯ ದಾಖಲಾಗಿದೆ.
ಮಾಲಿನ್ಯ ಗುಣಮಟ್ಟದ ಝೋನ್‍ನಲ್ಲಿರುವ ಜಿಲ್ಲೆಗಳು
ಬೆಂಗಳೂರು ನಗರ-153 AQI (ಸಾಮಾನ್ಯ)
ಬೀದರ್-321 AQI (ತೀರಾ ಕಳಪೆ)
ಚಾಮರಾಜನರ-320 AQI (ತೀರಾ ಕಳಪೆ)
ರಾಯಚೂರು-253 AQI (ಕಳಪೆ)
ಗಮನಿಸಬೇಕಾದ ಅಂಶವೆಂದರೆ ಚಾಮರಾಜನಗರ, ಬೀದರ್ ಜಿಲ್ಲೆಗಳು ವಾಯುಮಾಲಿನ್ಯ ಇಂಡೆಕ್ಸ್ ನಲ್ಲಿದ್ದು ತೀರಾ ಕಳಪೆ ಶ್ರೇಣಿಯಲ್ಲಿದ್ದರೆ, ರಾಯಚೂರು ಜಿಲ್ಲೆ ಕಳಪೆ ವಾಯುಮಾಲಿನ್ಯ ಇಂಡೆಕ್ಸ್ ಹೊಂದಿದೆ. ಬಹುತೇಕ ಜಿಲ್ಲೆಗಳು ಉತ್ತಮ ಗುಣಮಟ್ಟದ ಶ್ರೇಣಿಯಲ್ಲಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel