ಮಹಾಮಾರಿ ಕೊರೊನಾ ಹೊಡೆತಕ್ಕೆ ಇಡೀ ದೇಶವೇ ಈಗ ಲಾಕ್ ಡೌನ್ ಆಗ್ತಿದೆ. ದೇಶದ ಅನೇಕ ನಗರಗಳು ಈಗಾಗಲೇ ಬಂದ್ ಆಗಿದ್ದು, ಇಷ್ಟು ದಿನ ಫುಲ್ ಬ್ಯುಸಿ ಇದ್ದ ತಾರೆಯರು ಇದೀಗ ಕೆಲಸ ಬಿಟ್ಟು ಮನೆಯಲ್ಲಿದ್ದಾರೆ. ಇದಕ್ಕೆ ನಟಿ ಕತ್ರಿನಾ ಕೈಫ್ ಹಾಗೂ ಕಾರ್ತಿಕ್ ಆರ್ಯನ್ ಕೂಡ ಹೊರತಾಗಿಲ್ಲ.
https://www.instagram.com/p/B-FEZmEBq73/?utm_source=ig_web_button_share_sheet
ಸದ್ಯ ಮನೆಯಲ್ಲಿರುವ ನಟಿ ಕತ್ರಿನಾ, ಮನೆಯಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದಾರೆ.
ಮನೆಗೆ ಕೆಲಸದವರು ಬರುವಂತಿಲ್ಲ. ಹಾಗಾಗಿ ಮನೆ ಕೆಲಸಗಳನ್ನು ಇವರೇ ಮಾಡಿಕೊಳ್ತಿದ್ದಾರೆ. ಗೃಹ ಬಂಧನದಿಂದ ಮನೆ ಕೆಲಸ ಅಭ್ಯಾಸವಾಗ್ತಿದೆ. ನಾನು ಮತ್ತು ನನ್ನ ಸಹೋದರಿ ಪಾತ್ರೆ ತೊಳೆಯಲು ನಿರ್ಧರಿಸಿದ್ದೇವೆ. ಆಗಾಗ ಪಾತ್ರೆಗಳನ್ನು ತೊಳೆಯಬೇಕು ಅಂದ್ಕೊಂಡೆ. ನಂತ್ರ ಎಲ್ಲ ಪಾತ್ರೆಗಳನ್ನು ಒಟ್ಟಿಗೆ ತೊಳೆಯುವ ನಿರ್ಧಾರಕ್ಕೆ ಬಂದೆ. ಎಲ್ಲ ಪಾತ್ರೆಗಳನ್ನು ಒಟ್ಟಿಗೆ ತೊಳೆದ್ರೆ ನೀರು ಉಳಿಯುತ್ತದೆ ಎಂದು ಕತ್ರಿನಾ ಹೇಳಿದ್ದಾರೆ.








