ADVERTISEMENT
Monday, June 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಹಿಂದೂಗಳ ಹಬ್ಬಕ್ಕೆ ಶಾಸ್ತ್ರ ಹೇಳಬೇಡಿ, ಪಟಾಕಿ ಬ್ಯಾನ್ ವಾಪಸ್ ಪಡೀರಿ: ಬಿಎಸ್‍ವೈಗೆ ಯತ್ನಾಳ್ ತಾಕೀತು

Kariyappa N by Kariyappa N
November 11, 2020
in Newsbeat, Politics, Samagra karnataka, ರಾಜ್ಯ
basavanagouda-patil-yathnal
Share on FacebookShare on TwitterShare on WhatsappShare on Telegram

Related posts

ಎಚ್‌ಎಂಟಿ ಗಡಿಯಾರ ಮತ್ತೆ ಟಿಕ್ ಟಿಕ್ ಅನ್ನೋ ಕಾಲ ಹತ್ತಿರವಾಯಿತೇ? ಕುಮಾರಣ್ಣನ ಮಾಸ್ಟರ್ ಪ್ಲ್ಯಾನ್ ಏನು?

ಎಚ್‌ಎಂಟಿ ಗಡಿಯಾರ ಮತ್ತೆ ಟಿಕ್ ಟಿಕ್ ಅನ್ನೋ ಕಾಲ ಹತ್ತಿರವಾಯಿತೇ? ಕುಮಾರಣ್ಣನ ಮಾಸ್ಟರ್ ಪ್ಲ್ಯಾನ್ ಏನು?

June 14, 2026
ಸಂವಿಧಾನ ಉಳಿಸುವ ಮಾತು ಬಿಡಿ ಮೊದಲು ನಿಮ್ಮ ಜಿಲ್ಲೆಯ ಶಾಲೆಯನ್ನೇ ಉಳಿಸಿ: ಪ್ರಿಯಾಂಕ್ ಖರ್ಗೆ ವಿರುದ್ಧ ಆರ್ ಅಶೋಕ್ ಗರಂ

ಸಂವಿಧಾನ ಉಳಿಸುವ ಮಾತು ಬಿಡಿ ಮೊದಲು ನಿಮ್ಮ ಜಿಲ್ಲೆಯ ಶಾಲೆಯನ್ನೇ ಉಳಿಸಿ: ಪ್ರಿಯಾಂಕ್ ಖರ್ಗೆ ವಿರುದ್ಧ ಆರ್ ಅಶೋಕ್ ಗರಂ

June 14, 2026

ವಿಜಯಪುರ: ಮಾಲಿನ್ಯ ಹಾಗೂ ಉಸಿರಾಟದ ಸಮಸ್ಯೆ ಹೆಚ್ಚಳವಾಗುವ ಆತಂಕದ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ವೇಳೆ ಪಟಾಕಿ ಸುಡುವುದನ್ನು ಬ್ಯಾನ್ ಮಾಡಿರುವ ರಾಜ್ಯ ಬಿಜೆಪಿ ಸರ್ಕಾರ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕ್ರಮವನ್ನು ಸ್ವಪಕ್ಷದವರೇ ಆದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತರಾಟೆಗೆ ತೆಗೆದುಕೊಂಡಿದ್ದಾರೆ

yadiyurappa
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಯತ್ನಾಳ್, ಸಿಎಂಗೆ ಹೇಳುತ್ತೇನೆ ತಕ್ಷಣ ಪಟಾಕಿ ನಿಷೇಧ ಹಿಂಪಡೆಯಬೇಕು. ಕೇವಲ ಹಿಂದೂಗಳ ಹಬ್ಬಕ್ಕೆ ಶಾಸ್ತ್ರ ಹೇಳಬೇಡಿ. ವರ್ಷಕ್ಕೊಮ್ಮೆ ಬರುವ ಹಿಂದೂಗಳ ಭಾವನೆಗಳಿವು. ಹಿಂದೂಗಳ ಹಬ್ಬಕ್ಕೆ ಯಾಕೆ ಈ ಮಾತು. ಅಮೀರ್ ಖಾನ್ ನಾಗರಹಾವಿಗೆ ಯಾಕೆ ಹಾಲು ಎರೆಯುತ್ತೀರಿ ಎನ್ನುತ್ತಾರೆ. ಅಂಥವರನ್ನು ಪ್ರಶ್ನಿಸಬೇಕು, ಹೀಗಾಗಿ ತಕ್ಷಣ ಪಟಾಕ್ ಬ್ಯಾನ್ ವಾಪಸ್ ಪಡೆಯುವಂತೆ ತಾಕೀತು ಮಾಡಿದ್ದಾರೆ.

ದೀಪಾವಳಿ ಸಿಹಿಯಾಗುತ್ತೋ ಕಹಿಯಾಗುತ್ತೋ: ಯತ್ನಾಳ್ ಮಾತಿನ ಮರ್ಮವೇನು..!
ದೀಪಾವಳಿ ತಮ್ಮ ಪಾಲಿಗೆ ಸಿಹಿಯಾಗುತ್ತೋ ಕಹಿಯಾಗುತ್ತೊ ದೇವರಿಗೆ ಗೊತ್ತು, ನ.25ರವರೆಗೆ ಕಾಯಿರಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಹಲವು ಪ್ರಶ್ನೆಗಳನ್ನು ಎತ್ತಿದೆ.
ದೀಪಾವಳಿ ಯಾರ ಪಾಲಿಗೆ ಸಿಹಿಯಾಗುತ್ತೆ, ಅದು ತಮಗೆ ಸಚಿವರಾಗುವ ಅವಕಾಶದ ವಿಚಾರವೋ ಅಥವಾ ನಾಯಕತ್ವದ ಬದಲಾವಣೆಯ ಮೂಲಕ ಸಿಎಂ ಯಡಿಯೂರಪ್ಪ ಪಾಲಿಗೆ ಕಹಿಯಾಗುತ್ತೋ ಅಥವಾ ಕಾಂಗ್ರೆಸ್ ನಾಯಕರ ಪಾಲಿಗೆ ಮುಂದಿನ ದಿನಗಳಲ್ಲಿ ಸಂಕಷ್ಟಗಳು ಎದುರಾಗುತ್ತೋ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ನನಗೆ ಮಂತ್ರಿ ಸ್ಥಾನ ಬೇಡವೇ ಬೇಡ..!
ಒಂದೇ ಪಕ್ಷದಲ್ಲಿ ಕೆಲವೊಂದು ಸಮಸ್ಯೆಗಳಿರುತ್ತವೆ. ನಾನು ಸಚಿವನಾಗಲು ಎಂದೂ ಬೇಡಿಕೆ ಇಟ್ಟಿಲ್ಲ. ನನಗೆ ಮಂತ್ರಿ ಸ್ಥಾನವೂ ಬೇಡವೇ ಬೇಡ, ನಾನು ಸಚಿವನಾಗುವುದೇ ಇಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
ಸಚಿವ ವಿ. ಸೋಮಣ್ಣ ಮೂಲಕ ಸಿಎಂ ಸಂದೇಶ ಕಳುಹಿಸಿದ್ದಾರೆ. ಬೆಂಗಳೂರು ಮಾದರಿಯಲ್ಲಿ ಭೀಮಾ ಪ್ರವಾಹ ಸಂತ್ರಸ್ತರಿಗೂ 25 ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ. ನಾನು ವೈಯಕ್ತಿಕವಾಗಿ ಏನನ್ನೂ ಕೇಳಿಲ್ಲ.
ಈ ಭಾಗದ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿ ಕೊಡುವುದಾಗಿ ಸಿಎಂ ಹೇಳಿ ಕಳಿಸಿದ್ದಾರೆ. ಕೆಲಸ ಮಾಡುವವರಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಸಿಎಂ ಮಂಗಳೂರು ಕಾರ್ಯಕಾರಿಣಿಯಲ್ಲಿ ಹೇಳಿದ್ದಾರೆ.
ನನಗೆ ಹೆಚ್ಚಿನ ಅನುದಾನ ಸಿಗಲಿದೆ ಎಂದು ಯತ್ನಾಳ್ ತಿಳಿಸಿದ್ದಾರೆ.

