indian Army
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪದೇ ಪದೇ ಭಾರತದ ತಂಟೆಗೆ ಬರುವ ಪಾಕ್ ನಿನ್ನೆಯೂ ಸಹಿತ ಕದನ ವಿರಾಮ ಉಲ್ಲಂಘಿಸಿದೆ. ಕುತಂತ್ರಿ ಪಾಕ್ ಸೇನೆಯ ಶೆಲ್ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ಮೂವರು ನಾಗರೀಕರು ಮೃತಪಟ್ಟಿದ್ದರು. ಇದೀಗ ಉದ್ಧಟತನ ಪ್ರದರ್ಶಿಸಿದ ಪಾಕ್ ಸೇನೆಗೆ ತಕ್ಕ ಪ್ರತ್ಯುತ್ತರ ನೀಡಿರುವ ನಮ್ಮ ಭಾರತೀಯ ಸೇನೆ ಪಾಕ್ ಬಂಕರ್ ಗಳ ಮೇಲೆ ಸಾಲು ಸಾಲು ದಾಳಿ ನಡೆಸುವ ಮೂಲಕ ಶತ್ರುರಾಷ್ಟ್ರದ ಸೇನಿಕರು ಲಾಂಚ್ ಪ್ಯಾಂಡ್ ಬಿಟ್ಟು ಓಡಿಹೋಗುವಂತೆ ಮಾಡಿದೆ. ಮೂಲಗಳ ಪ್ರಕಾರ ಭಾರತ ನಡೆಸಿರುವ ಪ್ರತಿದಾಳಿಯಲ್ಲಿ ಪಾಕಿಸ್ತಾನದ ಕನಿಷ್ಟ 8 ಮಂದಿ ಯೋಧರು ಬಲಿಯಾಗಿದ್ದಾರೆಂದು ಹೇಳಲಾಗುತ್ತಿದೆ. ಅಲ್ಲದೇ ಹತರಾದವರಲ್ಲಿ ಇಬ್ಬರು ಅಥವ ಮೂವರು ಪಾಕಿಸ್ತಾನಿ ಎಸ್ ಪಿಜಿ ಪಡೆಯ ಕಮಾಂಡೋಗಳೂ ಇರಬಹುದು ಎಂದು ಹೇಳಲಾಗ್ತಿದೆ.
ಇಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಎಲೆಕ್ಷನ್: ಯಾರಿಗೆ ಸಿಗುತ್ತೆ ಪಟ್ಟ..!
ಮೂಲಗಳ ಪ್ರಕಾರ ಪಾಕ್ ಸೇನೆಯ ದಾಳಿಯಲ್ಲಿ ಉಗ್ರರ ಕೈವಾಡವೂ ಇದೆ. ನಿನ್ನೆ ನಡೆಸಿದ ದಾಳಿಯಲ್ಲಿ ಉಗ್ರರ ಕೈವಾಡವಿತ್ತು ಎನ್ನಲಾಗಿದೆ. ಎರಡು ಕಡೆಗಳಲ್ಲಿ ಪ್ರತ್ಯೇಕವಾಗಿ ಕದಮ ವಿರಾಮ ಉಲ್ಲಂಘನೆ ಮಾಡಿದ್ದ ಪಾಕ್ ಸೇನೆಗೆ ಇದೀಗ ಭಾರತೀಯ ಸೇನೆ ಪಾಕ್ ಮುಟ್ಟಿನೋಡಿಕೊಳ್ಲುವಂತೆ ಉತ್ತರ ನೀಡಿದ್ದು, ಮತ್ತೊಮ್ಮೆ ಭಾರತದ ತಂಟೆಗೆ ಬಂದ್ರೆ ಹುಷಾರ್..! ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದೆ.
indian Army
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








