ಸೂರ್ಯ ಕುಮಾರ್ ಟೀಂ ಇಂಡಿಯಾದ ಎಬಿಡಿ
ಮುಂಬೈ : 2020ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ಸೂರ್ಯ ಕುಮಾರ್ ಯಾದವ್ ಅವರನ್ನು ಮಾಜಿ ಆಟಗಾರ ಹರ್ಭಜನ್ ಸಿಂಗ್ ಎಬಿಡಿ ವಿಲಿಯರ್ಸ್ ಅವರಿಗೆ ಹೋಲಿಸಿ ಹಾಡಿಹೊಗಳಿದ್ದಾರೆ.
ಐಪಿಎಲ್ ನಲ್ಲಿ ಸೂರ್ಯ ಕುಮಾರ್ ಯಾದವ್ ಬ್ಯಾಟಿಂಗ್ ಬಗ್ಗೆ ಸ್ಟಾರ್ ಸ್ಪೋಟ್ರ್ಸ್ ವಾಹಿನಿಯಲ್ಲಿ ಮಾತನಾಡಿದ ಹರ್ಭಜನ್ ಸಿಂಗ್, ಸೂರ್ಯ ಕುಮಾರ್ ಒಬ್ಬ ಗೇಮ್ ಚೇಂಜ್ ಆಗಿ ಬದಲಾಗುತ್ತಿದ್ದಾರೆ.
ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಮ್ಯಾಚ್ ವಿನ್ನರ್ ಆಗಿದ್ದಾರೆ. ಅವರು ಮೊದಲ ಬಾಲಿನಿಂದಲೇ ಅಬ್ಬರಿಸುತ್ತಾ ಆಟವಾಡುತ್ತಾರೆ.
ಅವರು ಮೊದಲ ಬಾಲ್ ನಿಂದಲೇ 100 ಸ್ಟ್ರೈಕ್ ರೇಟಿನಲ್ಲಿ ಬ್ಯಾಟ್ ಬೀಸುವ ಸಾಮಥ್ರ್ಯ ಹೊಂದಿದ್ದಾರೆ.
IPL 2021 : ಹೊಸ ಐಪಿಎಲ್ ತಂಡ ಖರೀದಿಸಲಿದ್ದಾರಂತೆ ಸೌತ್ ಸೂಪರ್ ಸ್ಟಾರ್
ಆತ ಒಂದು ರೀತಿಯ ಇಂಡಿಯಾದ ಎಬಿಡಿ ವಿಲಿಯರ್ಸ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಸೂರ್ಯಕುಮಾರ್ ಓವರ್ ಕವರ್, ಸ್ವಿಪ್ ಶಾಟ್ ಗಳನ್ನು ಉತ್ತಮವಾಗಿ ಆಡುತ್ತಾರೆ.
ಜೊತೆಗೆ ಸ್ಪಿನ್ ಮತ್ತು ವೇಗದ ಬೌಲಿಂಗ್ ಎದುರು ಅತ್ಯುತ್ತಮವಾಗಿ ಬ್ಯಾಟ್ ಬೀಸುತ್ತಾರೆ.

ಯಾದವ್ ಇಂಡಿಯಾ ಟೀಂಗೆ ಆಯ್ಕೆ ಆಗಬೇಕಿತ್ತು. ಆದ್ರೆ ಮುಂದೆ ಪಕ್ಕ ಟೀಂ ಇಂಡಿಯಾಗೆ ಆಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಮುಂಬೈ ಪರ ಬೊಂಬಾಟ್ ಪ್ರದರ್ಶನ ನೀಡಿದ್ದ ಸೂರ್ಯಕುಮಾರ್ 16 ಪಂದ್ಯಗಳಲ್ಲಿ 480 ರನ್ ಸಿಡಿಸಿ ಮಿಂಚಿದ್ದಾರೆ.
ಹಾಗೇ ಕಾಂಟ್ರವರ್ಸಿಗಳನ್ನು ಮೈಮೇಲೆ ಎಳೆದುಕೊಂಡು ಸದ್ದು ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








