-ದೊಡ್ಡ ಪ್ರಮಾಣದಲ್ಲಿ ಸಚಿವ ಸಂಪುಟ ವಿಸ್ತರಣೆ
-ಸಂಪುಟ ವಿಸ್ತರಣೆಯೋ, ಪುನಾರಚನೆಯೋ..!
ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲದ ಬಾವುಟ ಹಾರಿಸಿದ ಸಂಭ್ರಮದಲ್ಲಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕ್ಯಾಬಿನೆಟ್ ವಿಸ್ತರಣೆ ಹೊಸ ಟೆನ್ಶನ್ ಆಗಿ ಕಾಡುವ ಸಾಧ್ಯತೆ ಇದೆ.
ಆರ್.ಆರ್ ನಗರ ಉಪಚುನಾವಣೆ ಪ್ರಚಾರದ ಕೊನೆ ದಿನ ಅಖಾಡಕ್ಕೆ ಧುಮುಕಿದ್ದ ಸಿಎಂ ಯಡಿಯೂರಪ್ಪ, ಮುನಿರತ್ನ ಅವರನ್ನು ಗೆಲ್ಲಿಸಿ ಕಳಿಸಿ. ಮುನಿರತ್ನ ಗೆದ್ದರೆ, ಸಚಿವರಾಗುತ್ತಾರೆ. ನಾನು ಕೊಟ್ಟ ಮಾತನ್ನೂ ಎಂದೂ ತಪ್ಪಿಲ್ಲ ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದರು.
ಸಿಎಂ ಯಡಿಯೂರಪ್ಪ ಹೇಳಿದಂತೆ ಮುನಿರತ್ನ ಭರ್ಜರಿ 58 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಯಡಿಯೂರಪ್ಪ ಮುಂದೆ ಸಂಪುಟ ವಿಸ್ತರಣೆ ದೊಡ್ಡ ತಲೆನೋವಾಗುವ ಸಾಧ್ಯತೆ ಇದೆ.
ಕಾರಣ, ಕಳೆದ ತಿಂಗಳು ದೆಹಲಿಗೆ ಹೋಗಿದ್ದ ಸಿಎಂ ಬಿಎಸ್‍ವೈ, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಒತ್ತಾಯ ಮಾಡಿ ಬಂದಿದ್ರೂ ಅಲ್ಲಿಂದ ಯಾವುದೇ ರೆಸ್ಪಾನ್ಸ್ ಬಂದಿಲ್ಲ. ಇಂದಲ್ಲ..ನಾಳೆ ದಿಲ್ಲಿ ನಾಯಕರಿಂದ ಫೋನ್ ಬರುತ್ತೆ ಎಂದು ಯಡಿಯೂರಪ್ಪ ಕಾದು ಕುಳಿತಿದ್ದೇ ಆಯ್ತು. ಆದ್ರೆ ಅಷ್ಟರಲ್ಲೇ ಬಿಹಾರ ವಿಧಾನಸಭೆ ಚುನಾವಣೆ ಹಾಗೂ ಆರ್.ಆರ್ ನಗರ, ಶಿರಾ ಉಪಚುನಾವಣೆ ಘೋಷಣೆ ಆಯ್ತು. ಹೀಗಾಗಿ ಸಂಪುಟ ವಿಸ್ತರಣೆಗೆ ಒತ್ತಡ ಹೇರಲು ಇದ್ ಅವಕಾಶವೂ ಬಿಎಸ್‍ವೈ ತಪ್ಪಿಹೋಯ್ತು
ಒಂದೆಡೆ ನಾಯಕತ್ವ ಬದಲಾವಣೆಯ ಗುಮ್ಮ, ಮತ್ತೊಂದೆಡೆ, ಕಾಂಗ್ರೆಸ್-ಜೆಡಿಎಸ್‍ನಿಂದ ಹಾರಿ ಬಂದು ಬಿಜೆಪಿ ಸೇರಿ ಮಂತ್ರಿ ಸ್ಥಾನಕ್ಕಾಗಿ ಕಾದು ಕುಳಿತಿರುವ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಒಂದು ಕಡೆಯಾದರೆ, ಬಿಜೆಪಿಯಲ್ಲೇ ಬಿಎಸ್‍ವೈ ವಿರುದ್ಧ ಬುಸುಗುಟ್ಟುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ ಮತ್ತೊಂದು ಕಡೆ. ಹೀಗಾಗಿ ಬೈ ಎಲೆಕ್ಷನ್ ಗೆದ್ದರೂ ಯಡಿಯೂರಪ್ಪ ಸಂಪುಟ ವಿಸ್ತರಣೆ ಹೈಕಮಾಂಡ್ ನಾಯಕರು ಗ್ರೀನ್ ಸಿಗ್ನಲ್ ಕೊಡ್ತಾರ ಎಂಬ ಟೆನ್ಶನ್ ಮಾತ್ರ ಕಡಿಮೆಯಾಗದೇ ಡಬಲ್ ಆಗಿದೆ ಎಂದರೆ ತಪ್ಪಾಗಲಾರದು.
