ನವದೆಹಲಿ: ಇಂದು ಸಾಮಾನ್ಯವಾಗಿ ಯುಗಾದಿ ಹಬ್ಬದ ಸಡಗರ ದೇಶದೆಲ್ಲೆಡೆ ಮನೆ ಮಾಡಬೇಕಿತ್ತು. ಆದ್ರೆ ಕಿಲ್ಲರ್ ಕೊರೊನಾದಿಂದಾಗಿ ಈ ಬಾರಿ ಹಬ್ಬ ಕಳೆ ಕಳೆದುಕೊಂಡಿದೆ. ಯುಗಾದಿ ಹಬ್ಬದ ಪ್ರಯುಕ್ತ ಪ್ರಧಾನಿ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಭಾರತದಾದ್ಯಂತ ಹಲವಾರು ಹಬ್ಬಗಳನ್ನು ಸಂಭ್ರಮ-ಸಡಗರದಿಂದ ಆಚರಿಸುತ್ತೇವೆ. ಹಾಗೆಯೇ ಸಾಂಪ್ರದಾಯಿಕವಾಗಿ ಯುಗಾದಿ ಭಾರತೀಯರಿಗೆ ಹೊಸ ವರುಷ ಎನಿಸಿಕೊಳ್ಳುತ್ತದೆ. ಹಾಗಾಗಿ ದೇಶದ ಎಲ್ಲಾ ಜನರಿಗೆ ಯುಗಾದಿಯ ಶುಭ ಕೋರುತ್ತೇನೆ. ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ , ಸಂತೋಷ,
ಜೀವದಲ್ಲಿ ಏಳಿಗೆ ಪ್ರಾಪ್ತಿಯಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಯುಗಾದಿ ಹೊಸ ವರ್ಷ ಬಂದಿದೆ!
ಈ ವರ್ಷ ಆಕಾಂಕ್ಷೆಗಳನ್ನು ಈಡೇರಿಸಲಿ, ವಿಪತ್ತುಗಳಿಂದ ಹೊರಬರಲು ಹೊಸ ಚೈತನ್ಯ ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಪ್ರತಿಯೊಬ್ಬರಿಗೂ ಸಂತಸ ಮತ್ತು ಅದಕ್ಕಿಂತ ಮಿಗಿಲಾಗಿ ಉತ್ತಮ ಆರೋಗ್ಯದ ಆಶಿರ್ವಾದವಿರಲಿ.— Narendra Modi (@narendramodi) March 25, 2020
ಅಲ್ಲದೆ ದೇಶದಲ್ಲಿ ಕೋವಿಡ್ 19 ಭೀತಿ ಸೃಷ್ಟಿಸಿರುವಾಗಲೇ ನಾವು ಯುಗಾದಿ ಹಬ್ಬಕ್ಕೆ ಸಾಕ್ಷಿಯಾಗಿದ್ದೇವೆ. ಹಾಗಾಗಿ ನಾವು ಪ್ರತಿವರ್ಷದಂತೆ ಈ ವರ್ಷ ಹಬ್ಬವನ್ನು ಆಚರಿಸಲಾಗುವುದಿಲ್ಲ. ಸರಳವಾಗಿ ಆಚರಿಸಿ. ಮಾತ್ರವಲ್ಲದೆ ದೃಢನಿರ್ಧಾರ ಮಾಡಿ ಕೋವಿಡ್ 19 ವಿರುದ್ಧ ಹೋರಾಡಿ ಎಂದು ಪ್ರಧಾನಿ ಮನವಿ ಮಾಡಿಕೊಂಡಿದ್ದಾರೆ.







