ಶಾಸಕ ಸಿದ್ದು ಸವದಿ ಅಸಭ್ಯ ವರ್ತನೆ: ಡಿಕೆಶಿ ಹೇಳಿದ್ದೇನು..?
ಬೆಂಗಳೂರು : ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಪುರಸಭೆ ಸದಸ್ಯೆಯ ಕೈ ಹಿಡಿದು ಎಳೆದಾಡಿ, ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ್ದು, ರಾಜ್ಯದೆಲ್ಲೆಡೆ ಈ ಘಟನೆಗೆ ಖಂಡನೆ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯಿಸಿ, ಇದು ಬಿಜೆಪಿಯ ಸಂಸ್ಕøತಿ ಎಂದು ಎಂದಿದ್ದಾರೆ..
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿವಕುಮಾರ್, ತೇರದಾಳದ ಘಟನೆ ಬಿಜೆಪಿಯ ಸಂಸ್ಕøತಿಯನ್ನ ತೋರಿಸುತ್ತೆ.
‘ಬಂಡೆ’ ಪುಡಿಯಾಗಿದೆ, ‘ಹುಲಿಯಾ’ ಗೂಡು ಸೇರಿದೆ : ಕಟೀಲ್
ಪೊಲೀಸರ ಸಮ್ಮುಖದಲ್ಲಿ ಒಂದು ಹೆಣ್ಣು ಮಗಳನ್ನ ಎಳೆದಾಡಿದ್ದಾರೆ. ಈ ಘಟನೆ ಸರಿಯೋ ತಪ್ಪೋ ಅನ್ನೋದನ್ನ ಮುಖ್ಯಮಂತ್ರಿಗಳಿಗೆ ಬಿಟ್ಟು ಬಿಡುತ್ತೇನೆ.
ಈ ಪ್ರಕರಣವನ್ನ ಗಂಭೀರವಾಗಿ ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. ಬೇರೆ ಪ್ರಕರಣದಲ್ಲಿ ಪೊಲೀಸರು ಕೇಸ್ ಹಾಕ್ತಾರೆ.
ಆದರೆ ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಮುಂದುವರಿದು ಬಿಜೆಪಿ ವಿರುದ್ಧ ಕಿಡಿಕಾರಿದ ಡಿ.ಕೆ.ಶಿವಕುಮಾರ್, ಇತ್ತೀಚಿನ ದಿನಗಳಲ್ಲಿ ಯಾರಿಗೆ ಏನು ಬೇಕಾದರೂ ಮಾಡಬಹುದು ಎಂಬುದು ಬಿಜೆಪಿಗೆ ಅಭ್ಯಾಸ ಮತ್ತು ಹವ್ಯಾಸವಾಗಿದೆ.
ಲೀಡರ್, ಶಾಸಕರು ಯಾರ ಕಂಟ್ರೋಲ್ ನಲ್ಲಿ ಇಲ್ಲ. ಕಾರ್ಪೋರೇಟ್ ಕೌನ್ಸಿಲರ್ ಎಲ್ಲಾ ಕಡೆ ನಡೆಯುತ್ತದೆ ಎಂದು ದೂರಿದರು.
ಇನ್ನು ಪೊಲೀಸರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ನಾವು ಅದೇನು ಮಾಡುತ್ತಾರೆ ಅನ್ನೋದನ್ನು ನೋಡುತ್ತೇನೆ.
ಈ ಕುರಿತಾಗಿ ನಾನು ಹೆಚ್ಚು ಮಾತನಾಡುವುದಿಲ್ಲ. ಅದೇನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ನೋಡಿ ಮಾತನಾಡುತ್ತೇನೆ ಎಂದು ಘಟನೆ ಬಗ್ಗೆ ಗರಂ ಆದರು.
ದೀಪಾವಳಿ ಬಳಿಕ ಸಂಪುಟ ವಿಸ್ತರಣೆ : ಯಾರು ಇನ್..? ಯಾರು ಔಟ್..?
ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ವೇಳೆ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಪುರಸಭೆ ಸದಸ್ಯೆಯನ್ನು ಕೈ ಹಿಡಿದು ಎಳೆದಾಡಿ, ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel