ambareesh
ಮಂಡ್ಯದ ಮದ್ದೂರಿನಲ್ಲಿ ಅಂಬಿಗಾಗಿ ನಿರ್ಮಾಣವಾದ ಮಂದಿರ..!
ಚಿತ್ರರಂಗದ ತಾರೆಯರಿಗೆ ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ಮಂದಿರ ಕಟ್ಟುವ ಸಂಪ್ರದಾಯ ಹೊಸ ವಿಚಾರವೇನಲ್ಲ. ಆದ್ರೆ ಈ ಸಂಪ್ರದಾಯ ಈಗ ಕರ್ನಾಟಕ ಅದ್ರಲ್ಲೂ ಮಂಡ್ಯದಿಂದ ಪ್ರಾರಂಭವಾಗಿದೆ. ಹೌದು.. ‘ಮಂಡ್ಯದ ಗಂಡು , ಮುತ್ತಿನ ಚೆಂಡು , ಇವ ನಮ್ಮೂರ ಗಂಡು, ಇವರ ಮರೆಯಲ್ಲ ಎಂದು’ ಎಂಬ ಹಾಡಿನ ಸಾಲಿನಂತೆಯೇ ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಮಂಡ್ಯದ ಜನರು ಮಂಡ್ಯದಲ್ಲಿ ಗುಡಿ ಕಟ್ಟಿದ್ದಾರೆ. ಮಂಡ್ಯದ ಅಂಬರೀಶ್ ಅಭಿಮಾನಿಗಳು ಅಂಬರೀಷ್ ಅವರ ಮೂರ್ತಿ ಸ್ಥಾಪಿಸಿ ಅವರಿಗಾಗಿ ಗುಡಿ ಕಟ್ಟಿದ್ದಾರೆ.

ರತ್ನನ್ ಪ್ರಪಂಚದಲ್ಲಿ ‘ ಇನ್ಶೂರೆನ್ಸ್ ಏಜೆಂಟ್ ರತ್ನಾಕರ’ನಾಗಿ ಬರಲಿದ್ದಾರೆ ಡಾಲಿ..!
ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೆಗೌಡನ ದೊಡ್ಡಿ ಗ್ರಾಮದಲ್ಲಿ ತಮ್ಮ ನೆಚ್ಚಿನ ನಟನ ನೆನಪಿಗಾಗಿ ಅಭಿಮಾನಿಗಳು ಗುಡಿ ನಿರ್ಮಿಸಿದ್ದಾರೆ. ಗುಡಿಯಲ್ಲಿ ಅಂಬರೀಶ್ ಅವರ ಕಂಚಿನ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. ಸುಮಾರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ಗುಡಿ ನಿರ್ಮಾಣ ಮಾಡಲಾಗಿದೆ. ಈ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಮುನ್ನ ಅಂಬರೀಶ್ ಚಿತಾಭಸ್ಮವನ್ನು ತಂದು ಒಂದು ವರ್ಷದ ಕಾಲ ಪೂಜಿಸಿ ನಂತರ ಪುತ್ಥಳಿ ನಿರ್ಮಾಣದ ಸ್ಥಳದಲ್ಲಿ ಸ್ಥಾಪಿಸಲಾಗಿದೆ. ಪುತ್ಥಳಿ ಹಾಗೂ ಗುಡಿ ಕಾರ್ಯ ಪೂರ್ಣಗೊಂಡಿದ್ದು, ಅಂಬರೀಶ್ ಅವರ 2ನೇ ವರ್ಷದ ಪುಣ್ಯ ಸ್ಮರಣೆ ನವೆಂಬರ್ 24ಕ್ಕೆ ನಡೆಯಲಿದೆ. ಅದೇ ದಿನ ಪುತ್ಥಳಿಯನ್ನು, ಅಂಬಿ ಅವರ ಪತ್ನಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅನಾವರಣ ಮಾಡಲಿದ್ದಾರೆ.
ambareesh
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