ವಿನಯ್ ಕುಲಕರ್ಣಿ ಪ್ರಕರಣದಲ್ಲಿ ಪ್ರಧಾನಿ ಹಸ್ತಕ್ಷೇಪ ಮಾಡಿಲ್ಲ
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ವಿನಯ್ ಕುಲಕರ್ಣಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಸ್ತಕ್ಷೇಪ ಮಾಡಿಲ್ಲ. ಆ ವಿಷಯ ಕೋರ್ಟಿನಲ್ಲಿದೆ. ಸಿಬಿಐ ತನಿಖೆ ನಡೆಸುತ್ತಿದೆ.
ಸಿಬಿಐ ಮೇಲೆ ನಮಗೆ ವಿಶ್ವಾಸವಿದೆ. ನಿಷ್ಪಕ್ಷಪಾತವಾಗಿ ಅವರು ತನಿಖೆ ಮಾಡುತ್ತಾರೆ. ಅಲ್ಲಿ ಯಾವುದೇ ರಾಗ, ದ್ವೇಷ ಇರುವುದಿಲ್ಲ. ಅದರಲ್ಲಿ ಪ್ರಧಾನಿ ಹಸ್ತಕ್ಷೇಪ ಮಾಡಿಲ್ಲ. ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಿಲ್ಲ. ಕೇಂದ್ರ ಸಚಿವರು ಹಸ್ತಕ್ಷೇಪ ಮಾಡಿದ್ದಾರೆ ಎಂಬ ಆರೋಪಗಳು ಸುಳ್ಳಿನಿಂದ ಕೂಡಿವೆ. ಸಂಪೂರ್ಣ ತನಿಖೆಯಾಗಿ ನ್ಯಾಯ ಹೊರ ಬರಲಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿನಯ ಕುಲಕರ್ಣಿ ಪರ ಪಂಚಮಸಾಲಿ ಸ್ವಾಮೀಜಿಗಳ ಬ್ಯಾಟಿಂಗ್ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಧರ್ಮದ ಸ್ವಾಮೀಜಿಗಳು ಎಂದ ಯತ್ನಾಳ್, ದೇಶದಲ್ಲಿ ನಡೆದ ಎಲ್ಲ ಚುನಾವಣೆ, ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ದೇಶದ ಚಾಣಕ್ಯ ಅಮಿತ್ ಶಾ, ಜೆ. ಪಿ. ನಡ್ಡಾ, ಆಯಾ ರಾಜ್ಯಗಳ ಸಿಎಂ, ರಾಜ್ಯಾಧ್ಯಕ್ಷರು, ಬಿಜೆಪಿ ಕಾರ್ಯಕರ್ತರು ಕಾರಣ ಎಂದಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: B S YADIYURAPPABasanagowda Patil YatnalDeepavalidiwalifirecrackersparakipataki ban
ShareTweetSendShare
Join us on:

Related Posts

ಎಚ್‌ಎಂಟಿ ಗಡಿಯಾರ ಮತ್ತೆ ಟಿಕ್ ಟಿಕ್ ಅನ್ನೋ ಕಾಲ ಹತ್ತಿರವಾಯಿತೇ? ಕುಮಾರಣ್ಣನ ಮಾಸ್ಟರ್ ಪ್ಲ್ಯಾನ್ ಏನು?

ಎಚ್‌ಎಂಟಿ ಗಡಿಯಾರ ಮತ್ತೆ ಟಿಕ್ ಟಿಕ್ ಅನ್ನೋ ಕಾಲ ಹತ್ತಿರವಾಯಿತೇ? ಕುಮಾರಣ್ಣನ ಮಾಸ್ಟರ್ ಪ್ಲ್ಯಾನ್ ಏನು?

by Shwetha
June 14, 2026
0

ಬೆಂಗಳೂರು: ಒಂದು ಕಾಲದಲ್ಲಿ ಭಾರತದ ಕೈಗಾರಿಕಾ ಕ್ಷೇತ್ರದ ಬೆನ್ನೆಲುಬಾಗಿದ್ದ, ನಂತರ ಕಾಲಕ್ರಮೇಣ ಸೊರಗಿದ್ದ ಹಿಂದೂಸ್ತಾನ್‌ ಮಷೀನ್‌ ಟೂಲ್ಸ್‌ ಅಲಿಯಾಸ್ ಎಚ್‌ಎಂಟಿ ಸಂಸ್ಥೆಗೆ ಈಗ ಹೊಸ ಚೈತನ್ಯ ನೀಡಲು...

ಸಂವಿಧಾನ ಉಳಿಸುವ ಮಾತು ಬಿಡಿ ಮೊದಲು ನಿಮ್ಮ ಜಿಲ್ಲೆಯ ಶಾಲೆಯನ್ನೇ ಉಳಿಸಿ: ಪ್ರಿಯಾಂಕ್ ಖರ್ಗೆ ವಿರುದ್ಧ ಆರ್ ಅಶೋಕ್ ಗರಂ

ಸಂವಿಧಾನ ಉಳಿಸುವ ಮಾತು ಬಿಡಿ ಮೊದಲು ನಿಮ್ಮ ಜಿಲ್ಲೆಯ ಶಾಲೆಯನ್ನೇ ಉಳಿಸಿ: ಪ್ರಿಯಾಂಕ್ ಖರ್ಗೆ ವಿರುದ್ಧ ಆರ್ ಅಶೋಕ್ ಗರಂ

by Shwetha
June 14, 2026
0

ಟ್ವಿಟರ್‌ನಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ದೊಡ್ಡ ಭಾಷಣ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮ ಸ್ವಂತ ಜಿಲ್ಲೆಯ ಸರ್ಕಾರಿ ಕಾಲೇಜಿನ ಮೇಲ್ಛಾವಣಿಯನ್ನು ಉಳಿಸಿಕೊಳ್ಳುವ ಯೋಗ್ಯತೆಯೂ...

ಕುಮಾರಕೃಪಾ ಆಯ್ತು ಇನ್ನು ವಿಧಾನಸೌಧಕ್ಕೂ ಕಾದಿದೆಯಾ ಕುತ್ತು? ಡಿಕೆಶಿ ಪ್ಲ್ಯಾನ್ ನೋಡಿ ಕುಮಾರಣ್ಣ ಕಂಗಾಲಾಗಿದ್ದೇಕೆ?

ಕುಮಾರಕೃಪಾ ಆಯ್ತು ಇನ್ನು ವಿಧಾನಸೌಧಕ್ಕೂ ಕಾದಿದೆಯಾ ಕುತ್ತು? ಡಿಕೆಶಿ ಪ್ಲ್ಯಾನ್ ನೋಡಿ ಕುಮಾರಣ್ಣ ಕಂಗಾಲಾಗಿದ್ದೇಕೆ?

by Shwetha
June 14, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಕುಮಾರಕೃಪಾ ಅತಿಥಿಗೃಹದ ವಿಚಾರವಾಗಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿಯನ್ನಾಗಿ ಈ ಐತಿಹಾಸಿಕ ಕಟ್ಟಡವನ್ನು ಪರಿವರ್ತಿಸುವ ಸರ್ಕಾರದ ನಿರ್ಧಾರದ ವಿರುದ್ಧ...

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

by Shwetha
June 14, 2026
0

ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಪ್ರಾಪ್ತ ವಯಸ್ಸಿನವರ ಮದ್ಯಪಾನದ ಚಟಕ್ಕೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಈಗ ಕಠಿಣವಾದ ಕಾನೂನು ಅಸ್ತ್ರವನ್ನು ಪ್ರಯೋಗಿಸಿದೆ. ಇನ್ನು ಮುಂದೆ ಕರ್ನಾಟಕದಲ್ಲಿ...

ಬಿಜೆಪಿ ಬಿಟ್ಟು ಹಸ್ತ ಹಿಡಿಯುತ್ತಾರಾ ಪ್ರಮೋದ್ ಮಧ್ವರಾಜ್? ಕರಾವಳಿ ರಾಜಕೀಯದಲ್ಲಿ ದಿಢೀರ್ ಸಂಚಲನ ಮೂಡಿಸಿದ ಹೇಳಿಕೆಯ ಹಿಂದಿನ ರಹಸ್ಯವೇನು?

ಬಿಜೆಪಿ ಬಿಟ್ಟು ಹಸ್ತ ಹಿಡಿಯುತ್ತಾರಾ ಪ್ರಮೋದ್ ಮಧ್ವರಾಜ್? ಕರಾವಳಿ ರಾಜಕೀಯದಲ್ಲಿ ದಿಢೀರ್ ಸಂಚಲನ ಮೂಡಿಸಿದ ಹೇಳಿಕೆಯ ಹಿಂದಿನ ರಹಸ್ಯವೇನು?

by Shwetha
June 14, 2026
0

ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಅವರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram