special
ಪತಿಯ 4ನೇ ಮದುವೆಗೆ ಮೂವರು ಪತ್ನಿಯರು ಸಾಥ್, ಆತ ಕೊಟ್ಟ ಕಾರಣ ಏನ್ ಗೊತ್ತಾ..?
ಪತಿಗೆ ಇಬ್ಬರು ಹೆಂಡತಿಯರಿದ್ದರೆ ಆ ಮನೆಯಲ್ಲಿ ಕಿತ್ತಾಟ ಖಾಯಂ. ದಿನಾ ಜಗಳ, ಬೀದಿ ರಂಪಾಟ ಇವೆಲ್ಲಾ ಸಾಮಾನ್ಯ. ತನ್ನ ಗಂಡ ಬೇರೆ ಮಹಿಳೆ ಬಗ್ಗೆ ಮಾತನಾಡಿದ್ರೆನೇ ಸಹಿಸೋದಿಲ್ಲ. ಎಲ್ಲೋ ಅಪರೂಪದಲ್ಲೇ ಅಪರೂಪಕ್ಕೆ ಹೊಂದುಕೊಂಡಿರೋ ಕೆಲವರನ್ನ ನೋಡಿದ್ದೇವೆ. ಅಂತಹದ್ರಲ್ಲಿ ಇಲ್ಲೊಬ್ಬ ಇನ್ನೂ 20 ವರ್ಷದ ಯುವಕ ಒಂದಲ್ಲಾ 2 ಅಲ್ಲ ಮೂವರನ್ನ ಮದುವೆಯಾಗಿದ್ದಾನೆ. ಈಗ ನಾಲ್ಕನೇ ಮದುವೆಗೂ ರೆಡಿಯಾಗಿದ್ದಾರೆ. ಆದ್ರೆ ವಿಚಿತ್ರ ಅಂದ್ರೆ ಗಂಡನ ನಾಲ್ಕನೇ ಮದುವೆ ಮೂವರು ಪತ್ನಿಯರು ಸಪೋರ್ಟ್ ಮಾಡ್ತಿರೋದು..!
ಹೌದು ಈತನ ನಾಲ್ಕನೇ ಮದುವೆಗೆ ಆತನ ಮೂವರು ಪತ್ನಿಯರು ಸಾಥ್ ನೀಡ್ತಿದ್ದಾರೆ. ಅದ್ನಾನ್ ಎಂಬ ಈ ಯುವಕ ತನ್ನ 16ನೇ ವಯಸ್ಸಿನಲ್ಲೇ ಮೊದಲನೇ ಮದುವೆಯಾಗಿದ್ದ. ಅದಾದ ನಾಲ್ಕು ವರ್ಷಗಳ ನಂತರ ಎರಡನೇ ಹಾಗೂ ಮೂರನೇ ಮದುವೆಯಾಗಿದ್ದಾನೆ. ಇದೀಗ 4ನೇ ಮದುವೆಗಗೆ ರರೆಡಿಯಾಗಿದ್ದಾನೆ. ಇನ್ನೂ ಈತ ಸಾಲು ಸಾಲು ಮದುವೆಯಾಗುತ್ತಿರೋದಕ್ಕೆ ಕೊಟ್ಟಿರೋ ಕಾರಣ ಕೇಳಿದ್ರೆ ವಿಚಿತ್ರ ಎನ್ನಿಸುತ್ತೆ.
ಬಿಹಾರ ಮೂಲದ ನಟ ಅಕ್ಷತ್ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್: ನಟಿಯೊಬ್ಬಳ ಬಂಧನ..!
ಅದ್ನಾನ್ ಈ ಬಗ್ಗೆ ಮಾತನಾಡಿದ್ದು, ನಾನು ತಿಂಗಳಿಗೆ 1 ರಿಂದ 1.5 ಲಕ್ಷ ರೂಪಾಯಿ ದುಡಿಯುತ್ತೇನೆ. ಒಂದೊಂದು ಮದುವೆಯಾಗುತ್ತಿದ್ದಂತೆ ನನ್ನ ಆದಾಯ ಹೆಚ್ಚಾಗುತ್ತಲೇ ಹೋಗಿದೆ. ಹೀಗಾಗಿ ನಾನು ಇನ್ನೊಂದು ಮದುವೆಗೆ ಪ್ಲಾನ್ ಮಾಡಿದ್ದೇನೆ. ನನ್ನ ಮೂವರು ಪತ್ನಿಯರ ಹೆಸರು ಶುಂಭಲ್, ಶಬಾನಾ ಹಾಗೂ ಶಹಿದಾ. ನಾಲ್ಕನೇ ಪತ್ನಿಯಾಗಿ ಬರುವವಳ ಹೆಸರೂ ಎಸ್ ಅಕ್ಷರದಿಂದ ಪ್ರಾರಂಭವಾಗಲಿ ಎಂಬ ಆಸೆ ಇದೆ ಅಂತಾ ಹೇಳಿದ್ದಾನೆ.
‘ಶ್ರೀರಾಮನಾಗಿ’ ಅಭಿಮಾನಿಗಳಿಗೆ ಪ್ರಭಾಸ್ ದರ್ಶನ ಯಾವಾಗ ಗೊತ್ತಾ..!
ಅದರ ಅರ್ಥ ಈತ ನಾಲ್ಕನೇ ಮದುವೆಯಾಗೋದಕ್ಕೆ ಪ್ಲಾನ್ ಮಾಡಿದ್ದಾನೆ. ಆದ್ರೆ ಇನ್ನೂವರೆಗೂ ಹುಡುಗಿ ಹುಡುಕಿಲ್ಲ. ಅಲ್ಲದೇ ಎಸ್ ಅಕ್ಷರದಿಂದ ಶುರುವಾಗುವ ಹುಡುಗಿಯನ್ನ ಮದುವೆಯಾದ್ರೆ ಶುಭವಾಗುತ್ತೆ ಎಂಬ ನಂಬಿಕೆಯಿಂದ ಮತ್ತೊಂದು ಮದುವೆಗೆ ಸಜ್ಜಾಗಿದ್ದಾನೆ ಎಂಬುದು ಆತನ ಮಾತಿನಿಂದ ಸ್ಪಷ್ಟವಾಗಿ ತಿಳಿಯುತ್ತೆ.
special
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel