ಕಲಬುರಗಿ: ಉತ್ತರ ಕರ್ನಾಟಕ ಭಾಗದ ಜನರ ಬಹುದಿನದ ಬೇಡಿಕೆ ಕಲಬುರಗಿ ಮತ್ತು ದೆಹಲಿ ಮಧ್ಯೆ ವಿಮಾನ ಹಾರಾಟಕ್ಕೆ ಕೊನೆಗೂ ಮುಹೂರ್ತ ಬಂದಿದೆ. ಇಂದಿನಿಂದ ಸ್ಟಾರ್ ಏರ್ ಲೈನ್ಸ್ ವಿಮಾನಗಳು ಕಲಬುರಗಿಯಿಂದ ದೆಹಲಿಗೆ, ದೆಹಲಿಯಿಂದ ಕಲಬುರಗಿ ನಡುವೆ ಹಾರಾಟ ಆರಂಭವಾಗಿದೆ.
ಕಲಬುರಗಿಯಿಂದ ದೆಹಲಿಗೆ ತಲುಪಲು 1800 ಕಿಲೋಮೀಟರ್ ಅಂತರವನ್ನು ರೈಲು ಇಲ್ಲವೇ, ರಸ್ತೆ ಮೂಲಕ ಪ್ರಯಾಣ ಮಾಡಬೇಕಿತ್ತು. ಇದೀಗ ವಿಮಾನದ ಮೂಲಕ ದೆಹಲಿ ತಲುಪಲು ಕೇವಲ 2 ಗಂಟೆ ಸಾಕು.

ವಾರದಲ್ಲಿ ಮೂರು ದಿನಗಳ ಕಾಲ ಕಲಬುರಗಿಯಿಂದ ದೆಹಲಿಗೆ ಹೋಗಲು ವಿಶೇಷ ವಿಮಾನಗಳು ಹಾರಾಟ ನಡೆಸಲಿವೆ. ಇಂದು(ಬುಧವಾರ) ಕಲಬುರಗಿ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10:20ಕ್ಕೆ ಹೊರಟ ಮೊದಲ ವಿಮಾನ ಮಧ್ಯಾಹ್ನ 12:40ಕ್ಕೆ ದೆಹಲಿ ತಲುಪಲಿದೆ. ದೆಹಲಿಯಿಂದ ಮಧ್ಯಾಹ್ನ 1:10ಕ್ಕೆ ಟೆಕಾಫ್ ಆದ ವಿಮಾನ ಮಧ್ಯಾಹ್ನ 3:30ಕ್ಕೆ ಕಲಬುರಗಿ ಏರ್ ಪೋರ್ಟ್ ನಲ್ಲಿ ಲ್ಯಾಂಡ್ ಆಗಲಿದೆ.

ಇತ್ತೀಚೆಗೆ ಕಲಬುರಗಿ-ಬೆಂಗಳೂರು ನಡುವೆ ವಿಮಾನ ಸಂಚಾರವನ್ನು ಸ್ಟಾರ್ ಏರ್ ಸಂಸ್ಥೆ ಆರಂಭಿಸಿತ್ತು. ಬೆಂಗಳೂರು-ಕಲಬುರಗಿ ನಡುವೆ ವಿಮಾನ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಇದರ ಮುಂದುವರೆದ ಕಾರ್ಯಾಚರಣೆ ಭಾಗವಾಗಿ ಕಲಬುರಗಿ ಟು ದೆಹಲಿಗೆ ವಿಮಾನ ಹಾರಾಟ ಆರಂಭಿಸಿದೆ.
ಪ್ರತಿ ಮಂಗಳವಾರ, ಬುಧವಾರ ಹಾಗೂ ಶನಿವಾರ ಈ ಮೂರು ಬೆಳಿಗ್ಗೆ 10.20ಕ್ಕೆ ಕಲಬುರಗಿಯಿಂದ ಹೊರಡುವ ವಿಮಾನಗಳು, ಮಧ್ಯಾಹ್ನ 12.40ಕ್ಕೆ ದೆಹಲಿ ತಲುಪಲಿವೆ. ಅದೇ ದಿನ ಮತ್ತೆ ಮಧ್ಯಾಹ್ನ 1.10ಕ್ಕೆ ದೆಹಲಿಯಿಂದ ಹೊರಟು 3.30ಕ್ಕೆ ಕಲಬುರಗಿ ವಿಮಾನ ನಿಲ್ದಾಣ ತಲುಪಲಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








