ಉಪಚುನಾವಣೆ | ಕೇಸರಿ ಪಡೆ ಘರ್ಜನೆ.. ಕಮಕ್ ಕಿಮಕ್ ಎನ್ನದ ಕಾಂಗ್ರೆಸ್
ನವದೆಹಲಿ : ಮಂಗಳವಾರ ದೇಶದ 11 ರಾಜ್ಯಗಳ 59 ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಭಾರತೀಯ ಜನತಾ ಪಾರ್ಟಿ ಘರ್ಜಿಸಿದೆ. 59 ಸ್ಥಾನಗಳ ಪೈಕಿ ಬರೋಬ್ಬರಿ 41 ಸ್ಥಾನಗಳಲ್ಲಿ ಕೇಸರಿ ಪಡೆ ಜಯಭೇರಿ ಬಾರಿಸಿದೆ.
ಅದರಲ್ಲೂ ಕಾಂಗ್ರೆಸ್ ಪಕ್ಷದ ಅಧೀನದಲ್ಲಿದ್ದ 31 ಕ್ಷೇತ್ರಗಳನ್ನು ಈ ಉಪಚುನಾವಣೆಯಲ್ಲಿ ಬಿಜೆಪಿ ಕಿತ್ತುಕೊಂಡಿದೆ. ಮುಖ್ಯವಾಗಿ ಮಧ್ಯಪ್ರದೇಶ ಮತ್ತು ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷದ 26 ಸ್ಥಾನಗಳನ್ನು ಕೇಸರಿ ಪಡೆ ವಶಕ್ಕೆ ಪಡೆದಿದೆ.
ಗಜರಾತ್ ನಲ್ಲಿ ಎಂಟು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಇದರಲ್ಲಿ ಸೌರಾಷ್ಟ್ರ ಭಾಗದ ಐದು ಕ್ಷೇತ್ರಗಳು ಹಾಗೂ ಬುಡಕಟ್ಟು ಜನಾಂಗದ ಪ್ರಾಬಲ್ಯ ಇರುವ ದಂಗ್ ಕ್ಷೇತ್ರ ಸೇರಿವೆ.
ಇತ್ತ ಮಧ್ಯಪ್ರದೇಶದಲ್ಲಿ 28 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, 19 ಕ್ಷೇತ್ರಗಳಲ್ಲಿ ಬಿಜೆಪಿ ಗೆದಿದೆ. ಕಾಂಗ್ರೆಸ್ 9 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದು, 18 ಸ್ಥಾನಗಳನ್ನು ಕಳೆದುಕೊಂಡಿದೆ.
`ಕೈ’ ಭದ್ರಕೋಟೆಯಲ್ಲಿ ಕಮಲ ಕಲವರ
ಕೇವಲ ಗುಜರಾತ್, ಮಧ್ಯಪ್ರದೇಶ ಮಾತ್ರವಲ್ಲದೇ ಕಾಂಗ್ರೆಸ್ ನ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಮಣಿಪುರದಲ್ಲೂ ಬಿಜೆಪಿ ಗೆದ್ದು ಇತಿಹಾಸ ನಿರ್ಮಿಸಿದೆ.
ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು: ಅಭಿವೃದ್ಧಿ ಕಾರ್ಯಗಳಿಗೆ ಸಿಕ್ಕ ಜನಮನ್ನಣೆ-ಸಚಿವ ರಮೇಶ್ ಜಾರಕಿಹೊಳಿ
ಐದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಕ್ಷೇತ್ರಗಳಲ್ಲಿ ಗೆದ್ದರೇ ಕಾಂಗ್ರೆಸ್ ವಶದಲ್ಲಿದ್ದ ಮತ್ತೊಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ. ಆ ಮೂಲಕ ಮಣಿಪುರದಲ್ಲೂ ಕಾಂಗ್ರೆಸ್ ಕಂಗಾಲಾಗಿದೆ.
ಇನ್ನು ಉತ್ತರ ಪ್ರದೇಶಕ್ಕೆ ಬಂದ್ರೆ ಏಳು ಸ್ಥಾನಗಳ ಪೈಕಿ ಆರು ಬಿಜೆಪಿ ಪಾಲಾಗಿದ್ದರೆ, ಒಂದು ಸ್ಥಾನದಲ್ಲಿ ಸಮಾಜವಾದಿ ಪಕ್ಷ ಗೆಲುವಿನ ನಗೆ ಬೀರಿದೆ.
ಕರ್ನಾಟಕದಲ್ಲಿ ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲೂ ಬಿಜೆಪಿ ಜಯ ಸಾಧಿಸಿದೆ.
ಇತರ ಆರು ರಾಜ್ಯಗಳ 9 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸಿಂಹಪಾಲು ಪಡೆದುಕೊಂಡಿದೆ.
ಬೈ ಎಲೆಕ್ಷನ್ ಗೆದ್ದಾಯ್ತು, ಈಗ ಕ್ಯಾಬಿನೆಟ್ ಟೆನ್ಶನ್: ಕೊಟ್ಟ ಮಾತು ಉಳಿಸಿಕೊಳ್ತಾರ `ರಾಜಾಹುಲಿ’
ಒಟ್ಟಾರೆ ದೇಶದಲ್ಲಿ ದಿನದಿಂದ ದಿನಕ್ಕೆ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾ ಸಾಗುತ್ತಿದ್ದರೇ ಬಿಜೆಪಿ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತ ಎದುರಾಳಿಗಳಿಗೆ ಭಯ ಹುಟ್ಟಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel