ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಪ್ರವೀಣ್ ಶೆಟ್ಟಿ ವಿರೋಧ
ಬೆಂಗಳೂರು : ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ರಾಜ್ಯ ಸರ್ಕಾರದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಆಕ್ರೋಶ ಹೊರಹಾಕಿದ್ದು, ಕೂಡಲೇ ಆದೇಶ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವೀಣ್ ಶೆಟ್ಟಿ, ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಮೂಲಕ ಇಡೀ ರಾಜ್ಯದಲ್ಲಿ ತಾರತಮ್ಯ ಮಾಡ್ತಿದೆ.
ಬೆಂಗಳೂರಿನಲ್ಲಿ ಭಾರೀ ಮಳೆ : ವಾಹನ ಸವಾರರ ಪರದಾಟ
ರಾಜ್ಯೋತ್ಸವದ ಸಂದರ್ಭದಲ್ಲಿ ಕರಾಳ ದಿನಾಚರಣೆ ಮಾಡುವ ಮರಾಠಿಗರಿಗೆ ಪ್ರಾಧಿಕಾರ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.
ಇವತ್ತು ಮರಾಠಿಗರಿಗೆ ಪ್ರಾಧಿಕಾರ ರಚನೆ ಮಾಡ್ತಿರಾ, ನಾಳೆ ಮಾರ್ವಾಡಿಗಳಿಗೆ, ತಮಿಳರಿಗೆ ಅಥವಾ ತೆಲುಗಿನವರಿಗೆ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ರೆ, ಕನ್ನಡಿಗರ ಪರಿಸ್ಥಿತಿ ಏನು..?

ಕನ್ನಡಿಗರಲ್ಲಿ ಇವತ್ತು ಅಲೆಮಾರಿ ಜನಾಂಗದವರಿಗೆ ಮನೆ ಮಠ ಇಲ್ಲ. ನೆರೆ ಬಂದು ಅನೇಕ ಜಿಲ್ಲೆಗಳಲ್ಲಿ ತೊಂದರೆಯಾದ ಕನ್ನಡಿಗರನ್ನು ನೋಡ್ತಿಲ್ಲ. ಆದ್ದರಿಂದ ಈ ಕೂಡಲೇ ಆದೇಶ ವಾಪಸ್ ಪಡೆಯಬೇಕು ಎಂದು ಪ್ರವೀಣ್ ಶೆಟ್ಟಿ ಒತ್ತಾಯಿಸಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲಿ ನಮ್ಮ ಅನೇಕ ಕನ್ನಡಿಗರು ವಾಸ ಮಾಡುವ ಅನೇಕ ಜಿಲ್ಲೆಗಳಿವೆ. ಅಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ.
ಅವರಿಗೆ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ. ಅವರ ಹಿತವನ್ನು ಎಷ್ಟರ ಮಟ್ಟಿಗೆ ಕಾದಿದ್ದೀರಾ, ಅವರ ಬಗ್ಗೆ ಏನೆಲ್ಲ ಕ್ರಮಗಳನ್ನು ವಹಿಸಿದ್ದೀರಾ ಎಂದು ಎಂದು ಸರ್ಕಾರದ ವಿರುದ್ಧ ಗುಡುಗಿದರು.
ಶೀಘ್ರವೇ ಗ್ರಾಮ ಪಂಚಾಯತ್ ಚುನಾವಣೆಗೆ ಡೇಟ್ ಫಿಕ್ಸ್, ಆಯೋಗ ಭರ್ಜರಿ ತಯಾರಿ..!
ಕೇವಲ ಮತಕ್ಕಾಗಿ, ರಾಜಕೀಯಕ್ಕಾಗಿ ಮರಾಠ ಪ್ರಾಧಿಕಾರ ರಚನೆ ಮಾಡ್ತೀರಾ ಅಂದರೆ ಇದನ್ನು ಯಾವತ್ತು ಸಹ ಕನ್ನಡಿಗರು ಒಪ್ಪುವುದಿಲ್ಲ.
ಕೂಡಲೇ ಆದೇಶ ವಾಪಸ್ ಪಡೆಯಬೇಕು. ಇಲ್ಲ ಅಂದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