ದೊಡ್ಡ ಪ್ರಮಾಣದಲ್ಲಿ ಸಚಿವ ಸಂಪುಟ ವಿಸ್ತರಣೆ: ಯಡಿಯೂರಪ್ಪ ಹೇಳಿಕೆ
ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ. ಸಂಪುಟ ವಿಸ್ತರಣೆ ಜೇನಿನ ಗೂಡಿಗೆ ಕಲ್ಲು ಹಾಕಿದಂತೆ ಎಂಬುದು ಗೊತ್ತಿದ್ದರೂ ಉಪ ಚುನಾವಣಾ ಗೆಲುವಿನ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ದೊಡ್ಡ ಪ್ರಮಾಣದಲ್ಲಿ ಮಾಡಲು ಯೋಚಿಸಿದ್ದೇನೆ. ಕೆಲವರನ್ನು ಬಿಡಬೇಕು, ಇನ್ನು ಕೆಲವರನ್ನು ಸೇರಿಸಿಬೇಕು ಎಂದು ಯೋಚಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಈ ಕುರಿತು ನಾಳೆ ಅಥವಾ ನಾಡಿದ್ದು ದೂರವಾಣಿ ಮೂಲಕ ಪ್ರಧಾನಿ, ಅಮಿತ್ ಷಾ, ನಡ್ಡಾ ಅವರನ್ನು ಸಂಪರ್ಕಿಸಲಾಗುವುದು. ಬಳಿಕ ಹೈಕಮಾಂಡ್ ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಬಿಎಸ್‍ವೈ ಹೇಳಿದ್ದಾರೆ.
ಶಿರಾದಲ್ಲಿ ಇದೇ ಮೊದಲ ಬಾರಿ ಬಿಜೆಪಿ ಗೆಲುವಿನ ನಗೆ ಬೀರುವುದು ಇನ್ನಷ್ಟು ಖುಷಿ ನೀಡಿದೆ. ರಾಜ್ಯ ಸರ್ಕಾರ ಜನರ ಭಾವನೆಗೆ ಸ್ಪಂದಿರುವುದು ಮುಂದಿನ ದಿಕ್ಸೂಚಿಯಾಗಿದೆ. ಇನ್ನೆರಡು ವರ್ಷ ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಪೂರೈಸಲಾಗುವುದು ಎಂದರು.
ಕೊಟ್ಟ ಮಾತಿನಂತೆ ನಡೆಯುವೆ..
ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹಲವಾರು ಭರವಸೆಗಳನ್ನು ನೀಡಿದ್ದೇನೆ. ಅದರ ಪ್ರಕಾರವೇ ಅವುಗಳನ್ನು ಈಡೇರಿಸಲಾಗುವುದು. ಆರ್.ಆರ್ ನಗರ ಗೆಲುವು ಅತಿ ದೊಡ್ಡ ಗೆಲುವು. ಇದು ದೇಶದಲ್ಲಿ ಅತಿ ದೊಡ್ಡಗೆಲುವು. ಬಾಕಿ ಇರುವ ಮೂರು ಉಪ ಚುನಾವಣೆಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ಈ ಕ್ಷೇತ್ರಗಳಲ್ಲಿ ಅಭ್ಯರ್ಥಿ ಯಾರು ಎಂಬ ಕುರಿತು ದೆಹಲಿ ಭೇಟಿ ಬಳಿಕ ವರದಿ ತರಿಸಿಕೊಂಡು ನಿರ್ಧರಿಸಲಾಗುವುದು ಎಂದರು.
ಸಿದ್ದರಾಮಯ್ಯಗೆ ನಾನ್ಯಾಕೆ ಉತ್ತರ ಕೊಡಲಿ
ವಿಪಕ್ಷಗಳ ವಾಗ್ದಾಳಿ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿದ ಯಡಿಯೂರ್ಪ, ಸಿದ್ದರಾಮಯ್ಯ ಅವರಿಗೆ ನಾನ್ಯಾಕೆ ಉತ್ತರ ಕೊಡಲಿ ಎಂದು ಪ್ರಶ್ನಿಸಿದರು. ಯಾವಾಗಲೂ ಸಾಧನೆ ಮಾತಾಡಬೇಕು. ಈ ಚುನಾವಣೆಯಲ್ಲಿ ಪ್ರತಿಪಕ್ಷಗಳಿಗೆ ಜನರೇ ಉತ್ತರ ನೀಡಿದ್ದಾರೆ. ಇನ್ನು ಮುಂದಾದ್ರೂ ಸಿದ್ದರಾಮಯ್ಯ, ಪ್ರತಿಪಕ್ಷಗಳು ವಿಪಕ್ಷ ಸ್ಥಾನದಲ್ಲಿದ್ದು ಕೆಲಸ ಮಾಡಲಿ ಎಂದು ತಿರುಗೇಟು ನೀಡಿದರು.
ವಿಜಯೇಂದ್ರ ಸ್ಪರ್ಧಿಸಲ್ಲ..
ಕೆ.ಆರ್ ಪೇಟೆ ಬಳಿಕ ಶಿರಾದಲ್ಲಿ ಬಿಜೆಪಿ ಖಾತೆ ತೆರೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿ.ವೈ ವಿಜಯೇಂದ್ರ, ಮುಂಬರುವ ಬಸವಕಲ್ಯಾಣ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ವದಂತಿಗಳನ್ನು ಸಿಎಂ ತಳ್ಳಿ ಹಾಕಿದರು. ಬಿ ವೈ ವಿಜಯೇಂದ್ರ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ನಾಯಕರು ನಿರ್ಧರಿಸಿದರೇ ಯೋಚಿಸಲಾಗುವುದು ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel