ADVERTISEMENT
Tuesday, July 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮೊಬೈಲ್ ಟಾರ್ಚ್ ಬೆಳಕಲ್ಲಿ ಹೆರಿಗೆ ಮಾಡಿಸಿದ ವೈದ್ಯರು; ಸರ್ಕಾರಿ ಆಸ್ಪತ್ರೆಯ ಇದೆಂಥಾ ದುರಾವಸ್ಥೆ..?!

Kariyappa N by Kariyappa N
November 12, 2020
in Newsbeat, Samagra karnataka, ರಾಜ್ಯ
govt hospital mess
Share on FacebookShare on TwitterShare on WhatsappShare on Telegram

Related posts

ಸಿನಿಮಾ ಸಾಯಿಸಬೇಡಿ- ಒಳ್ಳೆಯ ಸಿನಿಮಾವನ್ನು ತುಳಿಯಬೇಡಿ: ಮದರ್ ಪ್ರಾಮಿಸ್ ಚಿತ್ರದ ಕುರಿತು ಸೋಷಿಯಲ್ ಮೀಡಿಯಾ ನೆಗೆಟಿವಿಟಿ ವಿರುದ್ಧ ಸಿಡಿದೆದ್ದ ನಟ ಧನಂಜಯ್

ಸಿನಿಮಾ ಸಾಯಿಸಬೇಡಿ- ಒಳ್ಳೆಯ ಸಿನಿಮಾವನ್ನು ತುಳಿಯಬೇಡಿ: ಮದರ್ ಪ್ರಾಮಿಸ್ ಚಿತ್ರದ ಕುರಿತು ಸೋಷಿಯಲ್ ಮೀಡಿಯಾ ನೆಗೆಟಿವಿಟಿ ವಿರುದ್ಧ ಸಿಡಿದೆದ್ದ ನಟ ಧನಂಜಯ್

July 14, 2026
ಇರಾನ್ ಮೇಲೆ ಅಮೆರಿಕ ಭೀಕರ ದಾಳಿ; ಪ್ರತಿದಾಳಿಯ ದಾವೆ ಮಾಡಿದ ಟೆಹ್ರಾನ್

ಇರಾನ್ ಮೇಲೆ ಅಮೆರಿಕ ಭೀಕರ ದಾಳಿ; ಪ್ರತಿದಾಳಿಯ ದಾವೆ ಮಾಡಿದ ಟೆಹ್ರಾನ್

July 14, 2026

ಕಲಬುರಗಿ: ಕರೆಂಟ್ ಇಲ್ಲದೆ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಮೊಬೈಲ್ ಟಾರ್ಚ್‍ನಲ್ಲೇ ಹೆರಿಗೆ ಮಾಡಿಸಿದ ದುರಾವಸ್ಥೆ ಕಲಬುರಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಎದುರಾಗಿದೆ.
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರೆಂಟ್ ಇಲ್ಲದ ಕಾರಣ ವೈದ್ಯರು ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆರಿಗೆ ಮಾಡಿಸಿದ್ದಾರೆ.


ವೈದ್ಯರು ಕರೆಂಟ್‍ಗಾಗಿ ಕಾಯದೆ ಮೊಬೈಲ್ ಟಾರ್ಚ್ ಆದರೂ ಸಮಯಕ್ಕೆ ಸರಿಯಾಗಿ ಹೆರಿಗೆ ಮಾಡಿಸಿದ್ದರಿಂದ ತಾಯಿಗೆ ಸುರಕ್ಷಿತವಾಗಿ ಹೆರಿಗೆಯಾಗಿದೆ. ಮಗು ಹಾಗೂ ಬಾಣಂತಿ ಆರೋಗ್ಯವಾಗಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಆದರೆ, ಅನಗತ್ಯ ಯೋಜನೆಗಳಿಗೆ ಕೋಟಿ ಕೋಟಿ ಸುರಿಯುವ ಸರ್ಕಾರಕ್ಕೆ, ಆಸ್ಪತ್ರೆಗಳಿಗೆ ಕನಿಷ್ಟ ಜನರೇಟರ್ ಇಲ್ಲವೇ ಒಂದು ಯುಪಿಎಸ್ ವ್ಯವಸ್ಥೆ ಮಾಡಲು ಆಗುತ್ತಿಲ್ಲವೇ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಚಿತ್ತಾಪುರ ತಾಲೂಕಿನ ಕೊಲ್ಲೂರು ಮೂಲಸೌಕರ್ಯಗಳಿಂದ ವಂಚಿತವಾದ ಗ್ರಾಮ. ಇಲ್ಲಿನ ಸುತ್ತಮುತ್ತಲ ಗ್ರಾಮಸ್ಥರು ಉತ್ತಮ ಆಸ್ಪತ್ರೆ ಸೇವೆ ಬೇಕೆಂದರೆ ದೂರದ ಚಿತ್ತಾಪುರ ಅಥವಾ ಕಲಬುರಗಿಗೆ ಹೋಗಬೇಕು.


ಅದೆಷ್ಟೋ ಸರ್ಕಾರಿ ಆಸ್ಪತ್ರೆಗಳಲ್ಲಿ ಅದರಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಸಕಾಲಕ್ಕೆ ಇರುವುದೇ ಅಪರೂಪ. ರೋಗಿಗಳು ಇಲ್ಲದ ಸಮಯದಲ್ಲಿ ಬಂದು ಹೋಗುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ವೈದ್ಯಕೀಯ ಸೇವೆ ಅಪರೂಪ. ರಾಜ್ಯದ ಅದೆಷ್ಟೋ ಸಾವಿರಾರು ಆರೋಗ್ಯ ಕೇಂದ್ರಗಳ ಬಾಗಿಲು ತೆರೆದ ಉದಾಹರಣೆಗಳೇ ಇಲ್ಲ. ಇನ್ನೂ ಕೆಲವು ಕಡೆ ಆಸ್ಪತ್ರೆಗಳು ತೆರೆದಿದ್ದರೂ ವೈದ್ಯರು ಬರುವುದೇ ಇಲ್ಲ. ಸರ್ಕಾರ ವೈದ್ಯರ ಗ್ರಾಮೀಣ ಸೇವೆ ಕಡ್ಡಾಯ ಮಾಡಿದ್ದರೂ, ಒಮ್ಮೆ ಬಂದು ಸಹಿ ಹಾಕಿ ಹೋಗುವ ವೈದ್ಯರು ಅತ್ತ ತಲೆ ಹಾಕಿವುದೇ ಇಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆ ಗಗನ ಕುಸುಮವಾಗಿಯೇ ಉಳಿದಿದೆ.

ಕೊನೆಗೂ ನಿದ್ದೆಯಿಂದ ಎದ್ದ ಜಿಲ್ಲಾ ಆರೋಗ್ಯ ಇಲಾಖೆ..
ಚಿತ್ತಾಪುರ ತಾಲೂಕಿನ ಕೊಲ್ಲೂರಿನಲ್ಲಿ ಆರೋಗ್ಯ ಇಲಾಖೆ ತಲೆತಗ್ಗಿಸುವಂತೆ ಮಾಡಿದ ಈ ಘಟನೆಯಿಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಶೇಖರ್ ಎಚ್ಚೆತ್ತಿದ್ದಾರೆ.
ಈ ಘಟನೆ ತಮ್ಮ ಗಮನಕ್ಕೆ ಬಂದಿದ್ದು, ಕಲಬುರಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿದ್ಯುತ್ ಇಲ್ಲದಂತಹ ತುರ್ತು ಸಂದರ್ಭಗಳನ್ನು ಎದುರಿಸಲು ಅನುಕೂಲವಾಗುವಂತೆ ಯುಪಿಎಸ್ ಅಥವಾ ಜನರೇಟರ್‍ಗಳು ಸದಾ ಸನ್ನದ್ಧವಾಗಿರುವಂತೆ ನೋಡಿಕೊಳ್ಳುವಂತೆ ಸುತ್ತೋಲೆ ಹೊರಡಿಸಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: chittapurcurrent cutdelivery of babygovt hospitalsKalburgimobil torch
ShareTweetSendShare
Join us on:

Related Posts

ಸಿನಿಮಾ ಸಾಯಿಸಬೇಡಿ- ಒಳ್ಳೆಯ ಸಿನಿಮಾವನ್ನು ತುಳಿಯಬೇಡಿ: ಮದರ್ ಪ್ರಾಮಿಸ್ ಚಿತ್ರದ ಕುರಿತು ಸೋಷಿಯಲ್ ಮೀಡಿಯಾ ನೆಗೆಟಿವಿಟಿ ವಿರುದ್ಧ ಸಿಡಿದೆದ್ದ ನಟ ಧನಂಜಯ್

ಸಿನಿಮಾ ಸಾಯಿಸಬೇಡಿ- ಒಳ್ಳೆಯ ಸಿನಿಮಾವನ್ನು ತುಳಿಯಬೇಡಿ: ಮದರ್ ಪ್ರಾಮಿಸ್ ಚಿತ್ರದ ಕುರಿತು ಸೋಷಿಯಲ್ ಮೀಡಿಯಾ ನೆಗೆಟಿವಿಟಿ ವಿರುದ್ಧ ಸಿಡಿದೆದ್ದ ನಟ ಧನಂಜಯ್

by Shwetha
July 14, 2026
0

ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಅವರು ಸದ್ಯ ಮದರ್ ಪ್ರಾಮಿಸ್ ಚಿತ್ರದ ಕುರಿತು ನಡೆಯುತ್ತಿರುವ ನೆಗೆಟಿವ್ ಪ್ರಚಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜುಲೈ...

ಇರಾನ್ ಮೇಲೆ ಅಮೆರಿಕ ಭೀಕರ ದಾಳಿ; ಪ್ರತಿದಾಳಿಯ ದಾವೆ ಮಾಡಿದ ಟೆಹ್ರಾನ್

ಇರಾನ್ ಮೇಲೆ ಅಮೆರಿಕ ಭೀಕರ ದಾಳಿ; ಪ್ರತಿದಾಳಿಯ ದಾವೆ ಮಾಡಿದ ಟೆಹ್ರಾನ್

by Shwetha
July 14, 2026
0

ಇರಾನ್‌ನ ಹೇಳಿಕೆಯ ಪ್ರಕಾರ, ಅಮೆರಿಕ ಮಧ್ಯರಾತ್ರಿಯಿಂದ ಕ್ಷಿಪಣಿಗಳು ಮತ್ತು ಬಾಂಬ್‌ಗಳ ಮೂಲಕ ಇರಾನ್ ಮೇಲೆ ತೀವ್ರ ದಾಳಿ ನಡೆಸಿದೆ. ಈ ದಾಳಿಯಲ್ಲಿ ಬಂದರ್ ಅಬ್ಬಾಸ್ ಬಂದರು, ಕೇಶ್...

ಚಿಲ್ಲರೆ ನೆಪದಲ್ಲಿ ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸುವಂತಿಲ್ಲ:ಸಿಬ್ಬಂದಿಗೆ ಸೌಜನ್ಯದ ಪಾಠ ಹೇಳಿದ ಸಾರಿಗೆ ಸಚಿವ ಭೈರತಿ ಸುರೇಶ್

ಚಿಲ್ಲರೆ ನೆಪದಲ್ಲಿ ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸುವಂತಿಲ್ಲ:ಸಿಬ್ಬಂದಿಗೆ ಸೌಜನ್ಯದ ಪಾಠ ಹೇಳಿದ ಸಾರಿಗೆ ಸಚಿವ ಭೈರತಿ ಸುರೇಶ್

by Shwetha
July 14, 2026
0

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್‌ಗಳಲ್ಲಿ ಚಿಲ್ಲರೆ ಇಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸುವಂತಿಲ್ಲ ಎಂದು ಸಂಸ್ಥೆಯು ತನ್ನ ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ...

ಕಚ್ಚಾ ತೈಲ ಬೆಲೆಯಲ್ಲಿ ಮತ್ತೆ ಏರಿಕೆ; ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಗೆ ಅನಿಶ್ಚಿತತೆ

ಕಚ್ಚಾ ತೈಲ ಬೆಲೆಯಲ್ಲಿ ಮತ್ತೆ ಏರಿಕೆ; ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಗೆ ಅನಿಶ್ಚಿತತೆ

by Shwetha
July 14, 2026
0

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮತ್ತೆ ಏರಿಕೆಯಾಗಿದ್ದು, ಇರಾನ್–ಅಮೆರಿಕ ನಡುವಿನ ಉದ್ವಿಗ್ನತೆಯಿಂದ ಹಾರ್ಮುಜ್ ಜಲಸಂಧಿಯ ಹಡಗು ಸಂಚಾರದ ಮೇಲೆ ಪರಿಣಾಮ ಉಂಟಾಗಿರುವುದು ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ....

ನಾವು ಲಿಂಗಾಯತರು ನಾನ್ ವೆಜ್ ಮಾಡಲ್ಲ ಆದರೆ ನನಗೆ ಚಿಕನ್ ಬಿರಿಯಾನಿ ಅಂದ್ರೆ ಇಷ್ಟ: ಬಿಗ್ ಬಾಸ್ ಜಾಹ್ನವಿ ಹೇಳಿಕೆ ವೈರಲ್

ನಾವು ಲಿಂಗಾಯತರು ನಾನ್ ವೆಜ್ ಮಾಡಲ್ಲ ಆದರೆ ನನಗೆ ಚಿಕನ್ ಬಿರಿಯಾನಿ ಅಂದ್ರೆ ಇಷ್ಟ: ಬಿಗ್ ಬಾಸ್ ಜಾಹ್ನವಿ ಹೇಳಿಕೆ ವೈರಲ್

by Shwetha
July 14, 2026
0

ನ್ಯೂಸ್ ಆಂಕರ್ ಆಗಿ ವೃತ್ತಿ ಜೀವನ ಆರಂಭಿಸಿ ಬಿಗ್ ಬಾಸ್ ಕನ್ನಡ ಸೀಸನ್ 12 ರ ಮೂಲಕ ಮನೆಮಾತಾಗಿದ್ದ ಜಾಹ್ನವಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದಾ ಒಂದಲ್ಲ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram