ಕೊರೊನ್ ಭೀತಿಯಿಂದ ರಾಜ್ಯ ಲಾಕ್ ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಕೊರೊನಾ ವೈರಸ್ ಹರಡುವಿಕೆ ಹೆಚ್ಚಾಗಿದೆ. ಇದರಿಂದ ರಾಜ್ಯ ಲಾಕ್ ಡೌನ್ ಆಗಿದೆ. ಹಾಗಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಅದರಲ್ಲೂ ಕಾರ್ಮಿಕರಲ್ಲಿ ಆತಂಕ ಹೆಚ್ಚಾಗಿತ್ತು. ಈ ಕಾರಣಕ್ಕಾಗಿ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ 1000 ರೂ ಸಹಾಯ ಧನ ನೀಡಲು ನಿರ್ಧರಿಸಲಾಗಿದೆ. ರೇಷನ್ ಕಾರ್ಡ್ ಹೊಂದಿದ ಸಾರ್ವಜನಿಕರಿಗೆ 2 ತಿಂಗಳ ಪಡಿತರವನ್ನು ಮುಂಗಡವಾಗಿ ನೀಡಲು ಸೂಚನೆ ನೀಡಲಾಗಿದೆ. ಅಲ್ಲದೆ ಸಾಮಾಜಿಕ ಭದ್ರತಾ ಪಿಂಚಣಿ ಹಣವನ್ನು ಸಹ ಮುಂಗಡವಾಗಿ ನೀಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಜೊತೆಗೆ ಎರಡು ತಿಂಗಳ ಮಾನವ ದಿನಗಳ ಬಾಬ್ತು ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ನೂ ವಿಶೇಷ ಎಂದರೆ ಬಡವರ ಬಂಧು ಯೋಜನೆಯಲ್ಲಿ ಸಾಲ ಪಡೆದವರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ
ನಾಲ್ಕು ವರ್ಷಗಳ ವನವಾಸ ಮುಗಿಸಿ ಮರಳಿದ ಸ್ವಿಂಗ್ ಸುಲ್ತಾನ್ ಭುವನೇಶ್ವರ್ ಕುಮಾರ್ :ಭುವನೇಶ್ವರ್ ಕುಮಾರ್ ಪುನರಾಗಮನಕ್ಕೆ ಅಜಿತ್ ಅಗರ್ಕರ್ ಅಡ್ಡಗಾಲು ಹಾಕಿದ್ದರಾ? ಆಯ್ಕೆ ಸಮಿತಿಯ ಒಳಗಿನ ಗುಟ್ಟು ರಟ್ಟು?
ಮುಂಬೈ: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಕಡೆ ಸಂತಸದ ಸುದ್ದಿ ಸಿಕ್ಕಿದ್ದರೆ, ಮತ್ತೊಂದು ಕಡೆ ಆಯ್ಕೆ ಸಮಿತಿಯ ಒಳಗಿನ ಅಸಲಿ ಆಟ ಈಗ ಬಯಲಾಗಿದೆ. ಮುಂಬರುವ ನ್ಯೂಜಿಲೆಂಡ್...








