ಬಿಎಸ್ವೈ ನಂತ್ರ ಲಿಂಗಾಯತ ಸಮುದಾಯದ ನಾಯಕರ್ಯಾರು : ಪಾಟೀಲ್ ಹೇಳಿದ್ದೇನು?
ಬೆಂಗಳೂರು : ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದು, ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಈ ಕುರಿತು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡುತ್ತ, ಬಿಎಸ್ವೈ ನಂತ್ರ ಲಿಂಗಾಯತ ಸಮುದಾಯದ ನಾಯಕರ್ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ಬಿ.ಎಸ್.ಯಡಿಯೂರಪ್ಪ ನಂತರ ಸಮುದಾಯದ ನಾಯಕರಾರು ಎಂಬ ವಿಚಾರವಾಗಿ ಈಗಲೇ ಚರ್ಚೆ ಬೇಕಿಲ್ಲ.
ನಿಗಮದಿಂದ ಅಭಿವೃದ್ಧಿ ಅಸಾಧ್ಯ, ನಮಗೆ ಮೀಸಲಾತಿ ಬೇಕು : ಎಂಬಿಪಾ
ಸಮುದಾಯದಲ್ಲಿ ಯಡಿಯೂರಪ್ಪ ಇದ್ದಾರೆ. ಇನ್ನೂ ನೂರು ವರ್ಷ ಅವರು ಇರಬೇಕು. ಅಂತಹ ಸಮಯ ಬಂದಾಗ ನೋಡೋಣ.
ಸದ್ಯ ಕಾಂಗ್ರೆಸ್ ನಲ್ಲಿ ನಾನಿದ್ದೇನೆ, ಜೆಡಿಎಸ್, ಬಿಜೆಪಿಯಲ್ಲೂ ಇದ್ದಾರೆ.
ನಾವು ಲಿಂಗಾಯತ ನಾಯಕ ಅಂತ ಘೋಷಣೆ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದ ಎಂಬಿಪಾಟೀಲ್, ನಾವು ನಾಯಕರೆಂದು ಸಮಾಜ ಒಪ್ಪಬೇಕು. ಜನ ಒಪ್ಪಿದರೆ ಮಾತ್ರ ಅದಕ್ಕೆ ವ್ಯಾಲ್ಯೂ ಬರುತ್ತದೆ ಎಂದರು.
ಇದೇ ವೇಳೆ ಎಂ.ಬಿ.ಪಾಟೀಲ್ ಬಿಜೆಪಿ ಸೇರ್ತಾರೆ ಎಂಬ ಸುದ್ದಿ ವಿಚಾರವಾಗಿ ಮಾತನಾಡಿ, ಬೇರೆ ಪಕ್ಷದವರು ನನ್ನನ್ನ ಸಂಪರ್ಕಿಸಿಲ್ಲ.
ನಾನು ಯಾರನ್ನೂ ಸಂಪರ್ಕಿಸಿಲ್ಲ. ಬೇರೆ ಪಕ್ಷದವರು ಸಂಪರ್ಕಿಸಿದ್ದರು ಅಂತ ಹೇಳಲಿ. ಕಾಂಗ್ರೆಸ್ ನನ್ನ ಪಕ್ಷ. ಆಗಲೂ ಇದ್ದೇನೆ, ಈಗಲೂ ಇದ್ದೇನೆ, ಮುಂದೆಯೂ ಇರುತ್ತೇನೆ.
ನಾನು ಬಿಜೆಪಿಗೆ ಹೋಗ್ತೇನೆ ಅನ್ನೋದು ಸುಳ್ಳು ಎಂದು ಹೇಳುವ ಮೂಲಕ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










