modi
ರುಪೇ ಕಾರ್ಡ್ ಹಂತ-2ನ್ನುಉದ್ಘಾಟನೆ ಮಾಡಿದ ಮೋದಿ
ನವದೆಹಲಿ: ರುಪೇ ಕಾರ್ಡ್ ಹಂತ-2ನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಭೂತಾನ್ ಪ್ರಧಾನಿ ಲೋತಾಯ್ ತ್ಸೆರಿಂಗ್ ಅವರು ಇಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಜಂಟಿಯಾಗಿ ಉದ್ಘಾಟನೆ ಮಾಡಿದ್ದಾರೆ. ಇದರಿಂದಾಗಿ ಭೂತಾನ್ ಕಾರ್ಡ್ ಗಳನ್ನು ಹೊಂದಿರುವವರು ಭಾರತದಲ್ಲಿ ರುಪೇ ನೆಟ್ವರ್ಕ್ ಪ್ರವೇಶಿಸಲು ಅನುಕೂಲವಾಗಲಿದೆ. ಇನ್ನೂ ಈ ಹಿಂದೆ ಅಂದ್ರೆ ಕಳೆದ ವರ್ಷ ಆಗಸ್ಟ್ ನಲ್ಲಿ ಭೂತಾನ್ ಗೆ ತೆರಳಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರುಪೇ ಕಾರ್ಡ್ ಹಂತ-1ನ್ನು ಉದ್ಘಾಟನೆ ಮಾಡಿದ್ದರು. ಇದೀಗ ಭೂತಾನ್ ಪ್ರಧಾನಮಂತ್ರಿಗಳ ಜೊತೆಗೂಡಿ ರುಪೇ ಕಾರ್ಡ್ ಹಂತ-2ನ್ನು ಉದ್ಘಾಟನೆ ಮಾಡಿದ್ದಾರೆ. 
ರುಪೇ ಕಾರ್ಡ್ ಉದ್ಘಾಟನೆ ಬಳಿಕ ಮಾತನಾಡಿದ ನರೇಂದ್ರ ಮೋದಿ ಅವರು, ಭೂತಾನ್ ನ ಬಾಹ್ಯಾಕಾಶ ಯೋಜನೆ ಕ್ಷಿಪ್ರಗತಿಯಲ್ಲಿ ಮುಂದುವರೆಯುತ್ತಿರುವುದು ಸಂತಸ ತಂದಿದೆ. COVID-19 ಸಾಂಕ್ರಾಮಿಕ ರೋಗದ ಈ ಕಷ್ಟದ ಸಮಯದಲ್ಲಿ ಭಾರತವು ಭೂತಾನ್ನೊಂದಿಗೆ ನಿಲ್ಲಲಿದೆ. ನೆರೆಯ ರಾಷ್ಟ್ರದ ಅವಶ್ಯಕತೆಗಳನ್ನು ಪೂರೈಸುವುದು, ಭಾರತದ ಮೊದಲ ಆದ್ಯತೆಯಾಗಿರುತ್ತದೆ ಎಂದಿದ್ದಾರೆ. ಇದೇ ವೇಳೆ ಭಾರತ-ಭೂತಾನ್ ನಡುವಿನ ಸಾವಿರಾರು ವರ್ಷಗಳ ರಾಜತಾಂತ್ರಿಕ ಹಾಗೂ ಸಾಂಸ್ಕೃತಿಕ ಸಂಬಂಧ ಎರಡೂ ರಾಷ್ಟ್ರಗಳನ್ನು ಸದಾಕಾಲ ಒಟ್ಟಿಗೆ ಮುನ್ನಡೆಯುವಂತೆ ಪ್ರೇರೇಪಿಸುತ್ತವೆ. ಭಾರತ, ಭೂತಾನ್ ಸಂಬಂಧ ಅತ್ಯಂತ ಗಟ್ಟಿಯಾದುದು. ಮುಂದಿನ ವರ್ಷ ಇಸ್ರೋ ಸಹಾಯದೊಂದಿಗೆ ಭೂತಾನ್ ತನ್ನ ಮೊದಲ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಇದಕ್ಕಾಗಿ ಭೂತಾನ್ ರಾಷ್ಟ್ರದ ನಾಲ್ವರು ಬಾಹ್ಯಾಕಾಶ ಎಂಜಿನಿಯರ್ ಗಳು ಇಸ್ರೋ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿದ ಮೋದಿ , ಭೂತಾನ್ನಲ್ಲಿ ರುಪೇ ಕಾರ್ಡ್ಗಳ ಹಂತ -1 ರ ಬಿಡುಗಡೆಯು ಭಾರತದ ಪ್ರವಾಸಿಗರಿಗೆ ಭೂತಾನ್ನಾದ್ಯಂತ ಎಟಿಎಂ ಮತ್ತು ಪಾಯಿಂಟ್ ಆಫ್ ಸೇಲ್ ಟರ್ಮಿನಲ್ಗಳನ್ನು ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ. ಎರಡನೇ ಹಂತವು ಇದೀಗ ಭೂತಾನ್ ಕಾರ್ಡ್ ಹೊಂದಿರುವವರಿಗೆ ಭಾರತದಲ್ಲಿ ರುಪೇ ನೆಟ್ವರ್ಕ್ ಪ್ರವೇಶಿಸಲು ಅವಕಾಶ ನೀಡುತ್ತದೆ ಎಂದು ತಿಳಿಸಿದ್ದಾರೆ.
ಯುಪಿಯಲ್ಲಿ ‘ ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ರಚನೆಗೆ ಯೋಗಿ ಸರ್ಕಾರ ಸಜ್ಜು..!
modi
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








